anjaneya

ಆಂಜನೇಯ ಸ್ವಾಮಿಯ ಸಿಂಧೂರವನ್ನು ಹಚ್ಚಿಕೊಳ್ಳುವುದರಿಂದ ಆಗುವ ಲಾಭಗಳು

1) ಯಾರದಾದರೂ ಮನೆಯಲ್ಲಿ ದಂಪತಿಗಳು ಪ್ರತಿನಿತ್ಯ ಜಗಳವಾಡುತ್ತಿದ್ದರೆ, ಪ್ರತಿನಿತ್ಯ ಆಂಜನೇಯ ಸ್ವಾಮಿಯ ಸಿಂಧೂರವನ್ನು ಧಾರಣೆ ಮಾಡಿದರೆ ಎಲ್ಲಾ ದಾಂಪತ್ಯ ಸಮಸ್ಯೆಗಳು ದೂರವಾಗುತ್ತವೆ.

2) ಯಾರ ಮನೆಯಲ್ಲಾದರೂ ಭಯ, ಭೀತಿ, ಅಂಜಿಕೆ ಇದ್ದರೆ ಅವರು ಸಿಂಧೂರವನ್ನು ಧಾರಣೆ ಮಾಡಿದರೆ ಎಲ್ಲಾ ಭಯವೂ ನಾಶವಾಗುತ್ತದೆ.

3) ಮನೆಯಲ್ಲಿ ಗಂಡ, ಹೆಂಡತಿ, ಮಕ್ಕಳ ನಡುವೆ ಸೌಖ್ಯತೆ ಇಲ್ಲದಿದ್ದರೆ ಅಂತವರು ಸಿಂಧೂರವನ್ನು ಧರಿಸಿದರೆ ಸುಖಿ, ಸಂತೋಷ, ಪ್ರಶಾಂತತೆ ಲಭಿಸುತ್ತದೆ.

4) ಸಣ್ಣ ಮಕ್ಕಳಿಗೆ ಬಾಲಗ್ರಹ ದೋಷವಿದ್ದರೆ ಆ ಮಕ್ಕಳಿಗೆ ಸಿಂಧೂರವನ್ನು ಹಚ್ಚಿದರೆ ಭಯ, ಭೀತಿ, ರೋಗಬಾಧೆ ಯಾವುದೂ ತಗಲದೇ ಆರೋಗ್ಯವಾಗಿರುತ್ತಾರೆ.

5) ವಿವಾಹದ ನವದಂಪತಿಗಳು ಸಿಂಧೂರವನ್ನು ಧರಿಸಿದರೆ ಧೈರ್ಯವಂತ ಮಕ್ಕಳು ಹುಟ್ಟುತ್ತಾರೆ.

6) ವಿದ್ಯಾರ್ಥಿಗಳು ಆಂಜನೇಯ ಸ್ವಾಮಿಯ ದೇವಸ್ಥಾನಕ್ಕೆ ಹೋಗಿ ಸಿಂಧೂರವನ್ನು ಹಚ್ಚಿಕೊಂಡು ಬಂದು ಓದಿದರೆ ಪರೀಕ್ಷೆ ಸಮಯದಲ್ಲಿ ಓದಿದ್ದು ಮರೆತು ಹೋಗುವುದಿಲ್ಲ.

7) ರಕ್ತಹೀನತೆಯಂತಹ ರೋಗಿಗಳು ಆಂಜನೇಯ ಸ್ವಾಮಿಯ ತೀರ್ಥ ಸೇವಿಸಿ, ಸಿಂಧೂರವನ್ನು ಧರಿಸಿದರೆ ಆರೋಗ್ಯ ಭಾಗ್ಯ ಸಿದ್ಧಿಸುತ್ತದೆ.

8) ಗ್ರಹಬಾಧೆ ಇದ್ದವರು ಸಿಂಧೂರವನ್ನು ಧರಿಸಿದರೆ ಗ್ರಹಬಾಧೆಗಳು ದೂರವಾಗುತ್ತವೆ

9) ಮನೆಯಲ್ಲಿ ಆಂಜನೇಯ ಸ್ವಾಮಿಗೆ ಗಂಧ, ಪುಷ್ಪಗಳಿಂದ ಅರ್ಚನೆ ಮಾಡಿ ಆಮೇಲೆ ಅವುಗಳನ್ನು ಪ್ರಸಾದರೂಪದಲ್ಲಿ ಸ್ವೀಕರಿಸಿದರೆ ಸಕಲ ಮನೋಕಾಮನೆಗಳು ಈಡೇರುತ್ತವೆ.

source: whatsapp

ಇವುಗಳೂ ನಿಮಗಿಷ್ಟವಾಗಬಹುದು

ಶಬರಿ ಕೇಳುತ್ತಾಳೆ

ರಾವಣನನ್ನು ಸಂಹಾರ ಮಾಡುವ ನೆಪದಿಂದಲಾದರೂ ನೀನು ಇಲ್ಲಿಗೆ ಬಂದೆಯಲ್ಲ, ಇಲ್ಲ ಅಂದರೆ ಎಲ್ಲಿ ಬರುತ್ತಿದ್ದೆ ಸ್ವಾಮಿ? ಶ್ರೀರಾಮ ಸ್ವಲ್ಪ ಗಂಭೀರ …

Leave a Reply

Your email address will not be published. Required fields are marked *