ಅಪ್ರತಿಮ ವೀರ ಏಕಲವ್ಯನ ಸಾವಿಗೆ ಶ್ರೀಕೃಷ್ಣ ಕಾರಣನೇ?

ಮಹಾಭಾರತವನ್ನು ಆಧರಿಸಿದ ಕಥೆಗಳು ಜನರಿಂದ ಜನರಿಗೆ ದಾಟುತ್ತಾ ಹೋದಂತೆ ಮೂಲಕಥೆಯಿಂದ ಸ್ವಲ್ಪಸ್ವಲ್ಪವಾಗಿ ಬದಲಾವಣೆ ಪಡೆಯುತ್ತಾ ಇಂದು ಮೂಲಕಥೆಗೂ ಭಿನ್ನವಾಗಿ ಮೂಲಕಥೆಯ ಸತ್ಯತೆಯನ್ನೇ ಪ್ರಶ್ನಿಸುವಂತಾಗಿದೆ. ಮಹಾಭಾರತದಲ್ಲಿ ಬರುವ ಎಲ್ಲಾ ಪಾತ್ರಗಳಿಗೂ ಒಳ್ಳೆಯ ಮತ್ತು ಕೆಟ್ಟ ಮುಖಗಳಿವೆ. ಇದಕ್ಕೆ ಭಗವಾನ್ ಕೃಷ್ಣನೂ ಹೊರತಲ್ಲ. ಪ್ರತಿಯೊಬ್ಬರಿಗೂ ತಮ್ಮದೇ ಆದ ವ್ಯಕ್ತಿತ್ವವಿದ್ದು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುತ್ತವೆ.

ಉದಾಹರಣೆಗೆ ಗಾಂಧಾರಿಗೆ ಕಣ್ಣಿದ್ದೂ ಗಂಡನಿಗೆ ಕಣ್ಣಿಲ್ಲದ ಕಾರಣ ಕಣ್ಣಿಗೆ ಪಟ್ಟಿಕಟ್ಟಿ ಗಂಡನ ಕುರುಡಿನಲ್ಲಿ ಭಾಗಿಯಾಗುವ ಮೂಲಕ ಪಾತಿವ್ರತೆಯ ಮಹತ್ವವನ್ನು ಕೊಂಡಾಡಿದರೆ ಮಗ ದುರ್ಯೋಧನ ಮಾಡುತ್ತಿರುವುದು ತಪ್ಪು ಎಂದು ತಿಳಿದೂ ತನ್ನ ಕಣ್ಣಿನ ತೇಜಸ್ಸಿನಿಂದ ಆತನ ದೇಹವನ್ನು ವಜ್ರಕಾಯವಾಗಿಸಲು ನಗ್ನರೂಪದಲ್ಲಿ ಬರಲು ತಿಳಿಸುತ್ತಾಳೆ. ಇಂತಹದ್ದೇ ಇನ್ನೊಂದು ಪಾತ್ರವೆಂದರೆ ಏಕಲವ್ಯನದ್ದು.

ದ್ರೋಣಾಚಾರ್ಯರ ಪ್ರತಿಮೆಯನ್ನೇ ಗುರುವನ್ನಾಗಿಸಿ ಅಪ್ರತಿಮ ಬಿಲ್ವಿದ್ಯಾ ಪಾರಂಗತನಾದ ಏಕಲವ್ಯನು ತನ್ನ ಶಿಷ್ಯನಾದ ಅರ್ಜುನನಿಗಿಂತಲೂ ಮೇಲೇರುವುದನ್ನು ಸಹಿಸದ ದ್ರೋಣಾಚಾರ್ಯರು ಆತನ ಹೆಬ್ಬೆರಳನ್ನೇ ಗುರುದಕ್ಷಿಣಿಯಾಗಿ ಅಪೇಕ್ಷಿಸುತ್ತಾರೆ. ಇದಕ್ಕೆ ಹಿಂದೇಟು ಹಾಕದ ಏಕಲವ್ಯ ತನ್ನ ಬಲಗೈ ಹೆಬ್ಬೆರಳನ್ನು ದಕ್ಷಿಣಿಯಾಗಿ ನೀಡಿ ಅಪ್ರತಿಮ ಬಿಲ್ಲುಗಾರನಾಗುವುದರಿಂದ ವಂಚಿತನಾಗುತ್ತಾನೆ. ಆದರೆ ಏಕಲವ್ಯನ ಸಾವು ಕೃಷ್ಣನಿಂದ ಬಂದಿರುವುದು ಹೆಚ್ಚಿನವರಿಗೆ ತಿಳಿದಿಲ್ಲ. ಏಕಲವ್ಯನಂತಹ ಸತ್ಯವಂತನನ್ನು ಕೃಷ್ಣ ಏಕೆ ಕೊಂದ? ಈ ಬಗ್ಗೆ ನಿಮಗೆ ತಿಳಿದಿದೆಯೇ? ಇಲ್ಲವೇ, ಹಾಗಾದರೆ ಕೆಳಗಿನ ಸ್ಲೈಡ್ ಶೋ ನೋಡುತ್ತಾ ಹೋಗಿ…

ಕೃಷ್ಣನಿಗೂ ಏಕಲವ್ಯನಿಗೂ ಏನು ಸಂಬಂಧ?

ಏಕಲವ್ಯ ಕೃಷ್ಣನ ಸೋದರ ಸಂಬಂಧಿಯಾಗಿದ್ದ. ಏಕಲವ್ಯನ ತಂದೆ, ದೇವಶ್ರವ ವಾಸುದೇವನ ಸಹೋದರನಾಗಿದ್ದ. ಕಾಡಿನಲ್ಲಿ ಈ ಇಬ್ಬರೂ ಸಹೋದರರು ಬೇರೆಬೇರೆಯಾಗಿದ್ದರು. ಕಾಡಿನಲ್ಲಿ ದೇವಶ್ರವನನ್ನು ವ್ಯತರಾಜ ಹಿರಣ್ಯಧನುಷ ನೆಂಬ ನಿಷಾಢ ಜಾತಿಯ ಕಾಡಿನ ಬೇಟೆಗಾರರ ನಾಯಕ ಕಾಪಾಡಿ ಆಶ್ರಯ ನೀಡಿದ..

ಬೇಟೆಗಾರರೊಂದಿಗೆ ಬೆಳೆದ ದೇವಶ್ರವ ಅವರಲ್ಲೊಬ್ಬಳನ್ನೇ ಮದುವೆಯಾಗಿ ಅವರಿಗೆ ಹುಟ್ಟಿದ ಮಗನೇ ಏಕಲವ್ಯ.

ಗುರುದಕ್ಷಿಣೆಯ ಹಿಂದೆ ಕೃಷ್ಣನ ಕೈವಾಡವಿತ್ತು

ಏಕಲವ್ಯನ ಗುರುದಕ್ಷಿಣೆಯ ಕಥೆಯ ಹಿಂದೆ ಕೃಷ್ಣನ ಕೈವಾಡವಿತ್ತು ಎಂದು ಹಲವರು ಅಭಿಪ್ರಾಯಪಡುತ್ತಾರೆ. ಬಿಲ್ಲಿಗೆ ಬಾಣ ಹೂಡಲು ಅತ್ಯಗತ್ಯವಾಗಿ ಬೇಕಾಗಿರುವ ಹೆಬ್ಬರೆಳನ್ನೇ ಗುರುದಕ್ಷಿಣೆಯಾಗಿ ಕೇಳಿ ಎಂದು ಕೃಷ್ಣ ದ್ರೋಣಾಚಾರ್ಯರಿಗೆ ಕಿವಿಯೂದಿದ್ದ. ಅರ್ಜುನನಿಗಿಂತಲೂ ಮಿಗಿಲಾದ ಬೇರೊಬ್ಬ ಬಿಲ್ಲುಗಾರ ಈ ಜಗತ್ತಿನಲ್ಲಿರಬಾರದು ಎಂಬುದೇ ಆತನ ಅಪೇಕ್ಷೆಯಾಗಿತ್ತು.

ಏಕಲವ್ಯ ಮತ್ತು ಜರಾಸಂಧ

ಏಕಲವ್ಯನ ಆಶ್ರಯದಾತ ಹಿರಣ್ಯಧನುಷ ಜರಾಸಂಧನ ಅನುಯಾಯಿಯಾಗಿದ್ದ. ಅಂತೆಯೇ ಏಕಲವ್ಯನೂ ಜರಾಸಂಧನನ್ನು ತನ್ನ ಹಿತೈಷಿಯಾಗಿ ಕಾಣುತ್ತಿದ್ದ. ಆದರೆ ಜರಾಸಂಧ ಕೃಷ್ಣನ ಬದ್ದವೈರಿಯಾಗಿದ್ದು ಏಕಲವ್ಯನನ್ನೂ ಕೃಷ್ಣ ಸಹೋದರನಾಗಿದ್ದರೂ ವೈರಿಯಂತೆಯೇ ಕಾಣಲು ಕಾರಣವಾಯಿತು.

ಏಕಲವ್ಯನ ಸಾವು ಕೃಷ್ಣನಿಂದಾಯಿತು!

ಕೃಷ್ಣ ರುಕ್ಮಿಣಿಯೊಂದಿಗೆ ಓಡಿಹೋಗುತ್ತಿದ್ದಾಗ ರುಕ್ಮಿಣಿಯನ್ನು ತಡೆಯಲು ಹಿಂದೆ ಬರುತ್ತಿದ್ದ ಶಿಶುಪಾಲ ಮತ್ತು ಜರಾಸಂಧರಿಗೆ ಏಕಲವ್ಯ ಸಹಾಯ ಮಾಡುತ್ತಿದ್ದ. ಶಿಶುಪಾಲ ರುಕ್ಮಿಣಿಯನ್ನು ಬಲವಂತವಾಗಿ ವಿವಾಹವಾಗುತ್ತಿದ್ದಾಗ ಕೃಷ್ಣ ಆಕೆಯನ್ನು ಅಪಹರಿಸಿ ಓಡುತ್ತಿದ್ದ. ಆದ ಹಿಂಬಾಲಿಸುತ್ತಿದ್ದ ಏಕಲವ್ಯನ ಪ್ರಹಾರಗಳಿಗೆ ರೊಚ್ಚಿಗೆದ್ದ ಕೃಷ್ಣ ಕಲ್ಲೊಂದನ್ನು ಬಲವಾಗಿ ಬೀಸಿದ. ಈ ಏಟಿಗೆ ತತ್ತರಿಸಿದ ಏಕಲವ್ಯ ಅಲ್ಲಿಯೇ ಮಡಿದ.
ಏಕಲವ್ಯನ ಸಾವಿಗೆ ಕಾರಣವೇನು ದ್ರೋಣಪರ್ವದ ಪ್ರಕಾರ ಜರಾಸಂಧ, ಶಿಶುಪಾಲ ಮತ್ತು ಏಕಲವ್ಯರಂತಹ ಯಾದವರನ್ನು ದ್ವಾರಕೆಯಿಂದ ನಿರ್ಮೂಲನೆ ಮಾಡಬೇಕೆಂದು ಕೃಷ್ಣನ ಅಭಿಲಾಷೆಯಾಗಿತ್ತು. ಏಕೆಂದರೆ ಬಳಿಕ ಇವರು ಮುಂದಿನ ಮಹಾಭಾರತದ ಯುದ್ಧದಲ್ಲಿ ಕೌರವರ ಜೊತೆಗೂಡಿದರೆ ಧರ್ಮದ ಸ್ಥಾಪನೆಗೆ ಅಡ್ಡಿಯಾಗುತ್ತದೆ ಎಂದು ಭಾವಿಸಿದ್ದ.

ಏಕಲವ್ಯನೆಂಬ ಅಪ್ರತಿಮ ಬಿಲ್ಲುಗಾರ

ಹಲವು ಗ್ರಂಥಗಳ ಪ್ರಕಾರ ಏಕಲವ್ಯ ತನ್ನ ಹೆಬ್ಬರಳನ್ನು ಕಳೆದುಕೊಂಡ ಬಳಿಕವೂ ಜಗತ್ತಿನ ಶ್ರೇಷ್ಠ ಬಿಲ್ಲುಗಾರರಲ್ಲೊಬ್ಬನಾಗಿದ್ದ. ಏಕೆಂದರೆ ಬಲಗೈ ಹೆಬ್ಬೆರಳನ್ನು ಕಳೆದುಕೊಂಡಿದ್ದರೂ ಎಡಗೈ ಹೆಬ್ಬೆರಳಿನಿಂದ ಆತ ಲೀಲಾಜಾಲವಾಗಿ ಬಿಲ್ಲು ಹೂಡಲು ಸಾಧ್ಯವಿತ್ತು. ಏಕೆಂದರೆ ಬಿಲ್ವಿದ್ಯೆ ಕಲಿಯುವಾಗ ಆತ ಎರಡೂ ಕೈಗಳಿಂದ ಬಿಲ್ಲು ಹೂಡುವುದನ್ನು ಕಲಿತುಕೊಂಡಿದ್ದ.

ದೃಷ್ಟದ್ಯುಮ್ನನಾಗಿ ಏಕಲವ್ಯನ ಮರುಜನ್ಮ

ಇನ್ನೊಂದು ದಂತಕಥೆಯ ಪ್ರಕಾರ ಏಕಲವ್ಯನನ್ನು ಕೊಲ್ಲುವಾಗ ಕೃಷ್ಣ ಆತನಿಗೆ ಮುಂದಿನ ಜನ್ಮದಲ್ಲಿ ದೃಷ್ಟದ್ಯುಮ್ನ ಜನ್ಮತಳೆದು ದ್ರೋಣಾಚಾರ್ಯರನ್ನು ಕೊಂದು ತನ್ನ ಹಿಂದಿನ ಜನ್ಮದ ಲೆಕ್ಕಾಚಾರವನ್ನು ಪೂರ್ಣಗೊಳಿಸಲು ವರ ನೀಡಿದ್ದ. ಅಂತೆಯೇ ಮುಂದಿನ ಜನ್ಮದಲ್ಲಿ ದೃಷ್ಟದ್ಯುಮ್ನನಾಗಿ ಹುಟ್ಟಿದ ಏಕಲವ್ಯ ಯುದ್ಧದಲ್ಲಿ ದ್ರೋಣಾಚಾರ್ಯರನ್ನು ಕೊಂದು ವರವನ್ನು ಸದುಪಯೋಗಿಸಿಕೊಂಡ.

ಶ್ರೇಯಾಂಕ

ಮತ ನೀಡಿ, ಬಲಪಡಿಸಿ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ಹಂಚಿರಿ.

User Rating: 3.65 ( 7 votes)

ಇವುಗಳೂ ನಿಮಗಿಷ್ಟವಾಗಬಹುದು

ವಾಟ್ಸಪ್‌ ಕಥೆ: ಹೆಣ್ಣಿನ ಸಮಾನತೆ

ವಾಟ್ಸಪ್‌ ಕಥೆ: ಹೆಣ್ಣಿನ ಸಮಾನತೆ

ಹೆಂಗಸಿನ ಬುದ್ಧಿ ಮೊಳಕಾಲು ಕೆಳಗೆ ಎಂಬ ಗಾದೆಯನ್ನೂ ಸಹ ದೂಷಿಸುತ್ತ, ‘ಹೆಣ್ಣು ಹೆರಲಿಕ್ಕೆಂದೇ ಇರುವ ಯಂತ್ರವಲ್ಲ, ಅಡುಗೆ ಮನೆಗೆ ಸೀಮಿತಳಲ್ಲ. …

Leave a Reply

Your email address will not be published. Required fields are marked *