ಆದಿನಾಥರು ಜೈನ ಧರ್ಮದ ಪ್ರಥಮ ತೀರ್ಥಂಕರರಾಗಿದ್ದಾರೆ.ಇವರಿಗೆ ಋಷಭ, ವೃಷಭನಾಥ ಎನ್ನುವ ಹೆಸರುಗಳಿವೆ. ಮರುದೇವಿಯು ಗರ್ಭವನ್ನು ಧರಿಸುವ ಮುನ್ನ ಕನಸಿನಲ್ಲಿ ಋಷಭವು ತನ್ನ ಮುಖವನ್ನು ಪ್ರವೇಶಿಸುವಂತೆ ಕಂಡಳು. ಆದ್ದರಿಂದ ಮುಂದೆ ಹುಟ್ಟಿದ ಮಗುವಿಗೆ ಋಷಭ ಎಂದು ಹೆಸರಿಟ್ಟರು.ಮತ್ತೊಂದು ಅಭಿಪ್ರಾಯದ ಪ್ರಕಾರ ವೃಷ ಎಂದರೆ ಧರ್ಮ. ಆದಿನಾಥರು ಮುಂದೆ ಧರ್ಮ ಪ್ರಸಾರಕರಾಗುವುರಿಂದ ಮಗುವಿಗೆ ವೃಷಭ ಎಂದು ಹೆಸರಿಟ್ಟರು. ಆದಿನಾಥರ ತಂದೆ ಅಯೋಧ್ಯೆಯ ಅರಸರು;ಹೆಸರು ನಾಭಿರಾಜ.ತಾಯಿಯ ಹೆಸರು ಮರುದೇವಿ.
ಜನನ : ಚೈತ್ರ ಬಹುಳ ನವಮಿ, ಉತ್ತರಾಷಾಢ ನಕ್ಷತ್ರ
ಜನ್ಮ ಸ್ಥಳ : ಅಯೋಧ್ಯಾ
ತಂದೆ: ನಾಭಿರಾಜ
ತಾಯಿ : ಮರುದೇವಿ
ವಂಶ : ಇಕ್ಷ್ವಾಕು ವಂಶ
ದೇಹದ ಬಣ್ಣ : ಸುವರ್ಣ
ಗಣಧರರು: ವೃಷಭ ಸೇನ
ದೇಹದ ಎತ್ತರ: ೫೦೦ ಬಿಲ್ಲುಗಳು
ಯಕ್ಷ: ಗೋಮುಖ
ಯಕ್ಷಿ: ಚಕ್ರೇಶ್ವರಿ
ಲಾಂಚನ: ವೃಷಭ / ಎತ್ತು
ತಪೋವನ : ಸಿದ್ಧಾರ್ಥಕವನ
ತಪೋವೃಕ್ಷ: ವಟವೃಕ್ಷ
ಮೋಕ್ಷಸ್ಥಾನ : ಕೈಲಾಸಗಿರಿ
ಮೋಕ್ಷ ಪ್ರಾಪ್ತಿ : ಮಾಘ ಶುದ್ದ ಚತುರ್ದಶಿ ಬೆಳಗಿನ ಜಾವ ಉತ್ತರಾಷಾ