ಮುಖಪುಟ » Tag Archives: ಮೇ (ಪುಟ 2)

Tag Archives: ಮೇ

ಡಾ. ಭುಜೇಂದ್ರ ಮಹಿಷವಾಡಿ

Bhujedra Mahishavadi

ಡಾ. ಭುಜೇಂದ್ರ ಮಹಿಷವಾಡಿ (೦೩.೦೫.೧೯೨೫ – ೧೫.೦೩.೧೯೮೨): ಕನ್ನಡ ಸಾಹಿತ್ಯದಲ್ಲಿ ಎಲೆಮರೆಯ ಕಾಯಿಯಂತೆಯೇ ಬದುಕಿ, ಕಾವ್ಯಕ್ಷೇತ್ರಕ್ಕೆ ಸತ್ವಯುತ ಕೃತಿಗಳನ್ನು ನೀಡಿದ ಕೃಷ್ಣಾತೀರದ ಅಪ್ಪಟ ಪ್ರತಿಭೆಯ ಭುಜೇಂದ್ರ ಮಹಿಷವಾಡಿಯವರು ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಮಹಿಷಿವಾಡಿಯಲ್ಲಿ ೧೯೨೫ ರ ಮೇ ೩ರಂದು. [sociallocker]ಪ್ರಾರಂಭಿಕ ಶಿಕ್ಷಣ ಮಹಿಷವಾಡಿಯಲ್ಲಿ. ಪ್ರೌಢಶಾಲಾ ವಿದ್ಯಾಭ್ಯಾಸ ಅಥಣಿ ಮತ್ತು ಬನಹಟ್ಟಿಯಲ್ಲಿ. ಬೆಳಗಾವಿಯಲ್ಲಿ ಬಿ.ಎ. ಆನರ್ಸ್ ಮತ್ತು ಬಿ.ಎಡ್‌. ಪದವಿಯ ನಂತರ ಸಾಂಗ್ಲಿಯಲ್ಲಿ ಪಡೆದ ಎಂ.ಎ. ಪದವಿ. “ಕವಿಚಕ್ರವರ್ತಿ ಜನ್ನನ ಜೀವನ ಹಾಗೂ ಕೃತಿಗಳು: ವಿವೇಚನೆ” ಎಂಬ ಪ್ರೌಢ ಪ್ರಬಂದ ಮಾಡಿಸಿ ಪಡೆದ …

ಪೂರ್ತಿ ಓದಿ...

ಡಿ.ವಿ. ಬಡಿಗೇರ

DV Badiger

ಡಿ.ವಿ. ಬಡಿಗೇರ (೩-೫-೧೯೫೧) ಚುಟುಕಗಳು ಜೇನಿನ ಹನಿಗಳು ಎಂದು ಭಾವಿಸಿ ಚುಟುಕ ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿರುವ ಕವಿ ಡಿ.ವಿ. ಬಡಿಗೇರರವರು ಹುಟ್ಟಿದ್ದು ಗದಗ-ಬೆಟಗೇರಿ. ತಂದೆ ವಿರೂಪಾಕ್ಷಪ್ಪ, ತಾಯಿ ಜಾನಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ಗದಗ-ಬೆಟಗೇರಿಯಲ್ಲಿ. ಕಾಲೇಜಿಗೆ ಸೇರಿದ್ದು ಜೆ.ಟಿ. ಕಾಲೇಜು ಬೆಟಗೇರಿ, ಬಿ.ಎ. ಪದವಿ. ‘ಕೆಲಸವಿಲ್ಲದಿದ್ದರಿಂದ ಕವಿಯಾದೆ’ ಎಂದು ಹೇಳಿಕೊಳ್ಳುವ ಬಡಿಗೇರರವರು ಕಂದಾಯ ಇಲಾಖೆಯಲ್ಲಿ ಉದ್ಯೋಗಿಯಾಗಿ ಸೇರಿದ್ದು ೧೯೭೭ರಲ್ಲಿ. ಉದ್ಯೋಗ ಸಿಕ್ಕಿತೆಂದು ಕವನ ಬರೆಯುವುದನ್ನು ನಿಲ್ಲಿಸದೆ ನಿಂತಲ್ಲಿ, ಕುಂತಲ್ಲಿ ರಚಿಸಿದ ಹನಿಗವನಗಳು ನಾಡಿನ ಎಲ್ಲ ಪ್ರಮುಖ ಪತ್ರಿಕೆಗಳಲ್ಲೂ ಬೆಳಕು ಕಂಡಿವೆ. [sociallocker]ವಿದ್ಯಾರ್ಥಿ ದೆಸೆಯಲ್ಲಿಯೇ …

ಪೂರ್ತಿ ಓದಿ...

ಎಂ.ಎಸ್.ಜಯಮ್ಮ

MS Jayamma

ಎಂ.ಎಸ್.ಜಯಮ್ಮ (೦೩.೦೫.೧೯೨೫ – ೨೯.೦೬.೧೯೯೯): ಸಂಗೀತಕ್ಕಾಗಿಯೇ ತಮ್ಮ ಜೀವನವನ್ನೇ ಮುಡುಪಾಗಿಟ್ಟು ಗುರುಕುಲ ಪದ್ಧತಿಯಲ್ಲಿ ಶಿಷ್ಯರನ್ನು ತಯಾರು ಮಾಡಿದ ಜಯಮ್ಮನವರು ಹುಟ್ಟಿದ್ದು ಮೈಸೂರು. ತಂದೆ ಎಂ. ಸುಬ್ಬರಾವ್, ತಾಯಿ ಸೀತಾಬಾಯಿ. ಓದಿದ್ದು ಪ್ರೌಢಶಾಲೆಯವರೆಗೆ. ತಮ್ಮ ಆರನೆಯ ವಯಸ್ಸಿನಿಂದಲೇ ಸಂಗೀತಾಭ್ಯಾಸ. ಸಂಗೀತ ವಿದುಷಿ ನೀಲಮ್ಮ ಕಡಾಂಬಿಯವರಲ್ಲಿ ವೀಣೆ ಮತ್ತು ಹಾಡುಗಾರಿಕೆಯ ಸಂಗೀತ ಶಿಕ್ಷಣ. ವೀಣೆ ಸುಬ್ಬಣ್ಣನವರ ಶಿಷ್ಯೆಯಾಗಿ ಕಲಿತ ವೀಣಾವಾದನ. ನಾಟ್ಯವಿಶಾರದೆ ಅಕ್ಕಮ್ಮಣ್ಣಿಯವರಲ್ಲಿ ಮುಂದುವರೆದ ಸಂಗೀತ ಪಾಠ. ಆಸ್ಥಾನ ವಿದ್ವಾನ್ ತಿಟ್ಟಿಕೃಷ್ಣಯ್ಯಂಗಾರ್‌ರವರಲ್ಲಿ ವೀಣೆ ಮತ್ತು ಹಾಡುಗಾರಿಕೆಯ ಪ್ರೌಢಶಿಕ್ಷಣ. ಕರ್ನಾಟಕ ಪ್ರೌಢ ಶಿಕ್ಷಣ ಮಂಡಲಿಯವರು ನಡೆಸುವ ಸಂಗೀತ ಪರೀಕ್ಷೆಯಲ್ಲಿ …

ಪೂರ್ತಿ ಓದಿ...

ಮಾಯಾರಾವ್

Maya Rao

ಮಾಯಾರಾವ್ (೦೨.೦೫.೧೯೨೮): ಕಥಕ್ ಶೈಲಿಯಲ್ಲಿ ಕರ್ನಾಟಕಕ್ಕೆ ಹೆಸರು ತಂದ ನೃತ್ಯಗಾರ್ತಿ ಮಾಯಾರಾವ್ ರವರು ಹುಟ್ಟಿದ್ದು. ಬೆಂಗಳೂರು. ತಂದೆ ಸಂಜೀವರಾವ್. ತಾಯಿ ಲಲಿತಾ ಬಾಯಿ. ಓದಿದ್ದು ಮಹಾರಾಣಿ ಕಾಲೇಜಿನಲ್ಲಿ ಬಿ.ಎ. ಬ್ಯಾಚುಲರ್‌ ಪದವಿ, ಸೆಂಟ್ರಲ್ ಕಾಲೇಜಿನಿಂದ ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ. [sociallocker]ಆರರ ವಯಸ್ಸಿನಲ್ಲಿಯೇ ಪಂ. ರಾಮರಾವ್ ಹೊನ್ನಾವರ ರವರ ಮಾರ್ಗದರ್ಶನದಲ್ಲಿ ಹಿಂದೂಸ್ತಾನಿ ಸಂಗೀತದ ಶಿಕ್ಷಣ, ಸಂಪ್ರದಾಯದ ಮನೆತನದಲ್ಲಿ ಸಂಗೀತ ದೈನಂದಿನ ಹಾಡು-ಹಸೆಗೆ ಸೀಮಿತ. ಆದರೆ ನೃತ್ಯ ಕಲಿತದ್ದು ಆಕಸ್ಮಿಕ, ಕಥಕ್ ನೃತ್ಯಪಟು ಸೋಹನ್‌ಲಾಲ್ ಕರ್ನಾಟಕಕ್ಕೆ ಬಂದಾಗ ಇವರ ಮನೆಯಲ್ಲಿಯೇ ಉಳಿದುಕೊಳ್ಳುತ್ತಿದ್ದು ಇವರ ಸೋದರಿಯರು ನೃತ್ಯ ಕಲಿಕೆಗಾರಂಭಿಸಿದಾಗ …

ಪೂರ್ತಿ ಓದಿ...

ಬಸವಪ್ಪ ಶಾಸ್ತ್ರೀ

Basavappa Sastri

ಬಸವಪ್ಪ ಶಾಸ್ತ್ರೀ (೦೨.೦೫.೧೮೪೩ – ೧೮೯೧): ಕಾಳಿದಾಸನ ಶಾಕುಂತಲ ನಾಟಕವನ್ನು ಕನ್ನಡಕ್ಕೆ ಭಾಷಾಂತರಿಸಿ ಮೈಸೂರು ಅರಸರಾಗಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರಿಂದ ‘ಅಭಿನವ ಕಾಳಿದಾಸ’ ಎಂಬ ಬಿರುದು ಪಡೆದ ಬಸವಪ್ಪ ಶಾಸ್ತ್ರಿಗಳು ಹುಟ್ಟಿದ್ದು ೧೮೪೩ರ ಮೇ ೨ರಂದು. ತಂದೆ ಮಹದೇವ ಶಾಸ್ತ್ರಿಗಳು, ಮುಮ್ಮಡಿ ಕೃಷ್ಣರಾಜ ಒಡೆಯರ ಆಸ್ಥಾನದ ಪುರೋಹಿತರಾಗಿದ್ದವರು. ತಾಯಿ ಬಸವಂಬಿಕೆ. ತಾತನವರು (ತಂದೆಯ ತಂದೆ) ಇಂದಿನ ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ನರಸಂದ್ರ (ನಾರುಸಂದ್ರ) ಗ್ರಾಮದ ರುದ್ರಾಕ್ಷಿ ಮಠಾಧ್ಯಕ್ಷರಾಗಿದ್ದ ಮುರುಡು ಬಸವಸ್ವಾಮಿಗಳು. [sociallocker]ಚಿಕ್ಕಂದಿನಲ್ಲಿಯೇ ತಂದೆ ತಾಯಿಗಳನ್ನು ಕಳೆದುಕೊಂಡಿದ್ದು, ಮತ್ತೊಬ್ಬ ಆಸ್ಥಾನ ವಿದ್ವಾಂಸರಾಗಿದ್ದ ಗರಳಪುರಿ ಶಾಸ್ತ್ರಿಗಳಲ್ಲಿ …

ಪೂರ್ತಿ ಓದಿ...

ಎಚ್.ವಿ. ಸಾವಿತ್ರಮ್ಮ

ಎಚ್.ವಿ. ಸಾವಿತ್ರಮ್ಮ (೦೨-೦೫-೧೯೧೩ – ೨೭-೧೨-೧೯೯೫): ಹಳೆ ತಲೆಮಾರಿನ ಅಪರೂಪದ ಅನುವಾದಕಿ, ಲೇಖಕಿ ಸಾವಿತ್ರಮ್ಮನವರ ಪೂರ್ಣ ಹೆಸರು ಹೆಬ್ಬಳಲು ವೆಲಪನೂರು ಸಾವಿತ್ರಮ್ಮ. ತಂದೆ ಎಂ.ರಾಮರಾವ್, ತಾಯಿ ಮೀನಾಕ್ಷಮ್ಮ. ತಂದೆ ಮೈಸೂರು ಸಂಸ್ಥಾನದಲ್ಲಿ ಉನ್ನತಾಕಾರಿಯಾಗಿದ್ದುದರಿಂದ ವರ್ಗಾವಣೆ ಅನಿವಾರ‍್ಯ. ಇವರಿಗೆ ವಿದ್ಯಾಭ್ಯಾಸ ಹಲವೆಡೆ-ಮಂಡ್ಯ, ಹಾಸನ, ರಾಮನಗರ, ಕೋಲಾರ, ಮೈಸೂರುಗಳಲ್ಲಿ. ೧೯೩೧ರಲ್ಲಿ ಮೈಸೂರಿನ ಮಹಾರಾಣಿ ಕಾಲೇಜಿನಿಂದ ಬಿ.ಎ. ಪದವಿ. ಮೂರು ಬಂಗಾರದ ಪದಕದೊಂದಿಗೆ ಮೈಸೂರು ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆ. ಗುರುಗಳಾದ ಎ.ಎನ್. ಮೂರ್ತಿರಾವ್, ತೀ.ನಂ.ಶ್ರೀ ಇವರಿಂದ ಪಡೆದ ಸಾಹಿತ್ಯಾಭಿರುಚಿ. ಗಂಡ ಎಚ್.ಎ. ನಾರಾಯಣರಾಯರಿಂದ …

ಪೂರ್ತಿ ಓದಿ...

ಶಶಿಕಲಾ ವೀರಯ್ಯ ಸ್ವಾಮಿ

Shashikala Veeraiah Swami

ಶಶಿಕಲಾ ವೀರಯ್ಯ ಸ್ವಾಮಿ (೧-೫-೧೯೪೮): ಕವಯಿತ್ರಿ ಶಶಿಕಲಾರವರು ಹುಟ್ಟಿದ್ದು ವಿಜಾಪುರ ಜಿಲ್ಲೆಯ ಸಿಂದಗಿ. ತಂದೆ ಸಿದ್ಧಲಿಂಗಯ್ಯ, ತಾಯಿ ಅನ್ನಪೂರ್ಣಾದೇವಿ. ಪ್ರಾಥಮಿಕ ವಿದ್ಯಾಭ್ಯಾಸ ಸಿಂದಗಿಯಲ್ಲಿ. ಕಾಲೇಜು ಕಲಿತದ್ದು ಬಿಜಾಪುರ, ಗುಲಬರ್ಗಾದಲ್ಲಿ. [sociallocker]ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದ ನಂತರ ವೃತ್ತಿ ಜೀವನ ಆರಂಭಿಸಿದ್ದು ಸಿಂದಗಿ ಜ್ಯೂನಿಯರ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ. ನಂತರ ಬೀದರ್ ಅಕ್ಕಮಹಾದೇವಿ ಪದವಿ ಕಾಲೇಜು, ಚಿಟಗುಪ್ಪ ಸರಕಾರಿ ಕಾಲೇಜು, ಗೋಕಾಕ್ ಕಾಲೇಜು ಬೆಳಗಾವಿ, ಕೆಲಕಾಲ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿಯಾಗಿ. ಯಲಹಂಕ ಸರಕಾರಿ ಜ್ಯೂ. ಕಾಲೇಜು, ಬೆಂಗಳೂರಿನ ವಾಣಿವಿಲಾಸ ಕಾಲೇಜು, …

ಪೂರ್ತಿ ಓದಿ...

ಟಿ.ಆರ್‌. ಶ್ರೀನಾಥ್‌

TR Srinath

ಟಿ.ಆರ್‌. ಶ್ರೀನಾಥ್‌ (೦೧.೦೫.೧೯೫೮): ಪ್ರಖ್ಯಾತ ಕೊಳಲು ವಾದಕರಲ್ಲಿ ಒಬ್ಬರಾದ ಶ್ರೀನಾಥ್‌ರವರು ಹುಟ್ಟಿದ್ದು ಬೆಂಗಳೂರು. ತಂದೆ ಟಿ.ಎನ್. ರಾಮಮೂರ್ತಿ, ತಾಯಿ ಕಮಲಮ್ಮ. ಓದಿದ್ದು ಮೈಸೂರಿನಲ್ಲಿ. ಮೈಸೂರು ವಿಶ್ವವಿದ್ಯಾಲಯದ ಆಹಾರ ಮತ್ತು ಸಂಶೋಧನಾ ಕೇಂದ್ರ (CFTRI) ದಿಂದ ಸ್ವರ್ಣಪದಕದೊಡನೆ ಪಡೆದ ಎಂ.ಎಸ್ಸಿ. ಪದವಿ. ಆಹಾರ ಸಂಶೋಧನಾ ವಿಭಾಗದಲ್ಲಿದ್ದ ಸಂಶೋಧನೆ ಮತ್ತು ಸಲಹೆಗಾರರು. [sociallocker]ಬಾಲ್ಯದಿಂದಲೂ ಸಂಗೀತದಲ್ಲಿ ಬೆಳೆದು ಬಂದ ಆಸಕ್ತಿಯಿಂದ ಕಲಿತದ್ದು ಕೊಳಲು. ಮೈಸೂರಿನ ಪ್ರಖ್ಯಾತ ಕೊಳಲು ವಾದಕರಾದ ಎ.ವಿ.ಪ್ರಕಾಶ್‌. ದಿಂಡಿಗಲ್ ಎಸ್.ವಿ.ನಟರಾಜನ್ ಮತ್ತು ಬಿ.ಎನ್. ಸುರೇಶ್‌ರವರಲ್ಲಿ ಕೊಳಲು ವಾದನ ಶಿಕ್ಷಣ ಮತ್ತು ರುದ್ರ ಪಟ್ಟಣದ ಆರ್‌.ಎನ್. ತ್ಯಾಗರಾಜನ್‌ರವರಲ್ಲಿ …

ಪೂರ್ತಿ ಓದಿ...