Thursday , 13 June 2024

ಆದಿವಾಸಿ ಜಾನಪದ

ಪ್ರವೇಶ ‘ಬರಹ’ಕ್ಕೆ ಅದಿಕೃತತೆ ಬರುವ ಮುಂಚೆ ‘ಮಾತು’ ಲೋಕದ ಎಲ್ಲಾ ತಿಳುವಳಿಕೆಯನ್ನು ತನ್ನಲ್ಲಿಯೇ ಅಡಗಿಸಿಕೊಂಡು, ಒಂದು ತಲೆಮಾರಿನಿಂದ ಮತ್ತೊದು ತಲೆಮಾರಿಗೆ ಪ್ರಸರಣವಾಗುತ್ತಿತ್ತು. ‘ಬರಹ’ ಇಂತಹ ಮಾತಿನ ತಿಳುವಳಿಕೆಯನ್ನು ಸಂಕೇತಗಳಲ್ಲಿ ಉಳಿಸಲಾರಂಬಿಸಿತು. ಇದು ಜಾಗತಿಕವಾಗಿ ಘಟಿಸಿದ ಮಹಾಪಲ್ಲಟ. ಇದರಿಂದಾಗಿ ‘ಮಾತು’ ಪಡೆದ ಅದಿಕೃತ ಬರಹಕ್ಕೆವರ್ಗವಾಯಿತು. ‘ಬರಹ’ ತನ್ನ ದೀರ್ಘಕಾಲೀನ ಬಾಳಿಕೆಯ ಕಾರಣಕ್ಕೆ ಮಾತಿಗಿಂತ ಮೇಲುಗೈ ಸಾದಿಸಿತು. ಆನಂತರ ಈ ತನಕ ಮಾತು ಮತ್ತು ಬರಹ ಜೊತೆಜೊತೆಯಲ್ಲೇ ಸಾಗಿಬರುತ್ತಿವೆ. ಮಾತುಗಳಲ್ಲಿರುವ ಜನಸಾಮಾನ್ಯರ ತಿಳುವಳಿಕೆಯು ‘ಬರಹ’ ರೂಪಕ್ಕೆ ಬಂದು ಬರಹ ಓದುವ ಜನವರ್ಗದಲ್ಲಿ ಸಂವಹನಗೊಳ್ಳುತ್ತಿದೆ. ಆದರೆ ಲೋಕದ ಚರಿತ್ರೆಯನ್ನು ಗ್ರಹಿಸುವಾಗ ಇಂತಹ ಮಾತಿನಲ್ಲಿರುವ ಲೋಕಜ್ಞಾನ ಕಡೆಗಣಿಸಲ್ಪಟ್ಟು, ಬರಹ ರೂಪದ ಜ್ಞಾನ ಪರಿಗಣನೆಗೆ ಒಳಗಾಗುತ್ತಿದೆ. ಇಂತಹ ಬರಹವೂ ಕೂಡ ಮಾತಿನಿಂದ ರೂಪಿಸಲ್ಪಟ್ಟದ್ದು ಎಂಬುದನ್ನು ಮರೆಯುವಂತಿಲ್ಲ. ಹೀಗೆ ಮಾತು ಮತ್ತು ಬರಹದ ನಡುವಿನ ಶ್ರೇಣೀಕರಣ ಕಾಲದಿಂದ ಕಾಲಕ್ಕೆ ಪಲ್ಲಟಗೊಳ್ಳುತ್ತಾ ಬಂದಿದೆ. ಜಾಗತಿಕ ಜಾನಪದ ಅಧ್ಯಯನಗಳು ಶೋಧಿಸುತ್ತಿರುವುದು ಇಂತಹ ಶ್ರೇಣೀಕರಣದ ಹಲವು ಮಾದರಿಗಳನ್ನೆ. ಕಾಲ, ದೇಶಕ್ಕನುಗುಣಾಗಿ ‘ಮಾತು’ ‘ಬರಹ’ ಕುರಿತ ಆಲೋಚನ ವಿನ್ಯಾಸಗಳು ಬದಲಾದರೂ, ಮೌಖಿಕ ಪರಂಪರೆಯ ಚರಿತ್ರೆಯನ್ನು ಹಲವು ಸ್ತರಗಳಲ್ಲಿ ಕಟ್ಟುತ್ತಾ ಬರುತ್ತಿವೆ. ಹೊತ್ತಿನ ಜಾನಪದ ಅಧ್ಯಯನಗಳು ಮೌಖಿಕ ಪರಂಪರೆಯ ಹತ್ತಾರು ಹೊಸ ಸಾಧ್ಯತೆಗಳ ಕಡೆ ಬೆಳಕು ಚೆಲ್ಲಬೇಕಾಗಿದೆ. ಕನರ್ಾಟಕದ ಸಂಸ್ಕೃತಿಯನ್ನು ನಿರ್ವಚಿಸುವಾಗಲೂ ಶಾಸನ, ಹಸ್ತಪ್ರತಿ, ಕೃತಿ ರೂಪದ ಬರಹದ ಸಾಹಿತ್ಯವನ್ನೇ ಪ್ರಧಾನ ಎಂದು ಭಾವಿಸಲಾಗಿದೆ. ಯಾವುದನ್ನು ಕನರ್ಾಟಕದ ಸಾಂಸ್ಕೃತಿಕ ಚರಿತ್ರೆಯ ಅದಿಕೃತ ದಾಖಲೆಗಳು ಎಂದು ಪರಿಭಾವಿಸಲಾಗಿದೆಯೋ ಅಂತಹವುಗಳ ಒಳಗೇ ಮಾತಿನ ಪರಂಪರೆಯ ಕುರುಹುಗಳಿವೆ. ಹಲ್ಮಿಡಿ ಶಾಸನದಿಂದ ಕವಿರಾಜಮಾರ್ಗಕಾರನ ಬರಹರೂಪದ ಸಾಹಿತ್ಯದಿಂದಲೂ ಮೌಖಿಕ ರೂಪಗಳನ್ನು ಗುರುತಿಸುವ ಅಧ್ಯಯನಗಳು ಕನರ್ಾಟಕದಲ್ಲಿ ಸಾಕಷ್ಟು ನಡೆದಿವೆ. ಬಗೆಯ ಆಲೋಚನಾ ವಿನ್ಯಾಸದಿಂದಾಗಿ ಕನ್ನಡ ಚಿಂತನೆಯನ್ನು ಬಹುತ್ವಗಳಲ್ಲಿ ನಿರ್ವಚಿಸಲು ಸಾಧ್ಯವಾಗಿದೆ. ಕನರ್ಾಟಕದಲ್ಲಿ ಮೌಖಿಕ ಪರಂಪರೆಯ ಕುರಿತ ಅಧ್ಯಯನದ ಆಸಕ್ತಿ ಮೊಳೆತು ಎರಡು ಶತಮಾನಗಳೇ ಕಳೆದಿವೆ. ಹೀಗೆ ಮೌಖಿಕ ಪರಂಪರೆ ಕುರಿತ ಇಷ್ಟು ದೀರ್ಘಕಾಲೀನ ಅಧ್ಯಯನಗಳು ಕನರ್ಾಟಕದ ಸಾಂಸ್ಕೃತಿಕ ರೂಪವನ್ನು ಬರಹದ ದಾಖಲೆಗಳ ಮೂಲಕ ಕಟ್ಟಿದ ರೂಪಕ್ಕಿಂತ ಬಿನ್ನವಾಗಿ ಚಿತ್ರಿಸಿವೆ. ಇಂತಹ ರೂಪಗಳನ್ನು ಸ್ಪಷ್ಟ ಆಕಾರದಲ್ಲಿ ಕಾಣಲು ಕನರ್ಾಟಕದಲ್ಲಿ ನಡೆದ ಜಾನಪದ ಅಧ್ಯಯನಗಳ ಕುರಿತ ಸಂಶೋಧನೆಗಳು ನಡೆಯಬೇಕಿದೆ. ಹಾಗಾದಲ್ಲಿ ‘ಮಾತಿನ ಕನರ್ಾಟಕ’ದ ಆಲೋಚನಾ ಕ್ರಮ ‘ಬರಹದ ಕನರ್ಾಟಕ’ಕ್ಕಿಂತ ಹೇಗೆ ಬಿನ್ನ ಎಂದು ಗುರುತಿಸಲು ಸಾಧ್ಯವಾಗುತ್ತದೆ. 1.2. ಅಧ್ಯಯನದ ಉದ್ದೇಶ ಮತ್ತು ಮಹತ್ವೊೊ ಸಮಾಜ, ಸಂಸ್ಕೃತಿ, ಮನುಷ್ಯ ಸಂಬಂಧಗಳನ್ನು ಅರ್ಥಮಾಡಿಕೊಳ್ಳಲು ಮಾನವಿಕ ವಿಜ್ಞಾನದ ಅನೇಕ ಶಾಖೆಗಳು ಬೇರೆ ಬೇರೆ ನೆಲೆಗಳಲ್ಲಿ ಶೋದಿಸುತ್ತಿವೆ. ಇಂತಹ ಜ್ಞಾನಶಾಖೆಗಳು ಜಾಗತಿಕವಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ವಲಸೆ ಹೊರಟು ಅಲ್ಲಲ್ಲಿಯೇ ನೆಲೆಸುತ್ತವೆ. ಹೀಗೆ ಯೂರೋಪ್ನಿಂದ ಭಾರತಕ್ಕೆ ವಲಸೆ ಬಂದ ಜ್ಞಾನಶಾಖೆಗಳಲ್ಲಿ ಜಾನಪದ ಅಧ್ಯಯನವೂ ಒಂದು. ಯಾವುದೇ ಜ್ಞಾನಶಾಖೆಯು ಒಂದು ಮೂಲ ಅರ್ಥವನ್ನು ಹೊಂದಿರುತ್ತಾದರೂ, ಅದು ಪ್ರವೇಶಿಸಿದ ದೇಶೀಯ ಪರಿಕರಗಳ ಮೂಲಕ ತನ್ನ ಮೂಲ ಅರ್ಥದಿಂದ ಮುಂಚಲಿಸಿ ತಾನು ನೆಲೆಸಿದ ಪರಿಸರದ ವೈಶಿಷ್ಟ್ಯತೆಗಳನ್ನು ಮೈಗೂಡಿಸಿಕೊಂಡು ಜ್ಞಾನಶಾಖೆಯೊಂದು ಹೊಸದಾಗುತ್ತಿರುತ್ತದೆ. ಅದೇ ಹೊತ್ತಿಗೆ ಒಂದು ಜ್ಞಾನಶಾಖೆಯು ತನ್ನ ಮೂಲದಿಂದಲೇ ಎಲ್ಲವನ್ನು ಅಥರ್ೈಸುವ ಹಠಮಾಡುತ್ತಿರುತ್ತದೆ. ಎರಡೂ ವೈರುಧ್ಯಗಳಲ್ಲಿ ಮೂಲನಿಷ್ಠತೆ ಮತ್ತು ಅನ್ಯವನ್ನು ತನ್ನದಾಗಿಸಿಕೊಂಡು ಪೊರೆಕಳಚುವ ಪ್ರಕ್ರಿಯೆ ಏಕಕಾಲದಲ್ಲಿ ನಡೆಯುತ್ತದೆ. ಕನ್ನಡದಲ್ಲಿ ಭಾಷಾಶಾಸ್ತ್ರಜ್ಞ ಡಿ.ಎನ್.ಶಂಕರಭಟ್ಟರು ‘ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ’ ಎಂದು ಹುಡುಕುವುದು, ಕೆ.ವಿ.ನಾರಾಯಣ ಅವರು ‘ಇನ್ನು ಕನ್ನಡಿಗಳು ಸಾಕು’ ಎಂದು ಸ್ವಂತಿಕೆಯ ನೆಲೆಗಳನ್ನು ಶೋದಿಸುವುದು, ರಹಮತ್ ತರೀಕೆರೆ ಅವರು ‘ಪಶ್ಚಿಮದ ಸಂಸ್ಕೃತಿ’ ನಿರ್ವಚನವನ್ನು ಮುರಿದು ಕಟ್ಟುತ್ತ ‘ಪ್ರತಿ ಸಂಸ್ಕೃತಿ’ಯ ಸಾಧ್ಯತೆಗಳನ್ನು ವಿಸ್ತರಿಸುವುದು, ಹಿ.ಶಿ.ರಾಮಚಂದ್ರೇಗೌಡರು ‘ನಮ್ಮ ಹಣತೆಗಳೇಕೆ ಉರಿಯುತ್ತಿಲ್ಲ’ ಎಂದು ಪ್ರಶ್ನಿಸಿಕೊಳ್ಳುವುದು ಇವುಗಳೆಲ್ಲಾ ಕನ್ನಡಕ್ಕೆ ಬೇಕು ಕನ್ನಡದ್ದೇ ಚಿಂತನಾಕ್ರಮ ಎಂಬ ಸ್ವಂತಿಕೆಯನ್ನು ಹುಡುಕುವ ಹಂಬಲಗಳಾಗಿವೆ. ಕನರ್ಾಟಕದಲ್ಲಿ ಮಾನವಿಕ ವಿಜ್ಞಾನದ ಶಾಖೆಗಳ ಅಧ್ಯಯನದ ತಾತ್ವಿಕತೆಯನ್ನು ಹುಡುಕುವುದೆಂದರೆ, ಅದು ಕನ್ನಡದ್ದೇ ಚಿಂತನೆಯ ಶೋಧವೂ ಆಗಬೇಕಿದೆ. ಜಾನಪದ ಅಧ್ಯಯನ ಶಾಖೆ ಕೂಡ ಕನ್ನಡಕ್ಕೆ ಪ್ರವೇಶಿಸಿದ್ದು ಪಶ್ಚಿಮದಿಂದ. ಈಗ ಕನರ್ಾಟಕದಲ್ಲಾದ ಜಾನಪದ ಅಧ್ಯಯನಗಳ ತಾತ್ವಿಕತೆಯನ್ನು ಹುಡುಕುವುದರ ಹಿಂದಿನ ಹಂಬಲ ಕನ್ನಡಕ್ಕೆ ಬೇಕು ಕನ್ನಡದ್ದೇ ಜಾನಪದ ಅಧ್ಯಯನ ಕ್ರಮ ಎನ್ನುವಂತಹದು. ಇದು ಅನ್ಯ ಮತ್ತು ಸ್ವಂತಿಕೆಯ ಮುಖಾಮುಖಿ. ಪ್ರಸ್ತುತ ಅಧ್ಯಯನ ಪ್ರಧಾನವಾಗಿ ಈ ಮೇಲಿನ ಚಿಂತನಾ ಕ್ರಮದಿಂದ ರೂಪುಗೊಂಡಿದೆ. ಅಂದರೆ ಕನ್ನಡದ್ದೇ ಜಾನಪದ ಅಧ್ಯಯನ ಕ್ರಮಗಳನ್ನು ಹುಡುಕುವ ಪ್ರೇರಣೆಯು ಈ ಅಧ್ಯಯನದ ಮುಖ್ಯ ಹಂಬಲವಾಗಿದೆ. ಉಳಿದಂತೆ ಈ ಅಧ್ಯಯನಕ್ಕಿರುವ ಕೆಲವು ಉದ್ದೇಶಗಳನ್ನು ಈ ಕೆಳಗಿನಂತೆ ಪಟ್ಟಿಮಾಡಬಹುದು.

1. ಕರ್ನಾಟಕದಲ್ಲಿ ಜಾನಪದ ಅಧ್ಯಯನ ಒಂದು ಪ್ರಮುಖ ಜ್ಞಾನಶಿಸ್ತಾಗಿ ಹೊರಹೊಮ್ಮಿದ್ದು. ಇದಕ್ಕೆ ಕನಿಷ್ಠ 150 ವರ್ಷಗಳ ಅಧ್ಯಯನದ ಇತಿಹಾಸವಿದೆ. ಈ ಕಾಲಘಟ್ಟದಲ್ಲಿ ಜಾನಪದವನ್ನು ತಿಳಿಯುವ, ವಿಶ್ಲೇಷಿಸುವ, ಸಮಾಜವನ್ನು ಅಥರ್ೈಸುವ, ಸಂಸ್ಕೃತಿಯನ್ನು ನಿರ್ವಚಿಸುವ, ಚರಿತ್ರೆಯನ್ನು ಬಿನ್ನವಾಗಿ ಗ್ರಹಿಸುವ, ಅನೇಕ ಆಯಾಮಗಳಲ್ಲಿ ಹಲವು ಸ್ಥಿತ್ಯಂತರಗಳು ಸಂಭವಿಸಿವೆ. ಜಾಗತಿಕವಾಗಿ 60ರ ದಶಕದ ನಂತರ ನಡೆದ ತಾತ್ವಿಕ ಪಲ್ಲಟಗಳು ಸ್ವಲ್ಪ ಮಟ್ಟಿಗಾದರೂ ಜಾನಪದ ಅಧ್ಯಯನಗಳನ್ನು ಪ್ರಭಾವಿಸಿವೆ. ಹಾಗಾಗಿ, 50ರ ದಶಕದ ನಂತರ, ಅಂದರೆ ಅರ್ಧಶತಮಾನದಲ್ಲಿ ಕನರ್ಾಟಕದ ಜಾನಪದ ಅಧ್ಯಯನಗಳು ಪಡೆದುಕೊಂಡ ತಿಳುವಳಿಕೆಯ ಜಿಗಿತಗಳನ್ನು ಶೋದಿಸುವ ಅಗತ್ಯವಿದೆ. ಅಧ್ಯಯನ ಇಂತಹ ಅಗತ್ಯವನ್ನು ಗಮನದಲ್ಲಿರಿಸಿದೆ.

2. ಜಾನಪದ ಆಧುನಿಕತೆಯಿಂದಾಗಿ ಹುಟ್ಟಿದ ಪರಿಕಲ್ಪನೆ. ವೈರುಧ್ಯವೆಂದರೆ ಆಧುನಿಕತೆಯ ವಿರೋದಿ ನಿರ್ವಚನವಾಗಿ ಮೊದಲ ಹಂತದಲ್ಲಿ ನಿರೂಪಿತವಾಯಿತು. ಆನಂತರ ಪಶ್ಚಿಮದ ಅನೇಕ ಪರಿಕಲ್ಪನೆಗಳು ಜಾನಪದ ಅಧ್ಯಯನವನ್ನು ನಿದರ್ೆಶಿಸಿದವು. ಆಲೋಚನ ಕ್ರಮಗಳು ಜಾನಪದವನ್ನು ಹಲವು ದಿಕ್ಕುಗಳಿಂದ ಪ್ರವೇಶಿಸಲು ಅನುವುಮಾಡಿಕೊಟ್ಟವು. ಇದರಲ್ಲಿ ‘ಪರಂಪರೆ’, ‘ಅನನ್ಯತೆ’, ‘ಲೋಕದೃಷ್ಟಿ’, ‘ದೇಶೀಯತೆ’, ‘ಆಧುನಿಕತೆ’ ಮುಂತಾದ ಪರಿಕಲ್ಪನೆಗಳು ಕನರ್ಾಟಕದ ಜಾನಪದವನ್ನು ಬೇರೆ ಬೇರೆ ಆಯಾಮಗಳಲ್ಲಿ ಪರಿಶೀಲಿಸಲು ಒತ್ತಾಯಿಸಿದವು. ಕನ್ನಡದ ಜಾನಪದ ವಿದ್ವಾಂಸರುಗಳು ಪರಿಕಲ್ಪನೆಗಳ ಜತೆ ಬಿನ್ನ ನೆಲೆಯಲ್ಲಿ ಮುಖಾಮುಖಿಯಾದರು. ಇಲ್ಲಿ ಅನ್ಯರ ಪ್ರಭಾವವಿರುವಂತೆ ಸ್ವಂತಿಕೆಯ ಹುಡುಕಾಟವೂ ಇದೆ. ಕಾರಣ ಪರಂಪರೆ, ಅನನ್ಯತೆ, ಲೋಕದೃಷ್ಟಿ, ದೇಶೀಯತೆ, ಆಧುನಿಕತೆ ಎಂಬ ಐದು ಪ್ರಮುಖ ಪರಿಕಲ್ಪನೆಗಳ ಮೂಲಕ ಜಾನಪದ ಅಧ್ಯಯನದ ತಾತ್ವಿಕತೆಯನ್ನು ಹುಡುಕುವುದು.

3.ಕನ್ನಡ ಸಾಹಿತ್ಯ ಮೀಮಾಂಸೆಯ ಪರಿಕಲ್ಪನೆಯಲ್ಲಿ ಜಾನಪದ ಸಾಹಿತ್ಯಮೀಮಾಂಸೆಯೂ ಸೇರಿದೆ. ಆದರೆ ಜಾನಪದ ಸಾಹಿತ್ಯ ನೆಲೆಯಿಂದ ಹುಟ್ಟಿರುವ ಕನ್ನಡದ ಚಿಂತನೆಗಳಲ್ಲಿ ಅನೇಕ ಸಮಸ್ಯೆಗಳಿವೆ. ಗಾಗಲೆ ನಡೆದಿರುವ ಅಧ್ಯಯನಗಳಲ್ಲಿ ಸಮಸ್ಯೆಯ ಜನಪ್ರಿಯ ಮಾದರಿಗಳನ್ನು ಗುರುತಿಸಲಾಗಿದೆ. ಅಧ್ಯಯನದಲ್ಲಿ ಇಂತಹ ಸಮಸ್ಯೆಗಳ ಸಾಂಸ್ಕೃತಿಕ ಕಾರಣಗಳನ್ನು ಹುಡುಕುವುದು, 50ರ ದಶಕದ ನಂತರದ ಜಾನಪದ ಅಧ್ಯಯನಗಳಲ್ಲಿ ಸಮಸ್ಯೆಯನ್ನು ಮೀರುವಿಕೆಯೂ ಇದೆ. ವೈರುಧ್ಯಗಳನ್ನು ಗುರುತಿಸುವುದು.

4. ಕನ್ನಡದಲ್ಲಿ ಜಾನಪದ ಅಧ್ಯಯನಗಳು ‘ಸಾಂಸ್ಕೃತಿಕ’ ಅಧ್ಯಯನಗಳತ್ತ ಹೊರಳಿಕೊಳ್ಳುತ್ತಿವೆ. ಬಹುಸ್ತರೀಯ, ಬಹುಶಿಸ್ತೀಯ, ಬಹುಕೇಂದ್ರಿತ, ಬಹುಸಂವೇದನೆಗಳ ವಿಧಾನವಾಗಿ, ಅವು ರಾಜಕೀಯ, ಸಾಮಾಜಿಕ, ಧಾಮರ್ಿಕ, ಆಥರ್ಿಕ, ಇತ್ಯಾದಿ ಎಲ್ಲಾ ಆಯಾಮಗಳನ್ನು ಒಳಗೊಂಡ ಸಂಯುಕ್ತ ಪರಿಭಾಷೆಯಾಗಿ ರೂಪುಗೊಳ್ಳುತ್ತಿವೆ. ಬಗೆಯ ಹೊರಳುವಿಕೆಯನ್ನು ಗುರುತಿಸುವುದು, ಇದರಿಂದಾಗಿ ಜಾನಪದ ಅಧ್ಯಯನಗಳು ಪಡೆಯುತ್ತಿರುವ ಬಹುಅರ್ಥಗಳನ್ನು ಶೋದಿಸುವುದು.

5. ಕರ್ನಾಟಕದಲ್ಲಿ ಜಾನಪದ ಅಧ್ಯಯನಗಳನ್ನು ವಿಶ್ಲೇಷಿಸುವಾಗ ಆ ನಿರೂಪಣೆಗಳ ತಾತ್ವಿಕತೆ ಯನ್ನೋ, ವ್ಯಾಖ್ಯಾನಗಳನ್ನೋ ‘ಕನರ್ಾಟಕದ ಜಾನಪದ’ದ ವಸ್ತು ಸಂಗತಿಗಳೊಡನೆ ಹೋಲಿಸಿ ನೋಡುವುದಷ್ಟೆ ಇಲ್ಲಿನ ಉದ್ದೇಶವಲ್ಲ. ಕನರ್ಾಟಕ ಜಾನಪದದ ವಾಸ್ತವಿಕ ಸಂಗತಿಗಳೆಂದು ಪರಿಗಣಿಸಲಾಗಿರುವಂಥವು ಕೂಡ ನಿದರ್ಿಷ್ಟ ತಿಳುವಳಿಕೆಯ ದೃಷ್ಟಿಕೋನದಿಂದ ರೂಪುಗೊಂಡವು. ತಿಳುವಳಿಕೆಯ ಹಿಂದಿರುವ ನಿಲುವು ಕೂಡ ವಿಮಶರ್ೆಗೆ ಒಳಗಾಗಬೇಕು ಎನ್ನುವ ಉದ್ದೇಶ ಅಧ್ಯಯನದ್ದಾಗಿದೆ. ಆದಿವಾಸಿ ಜಾನಪದ

ಇವುಗಳೂ ನಿಮಗಿಷ್ಟವಾಗಬಹುದು

ಅಲೆಮಾರಿಗಳ ‘ಬುಡ್ಗನಾದ’

ಅಲೆಮಾರಿಗಳ ‘ಬುಡ್ಗನಾದ’: ಜಾನಪದ ಕಲೆಯನ್ನು ರಕ್ತಗತವಾಗಿ ಅಳವಡಿಸಿಕೊಂಡಿರುವ ಅಲೆಮಾರಿ, ಬುಡಕಟ್ಟುಗಳು ದೇಶದಲ್ಲಿ 612ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದು 15 ಕೋಟಿಗೂ ಮೀರಿದ …

Leave a Reply

Your email address will not be published. Required fields are marked *