ಅಂಬಲಪಾಡಿ ಮಹಾಕಾಳಿ ಜನಾರ್ದನ ದೇಗುಲ, ಉಡುಪಿ
ಕರ್ನಾಟಕದ ಉಡುಪಿಯಿಂದ ಸುಮಾರು ೨ರಿಂದ ೩ ಕಿ.ಮೀ ದೂರದಲ್ಲಿ ಅಂಬಲಪಾಡಿ ಮಹಾಕಾಳಿ ದೇಗುಲ ಇದೆ. ಸುಮಾರು ೬ ಅಡಿ ಎತ್ತರದ ಮಹಾಕಾಳಿಯ ವಿಗ್ರಹವು ಇಲ್ಲಿದೆ. ಅಂಬಲಪಾಡಿ ಎಂಬ ಹೆಸರು, ಅಂಬಾ ಎಂದರೆ ತಾಯಿ ಹಾಗೂ ಪಾಡಿ ಎಂದರೆ ಗುಡ್ಡ ಎಂಬ ಮೂಲದಿಂದ ಬಂದಿದೆ.ದೇಗುಲದ ಇನ್ನೊಂದು ಪ್ರಮುಖ ಆಕರ್ಷಣೆಯೆಂದರೆ, ಪಾತ್ರಿ ಎಂಬ ವ್ಯಕ್ತಿಯ ಮೂಲಕ ದೇವರು ಮಾತನಾಡುವುದು. ಈ ವಿಶೇಷ ಘಟನೆಯು ಪ್ರತಿ ಶುಕ್ರವಾರ ನಡೆಯುತ್ತದೆ. ಜನರ ವೈಯಕ್ತಿಕ ಸಮಸ್ಯೆಗಳನ್ನು ಕೇಳಿಕೊಂಡು ಅದಕ್ಕೆ ಸೂಕ್ತವಾದ ಪರಿಹಾರವನ್ನು ದೇವರು ಇಲ್ಲಿ ನೀಡುತ್ತಾರೆ.ಮಹಾಕಾಳಿ ಜನಾರ್ದನ ದೇಗುಲದ ಸಮೀಪದಲ್ಲೇ ಇರುವ ಲಕ್ಷ್ಮಿ ಜನಾರ್ದನ ದೇಗುಲವನ್ನು ಕೂಡಾ ಪ್ರವಾಸಿಗರು ಭೇಟಿ ನೀಡಬಹುದು.ಕೆಲವು ಪ್ರಮುಖ ಪೂಜೆಗಳು ಅಂಬಲಪಾಡಿ ದೇಗುಲದಲ್ಲಿ ನಡೆಯುತ್ತದೆ, ಅವುಗಳೆಂದರೆ, ತೀರ್ಥ ಸ್ನಾನ, ರಕ್ಷಯಂತ್ರ, ಕುಂಕುಮಾರ್ಚನೆ ಮತ್ತು ಮಹಾಪೂಜೆ.ಸಮೀಪದ ರೈಲ್ವೆ ಸ್ಟೇಷನ್ ಉಡುಪಿ. ಅಂಬಲಪಾಡಿ ಮಹಾಕಾಳಿ ಜನಾರ್ದನ ದೇಗುಲವನ್ನು ತಲುಪಲು ಬಸ್‌ಗಳು, ಟ್ಯಾಕ್ಸಿಗಳು ಮತ್ತು ಆಟೊರಿಕ್ಷಾಗಳು ಲಭ್ಯವಿದೆ. ಉಡುಪಿಯಲ್ಲಿ ಹಲವು ಲಾಡ್ಜ್ ಗಳಿದ್ದು ಪ್ರವಾಸಿಗರು ಉಳಿದುಕೊಳ್ಳುವುದಕ್ಕೆ ಅನುಕೂಲ ಹೊಂದಿದೆ.
ಆಧಾರ: nativeplanet