insane logic behind Jewellery items worn by Indian women

ತರ್ಕಕ್ಕೆ ನಿಲುಕದ್ದು: ಯಕ್ಷ ಪ್ರಶ್ನೆಯಂತೆ ಕಾಡುವ ‘ಆಭರಣಗಳ’ ರಹಸ್ಯ

ಭಾರತೀಯ ನಾರಿಯರನ್ನು ಆಭರಣಗಳ ಹೊರತಾಗಿ ನೋಡುವುದು ಅತಿ ಅಪರೂಪ. ಇದಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಅದರಲ್ಲೂ ಕೆಲವು ಆಭರಣಗಳು ನಾರಿಯ ಸಾಮಾಜಿಕ ಸ್ಥಾನವನ್ನು ಪ್ರಕಟಿಸುತ್ತದೆ. ಉದಾಹರಣೆಗೆ ತಾಳಿ ಅಥವಾ ಮಂಗಳಸೂತ್ರ. ಇದು ಆಕೆ ವಿವಾಹಿತೆ ಎಂಬುದನ್ನು ಸಮಾಜಕ್ಕೆ ತಿಳಿಸುತ್ತದೆ. ಅಂತೆಯೇ ಬೆಳ್ಳಿಯ ಕಾಲುಂಗುರ ವಿವಾಹಿತ ಮಹಿಳೆ ಹಿಂದೂ ಧರ್ಮಕ್ಕೆ ಸೇರಿದವಳು ಎಂಬುದನ್ನು ತೋರಿಸುತ್ತದೆ. ನಿಮ್ಮ ಆಭರಣಗಳ ಜೋಪಾನಕ್ಕಾಗಿ 6 ಸಲಹೆಗಳು

ಆಕೆ ಎಷ್ಟು ಬಡವಳೇ ಇರಲಿ, ಆಕೆಯ ತಂದೆ ಅಥವಾ ಪತಿಯ ಸಾಮರ್ಥ್ಯಕ್ಕೆ ಅನುಗುಣವಾದ ಒಂದೆರಡಾದರೂ ಬೆಲೆಬಾಳುವ ಆಭರಣಗಳು ಆಕೆಯ ಶರೀರದ ಮೇಲಿದ್ದು ಒಂದು ಅವಿಭಾಜ್ಯ ಅಂಗವಾರುತ್ತದೆ. ಆಭರಣಗಳ ಬಗ್ಗೆ ಇತಿಹಾಸ ಕೆದಕಿದರೆ ಪ್ರತಿ ಆಭರಣವನ್ನು ತೊಡಲು ಕೆಲವು ತಾರ್ಕಿಕ ಕಾರಣಗಳನ್ನು ನೀಡಲಾಗುತ್ತದೆ.

ಅಚ್ಚರಿ ಎಂದರೆ ಇದರಲ್ಲಿ ಬಹುತೇಕ ಆಭರಣಗಳ ತರ್ಕ ವಿವಾಹಿತೆಯರಿಗೇ ಮೀಸಲಾಗಿದೆ. ಇವುಗಳ ಬಗ್ಗೆ ನಿಮಗೂ ಕೂತೂಹಲ ಮೂಡಿತೇ? ಬನ್ನಿ ಕೆಳಗಿನ ಸ್ಲೈಡ್ ಶೋ ಮೂಲಕ ಒಂದೊಂದಾಗಿ ಈ ಆಭರಣಗಳ ಬಗ್ಗೆ ತಿಳಿದುಕೊಳ್ಳುತ್ತಾ ಸಾಗೋಣ…

ಕಿವಿಯೋಲೆಗಳು

ಒಂದು ಪ್ರಾಚೀನ ದೃಷ್ಟಾಂತದ ಪ್ರಕಾರ ದುಷ್ಟಶಕ್ತಿಗಳು ಮಹಿಳೆಯರ ಕಿವಿಯ ಮೂಲಕ ದೇಹವನ್ನು ಪ್ರವೇಶಿಸುತ್ತವೆ. ಕಿವಿಗೆ ಆಭರಣವನ್ನು ಧರಿಸುವ ಮೂಲಕ ದುಷ್ಟಶಕ್ತಿಯ ಕಣ್ಣು ಕುಕ್ಕಿದಂತಾಗಿ ಕಿವಿಯೊಳಗೆ ಪ್ರವೇಶ ಪಡೆಯಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಕಿವಿಯೋಲೆಗಳನ್ನು ದುಷ್ಟಶಕ್ತಿಗಳ ವಿರುದ್ಧ ಹೋರಾಡುವ ಆಯುಧ ಎಂದೂ ಕರೆಯಬಹುದು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಅಷ್ಟೇ ಅಲ್ಲದೆ ಕಿವಿಯ ಈ ಭಾಗದಲ್ಲಿನ ನರವು ಗರ್ಭಕೋಶಕ್ಕೆ ಸಂಪರ್ಕಿಸುವುದರಿಂದ ಮಹಿಳೆಯರಿಗೆ ಸಂತಾನಭಾಗ್ಯ ಪ್ರಾಪ್ತಿಯಾಗುವುದು ಎಂದು ನಂಬಲಾಗಿದೆ. ಅದೇ ಹುಡುಗರಿಗೆ ಕಿವಿಯ ಈ ನರವು ಕಣ್ಣಿಗೆ ಸಂಪರ್ಕ ನೀಡುವುದರಿಂದ ಉತ್ತಮವಾದ ದೃಷ್ಟಿಯನ್ನು ಪಡೆಯಬಹುದು ಎಂದು ನಂಬಲಾಗಿದೆ.

ಉಂಗುರ

ವಿವಾಹಿತ ಮಹಿಳೆಯರು ತಮ್ಮ ಎಡಗೈಯ ಉಂಗುರ ಬೆರಳಿಗೆ (ತೋರುಬೆರಳಿನ ಪಕ್ಕದ ಪಕ್ಕದ್ದು) ಉಂಗುರವೊಂದನ್ನು ಧರಿಸುವ ಮೂಲಕ ತಾವು ವಿವಾಹಿತೆ ಎಂಬುದನ್ನು ಪ್ರಚುರಪಡಿಸುತ್ತಾರೆ. ಇದಕ್ಕೆ ಕಾರಣವೇನೆಂದರೆ ಈ ಬೆರಳಿನಿಂದ ಹೊರಟ ನರ ನೇರವಾಗಿ ಹೃದಯಕ್ಕೇ ಸೇರುವುದರಿಂದ ಇದು ನಲ್ಲನ ಹೃದಯದಲ್ಲಿ ಸ್ಥಾನಪಡೆಯಲು ಅತಿ ಹತ್ತಿರದ ದಾರಿಯಾಗಿದೆ ಎಂದು ನಂಬಲಾಗಿದೆ.

ಆದರೆ ಬೇರೆ ಬೆರಳು ಅಥವಾ ಅಂಗಗಳಲ್ಲಿರುವ ನರಗಳು ಎಲ್ಲಿ ಹೋಗಿ ತಲುಪುತ್ತವೆ? ಅವೂ ಹೃದಯಕ್ಕೇ ತಲುಪುವುದು. ಆದರೆ ಉಂಗುರ ಬೆರಳಿನ ನರ ಅತಿ ಕಡಿಮೆ ಅಂತರ ಹೊಂದಿದೆ ಎನ್ನುತ್ತಾರೆ.

ಕಾಲುಗೆಜ್ಜೆ

ಕಾಲುಗೆಜ್ಜೆ ಅಥವಾ ಕಾಲ್ಗೆಜ್ಜೆ ಎಂದು ಕರೆಯಲ್ಪಡುವ ಈ ಆಭರಣ ಪಾದದ ಮೇಲಿನ ಗಂಟಿನ ಸುತ್ತಲೂ ಬರುವಂತೆ ಕಟ್ಟಲಾಗುತ್ತದೆ. ನವವಧು ಈ ಆಭರಣಗಳನ್ನು ತೊಟ್ಟು ಪತಿಯ ಮನೆಗೆ ಪ್ರಥಮ ಹೆಜ್ಜೆ ಇಡಬೇಕು.

ಚಿಕ್ಕ ಚಿಕ್ಕ ಗೆಜ್ಜೆಗಳನ್ನು ಅಳವಡಿಸಿರುವುದರಿಂದ ಇದರಿಂದ ಹೊರಡುವ ನಾದ ಪತಿಯರಿಗೆ ತಮ್ಮ ಪತ್ನಿಯರು ತಮ್ಮ ಬಳಿಗೆ ಬರುತ್ತಿದ್ದಾರೆ ಎಂದು ನೀಡುವ ಸಂದೇಶವಾಗಿದೆ.

ಕೈಬಳೆ

ವಿವಾಹಿತೆಯರ ಕೈಗಳಲ್ಲಿರುವ ಬಳೆಗಳು ಅದೃಷ್ಟವನ್ನು ತರುವ ಮತ್ತು ರಕ್ಷಣೆಯನ್ನು ಒದಗಿಸುವ ಆಯುಧಗಳಾಗಿವೆ. ಇದು ಮಹಿಳೆಯ ಶಕ್ತಿ, ಸಾಮರ್ಥ್ಯವನ್ನೂ ತಿಳಿಸುತ್ತದೆ. ರಾಜಸ್ತಾನದ ಮಾರವಾಡಿ ಮಹಿಳೆಯರು ಮೊಣಕೈಗಳವರೆಗೂ ದಪ್ಪನೆಯ ಬಳೆಗಳನ್ನು ತೊಡುತ್ತಾರೆ. ವಿವಾಹಿತ ಮಹಿಳೆಯರು ಸದಾ ಒಂದಲ್ಲಾ ಒಂದು ಕೆಲಸದಲ್ಲಿ ಮಗ್ನರಾಗಿದ್ದಾಗ ಒಂದಕ್ಕೊಂದು ತಗುಲಿ ಬರುವ ಶಬ್ದ ಸಹಾ ಸಕ್ರಿಯವಾಗಿರುವುದರ ಸಂಕೇತವಾಗಿದೆ.

ಡಾಬು

ಸೊಂಟದ ಪಟ್ಟಿ, ಡಾಬು ಅಥವಾ ಕಮರ್ಬಂದ್ ಎಂದು ಕರೆಯಲ್ಪಡುವ ಈ ಆಭರಣ ಸಾಮಾನ್ಯವಾಗಿ ಮನೆಯ ಹಿರಿಯ ಸ್ಥಾನದಲ್ಲಿರುವ ಮಹಿಳೆಯರು ತೊಡುತ್ತಾರೆ. ಏಕೆಂದರೆ ಮನೆಯ ತಿಜೋರಿಯ ಬೀಗದ ಕೈ ಇವರ ಸುಪರ್ದಿಯಲ್ಲಿದ್ದು ತಮ್ಮ ಯಜಮಾನಿಕೆಯನ್ನು ಇವರ ಆ ಬೀಗದ ಕೈಯನ್ನು ಪ್ರದರ್ಶಿಸುವ ಮೂಲಕ ತೋರುತ್ತಾರೆ. ಈ ಬೀಗದ ಕೈಯನ್ನು ಸಿಕ್ಕಿಸಿಕೊಳ್ಳಲು ಡಾಬು ನೆರವಾಗುತ್ತದೆ.

ತಾಳಿ

ತಾಳಿ ಅಥವಾ ಮಂಗಳಸೂತ್ರ ವಿವಾಹಿತೆಯ ಪಾತಿವ್ರತೆಯ ಸಂಕೇತವಾಗಿದ್ದು ಪತಿ ಜೀವಂತವಿರುವಷ್ಟೂ ದಿನ ಕಡ್ಡಾಯವಾಗಿ ಧರಿಸಬೇಕಾಗುತ್ತದೆ.

ಸ್ನಾನ ಮೊದಲಾದ ವೇಳೆಗಳ ಹೊರತು ವಿವಾಹಿತೆಯರು ತಮ್ಮ ಕೊರಳಿನಿಂದ ಕೆಳಗಿಳಿಸುವುದೇ ಇಲ್ಲ. ಮಂಗಳಸೂತ್ರವನ್ನು ಧರಿಸಿರುವ ಮಹಿಳೆ ಈಗಾಗಲೇ ವಿವಾಹಿತೆಯಾಗಿದ್ದು ಒಂದು ಮನೆಯ ಸೊಸೆಯಾಗಿದ್ದಾಳೆ ಎಂಬುದನ್ನು ಸಮಾಜಕ್ಕೆ ಸ್ಪಷ್ಟಪಡಿಸುವ ಸಂಕೇತವೂ ಆಗಿದೆ.

ಕಾಲುಂಗುರ

ಬೆಳ್ಳಿ ಕಾಲುಂಗುರವನ್ನು ಹಿಂದೂ ಮಹಿಳೆಯರು ವಿವಾಹದ ಬಳಿಕ ಕಾಲಿನ ಎರಡನೆಯ ಬೆರಳಿಗೆ ತೊಟ್ಟುಕೊಳ್ಳುತ್ತಾರೆ. ಸಾಮಾನ್ಯವಾಗಿ ಬೆಳ್ಳಿಯಿಂದ ಮಾಡಲಾಗಿರುವ ಈ ಉಂಗುರ ಯಾವುದೇ ಕುಸುರಿ ಅಥವಾ ಪದಕವಿಲ್ಲದಿದ್ದು ಪರಪುರುಷರಲ್ಲಿ ತಪ್ಪು ಪ್ರಲೋಭನೆಗಳನ್ನು ಉಂಟುಮಾಡದಿರಲು ಕಾರಣ ಎಂದು ನಂಬಲಾಗಿದೆ.

ಹಣೆಬೊಟ್ಟು

ಹಣೆಬೊಟ್ಟು ಅಥವಾ ಮಾಂಗ್ ಟಿಕ್ಕಾ ಎಂದು ಕರೆಯಲಾಗುವ ಈ ಆಭರಣವನ್ನು ವಿಶೇಷವಾದ ಸಂದರ್ಭದಲ್ಲಿ ಮಾತ್ರ ತೊಡಲಾಗುತ್ತದೆ. ಹಣೆಯ ಬೈತಲೆಯನ್ನು ಬೇರ್ಪಡಿಸುವಲ್ಲಿ ಪದಕವೊಂದು ಬರುವಂತೆ ಮೂರು ಎಳೆಗಳು ತಲೆಯ ನಡು ಮತ್ತು ಅಕ್ಕಪಕ್ಕಗಳಿಂದ ಹಿಡಿದಿಡುವ ಈ ಆಭರಣ ಪತಿಪತ್ನಿಯರ ಬಾಂಧವ್ಯವನ್ನು ಹೆಚ್ಚಿಸುವ ಆಭರಣವಾಗಿದೆ.

ಈ ಆಭರಣವನ್ನು ಅಜ್ಞಚಕ್ರ (ಸಂಸ್ಕೃತದಲ್ಲಿ ಅರ್ಧಮಾಡಿಕೋ ಎಂಬ ಅರ್ಥ ಬರುತ್ತದೆ) ಎಂದು ಭಾವಿಸಲಾಗಿದ್ದು ಪತಿಪತ್ನಿಯರ ನಡುವೆ ದೈಹಿಕ ಮತ್ತು ಭಾವಪರವಶತೆಯ ಸಂಬಂಧ ಹೆಚ್ಚುತ್ತದೆ ಎಂದು ನಂಬಲಾಗಿದೆ.

ಮೂಗುತಿ

ಮೂಗುತಿ ಅಥವಾ ನತ್ತ್ ಎಂದು ಕರೆಯಲಾಗುವ ಈ ಆಭರಣವನ್ನು ಹಲವು ಶತಮಾನಗಳಿಂದ ಭಾರತೀಯ ನಾರಿಯರು ತೊಡುತ್ತಾ ಬಂದಿದ್ದಾರೆ. ಮೂಗಿನ ಬಲ ಅಥವ ಎಡ ಹೊಳ್ಳೆಯಲ್ಲಿ ಚಿಕ್ಕ ತೂತೊಂದನ್ನು ಮಾಡಿ ಈ ಆಭರಣವನ್ನು ಧರಿಸಲಾಗುತ್ತದೆ. ಆಯುರ್ವೇದದ ಪ್ರಕಾರ ಎಡಹೊಳ್ಳೆಯಲ್ಲಿ ಮೂಗುತಿ ಧರಿಸಿದ ಮಹಿಳೆ ತನ್ನ ಮಾಸಿಕ ದಿನಗಳಲ್ಲಿ ಅತಿ ಕಡಿಮೆ ನೋವನ್ನು ಅನುಭವಿಸುತ್ತಾಳೆ ಹಾಗೂ ಹೆರಿಗೆ ಸುಲಭವಾಗಿ ಆಗುತ್ತದೆ.

ಇನ್ನೊಂದು ಪ್ರಾಚೀನ ನಂಬಿಕೆಯ ಪ್ರಕಾರ ಮೂಗುತಿ ಧರಿಸಿರುವ ಮಹಿಳೆ ಇನ್ನೂ ಕನ್ಯೆಯಾಗಿದ್ದು ಸೂಕ್ತ ವರನಿಗಾಗಿ ಕಾಯುತ್ತಿದ್ದಾಳೆ. ವಿವಾಹದ ಬಳಿಕ ಈ ಮೂಗುತಿಯನ್ನು ತೆಗೆದುಬಿಡುವುದರಿಂದ ಈಕೆಯ ವಿವಾಹವಾಗಿದೆ ಎಂದು ಸೂಚಿಸುವ ಕ್ರಮವೂ ಆಗಿದೆ.
insane logic behind Jewellery items worn by Indian women: http://kannada.boldsky.com/

ಇವುಗಳೂ ನಿಮಗಿಷ್ಟವಾಗಬಹುದು

ಶಬರಿ ಕೇಳುತ್ತಾಳೆ

ರಾವಣನನ್ನು ಸಂಹಾರ ಮಾಡುವ ನೆಪದಿಂದಲಾದರೂ ನೀನು ಇಲ್ಲಿಗೆ ಬಂದೆಯಲ್ಲ, ಇಲ್ಲ ಅಂದರೆ ಎಲ್ಲಿ ಬರುತ್ತಿದ್ದೆ ಸ್ವಾಮಿ? ಶ್ರೀರಾಮ ಸ್ವಲ್ಪ ಗಂಭೀರ …

Leave a Reply

Your email address will not be published. Required fields are marked *