ಮುಖಪುಟ » Tag Archives: ಜಾನಪದ (ಪುಟ 2)

Tag Archives: ಜಾನಪದ

ಆಟಿಕಳಂಜ ಕುಣಿತ

ಆಟಿ ಕಳೆಂಜ

ಆಟಿ ಕಳೆಂಜ ತುಳು ನಾಡಿನ ಜನಪದ ಕುಣಿತಗಳಲ್ಲಿ ಒಂದು ಆಚರಣಾತ್ಮಕ ಕಲಾ ಪ್ರಕಾರ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚಾಗಿ ನಲಿಕೆ’ ಜನವರ್ಗದಲ್ಲಿ ಕಾಣಸಿಗುವ ಕುಣಿತ. ಇದೇ ಕುಣಿತವನ್ನು ಬೆಳ್ತಂಗಡಿ ಭಾಗದಲ್ಲಿ ‘ಮೇರ’ ಜನವರ್ಗದವರು ನಡೆಸಿಕೊಡುತ್ತಾರೆ. (ಯದುಪತಿ ಗೌಡ, ಸಂಶೋಧಕರು ಮಂಗಳೂರು ವಿಶ್ವ ವಿದ್ಯಾಲಯ-). ಈ ಕುಣಿತವನ್ನು ಆಷಾಡ ತಿಂಗಳಲ್ಲಿ ನಡೆಸುವುದರಿಂದ ಇದನ್ನು ಆಟಿ ಕಳಂಜ ಎಂತಲೂ ಕರೆಯಲಾಗಿದೆ. ಕಳೆಂಜ ಎಂದರೆ ಚಿಕ್ಕ ಬಾಲಕ, ದುಷ್ಟ ಶಕ್ತಿಗಳನ್ನು ಹೊಡೆದೋಡಿಸುವ ಮಾಂತ್ರಿಕ ಎಂದರ್ಥವೂ ಇದೆ.ಕಳಂಜನು ಊರಿಗೆ ಬಂದ ಮಾರಿಯನ್ನು (ರೋಗ-ರುಜಿನವನ್ನು) ಹೊಡೆದೋಡಿಸುತ್ತಾನೆ ಎನ್ನುವ ಆಶಯದಿಂದಾಗಿ ಈ ಕುಣಿತ …

ಪೂರ್ತಿ ಓದಿ...

ಆದಿವಾಸಿ ಜಾನಪದ

ಪ್ರವೇಶ ‘ಬರಹ’ಕ್ಕೆ ಅದಿಕೃತತೆ ಬರುವ ಮುಂಚೆ ‘ಮಾತು’ ಲೋಕದ ಎಲ್ಲಾ ತಿಳುವಳಿಕೆಯನ್ನು ತನ್ನಲ್ಲಿಯೇ ಅಡಗಿಸಿಕೊಂಡು, ಒಂದು ತಲೆಮಾರಿನಿಂದ ಮತ್ತೊದು ತಲೆಮಾರಿಗೆ ಪ್ರಸರಣವಾಗುತ್ತಿತ್ತು. ‘ಬರಹ’ ಇಂತಹ ಮಾತಿನ ತಿಳುವಳಿಕೆಯನ್ನು ಸಂಕೇತಗಳಲ್ಲಿ ಉಳಿಸಲಾರಂಬಿಸಿತು. ಇದು ಜಾಗತಿಕವಾಗಿ ಘಟಿಸಿದ ಮಹಾಪಲ್ಲಟ. ಇದರಿಂದಾಗಿ ‘ಮಾತು’ ಪಡೆದ ಅದಿಕೃತ ಬರಹಕ್ಕೆವರ್ಗವಾಯಿತು. ‘ಬರಹ’ ತನ್ನ ದೀರ್ಘಕಾಲೀನ ಬಾಳಿಕೆಯ ಕಾರಣಕ್ಕೆ ಮಾತಿಗಿಂತ ಮೇಲುಗೈ ಸಾದಿಸಿತು. ಆನಂತರ ಈ ತನಕ ಮಾತು ಮತ್ತು ಬರಹ ಜೊತೆಜೊತೆಯಲ್ಲೇ ಸಾಗಿಬರುತ್ತಿವೆ. ಮಾತುಗಳಲ್ಲಿರುವ ಜನಸಾಮಾನ್ಯರ ತಿಳುವಳಿಕೆಯು ‘ಬರಹ’ ರೂಪಕ್ಕೆ ಬಂದು ಬರಹ ಓದುವ ಜನವರ್ಗದಲ್ಲಿ ಸಂವಹನಗೊಳ್ಳುತ್ತಿದೆ. ಆದರೆ ಲೋಕದ ಚರಿತ್ರೆಯನ್ನು …

ಪೂರ್ತಿ ಓದಿ...

ಕನ್ನಡ ಜನಪದ ಗೀತೆಗಳು ಮತ್ತು ಲಾವಣಿಗಳು

ಜನಪದ ಸಾಹಿತ್ಯದಲ್ಲಿ ಗೀತೆಯೊಂದು ಪ್ರಮುಖ ಪ್ರಕಾರ. ಅದು ಮುಟ್ಟದ ವಸ್ತುವಿಲ್ಲ, ಸಂಸಾರದ ಮುಖಗಳೆಲ್ಲವೂ ಇಲ್ಲಿ ಚಿತ್ರಣಗೊಂಡಿವೆ. ತಾಯಿ ಮಗಳು, ಅತ್ತೆ ಸೊಸೆ, ಅಣ್ಣ ತಂಗಿ, ಅತ್ತಿಗೆ ನಾದಿನಿ ಮೈದುನರು, ಸವತಿ ಓರಗಿತ್ತಿಯರು, ಪತಿ ಪತ್ನಿಯರು, ತಂದೆ ಮಗ, ತವರು ಸೂಳೆಗಾರಿಕೆ, ಹೆಣ್ಣು ಜನ್ಮ, ಮಕ್ಕಳು ಮೊಮ್ಮಕ್ಕಳು, ಬಸಿರು ಬಯಕೆ, ಗೆಣೆಯ ಗೆಣೆತಿಯರು, ಸಾವು ನೋವು, ಬಾಣಂತಿತನ, ನೆಂಟರು, ಬಂಜೆತನ, ಪ್ರೇಮ ದ್ವೇಷ, ಮುನಿಸು ಜಗಳ ಹೀಗೆ ನೂರಾರು ಸಂಗತಿಗಳು ಇಡೀ ಹಳ್ಳಿಯ ಬದುಕಿನ ಉಸಿರು ಹಾಡಾಗಿ ಹೊಮ್ಮುತ್ತವೆ. ಹಾಡಿನ ಜೋಡಿಯಿಲ್ಲದೇ ಯಾವ ಕೆಲಸವೂ ಸಾಗುವುದಿಲ್ಲ. …

ಪೂರ್ತಿ ಓದಿ...

ಕರ್ನಾಟಕ ಜಾನಪದ

ಭಾರತ ದೇಶದಲ್ಲೇ ನಮ್ಮ ಕರ್ನಾಟಕದ ಜಾನಪದ ಸಂಸ್ಕೃತಿ ಅತ್ಯಂತ ಶ್ರೀಮಂತವಾಗಿದೆ. ಕಲೆ, ಸಾಹಿತ್ಯ, ನೃತ್ಯ(ಡೊಳ್ಳು ಕುಣಿತ, ಕಂಸಾಳೆ, ಕರಡಿ ಮಜಲು, ವೀರಗಾಸೆ, ನಂದಿಕೋಲು ಕುಣಿತ, ಇತ್ಯಾದಿ), ನಾಟಕ(ಬಯಲಾಟ, ದೊಡ್ಡಾಟ, ಶ್ರೀ ಕೃಷ್ಣಪಾರಿಜಾತ, ಯಕ್ಷಗಾನ) ಮುಂತಾದ ವಿವಿಧ ಪ್ರಕಾರಗಳನ್ನು ನಮ್ಮ ಕನ್ನಡ ಜಾನಪದ ಸಂಸ್ಕೃತಿಯಲ್ಲಿ ಕಾಣಬಹುದು. ಕನ್ನಡದ ಜಾನಪದ ಸಂಸ್ಕೃತಿಯು ಒಂದು ಭಾಗವಾದ ಜಾನಪದ ಗೀತೆಗಳು ಅತ್ಯಂತ ವೈವಿಧ್ಯಮಯವಾಗಿ ಕನ್ನಡನಾಡಿನ ವಿವಿಧ ಪ್ರದೇಶಗಳ ಪ್ರಾದೇಶಿಕ ಸೊಗಡುಗಳನ್ನು ನಮ್ಮ ಮುಂದಿನ ಪೀಳಿಗೆಗೆ ಜೋಪಾನ ಮಾಡಿವೆ ಎಂದರೆ ತಪ್ಪಲ್ಲ. ಇಂದಿನ ಪಾಶ್ಚಾತ್ಯ ಶೈಲಿಯ ಸಂಗೀತದ ಮಧ್ಯೆ ಜಾನಪದ ಗೀತೆಗಳು …

ಪೂರ್ತಿ ಓದಿ...