ಮುಖಪುಟ » Tag Archives: ಕಲಾವಿದರು (ಪುಟ 10)

Tag Archives: ಕಲಾವಿದರು

ಗಂಗಮ್ಮ ಕೇಶವಮೂರ್ತಿ

Gangamma Keshavamurthy

ಗಂಗಮ್ಮ ಕೇಶವಮೂರ್ತಿ ಸಂದರ್ಶನ: ಅನುಪಮಾ ಫಾಸಿ ಇಂದಿನಿಂದ ಕರ್ನಾಟಕ ಗಮಕ ಕಲಾ ಪರಿಷತ್ತಿನಲ್ಲಿ ಗಮಕ ಸಮ್ಮೇಳನ ನಡೆಯುತ್ತಿದೆ.  ಈ ಗಮಕ ಸಮ್ಮೇಳನದ ಅಧ್ಯಕ್ಷತೆ ವಹಿಸುತ್ತಿರುವವರು ಗಮಕ ಕಲೆಯಲ್ಲಿ ಬಹಳಷ್ಟು ಸಾಧನೆ ಮಾಡಿ ಅನೇಕರಿಗೆ ಸ್ಪೂರ್ತಿಯಾಗಿರುವವರು ಗಂಗಮ್ಮ ಕೇಶವಮೂರ್ತಿಯವರು.  ಅವರ ಅನುಭವಗಳು ಇಂತಿವೆ: ಗಮಕದಲ್ಲಿ ಆಸಕ್ತಿ ಬೆಳೆದಿದ್ದು ಹೇಗೆ? ನನ್ನ ತಂದೆ ಮೇಷ್ಟ್ರು. ಅವರಿಗೆ ಬೇರೆ ಬೇರೆ ಕಡೆಗೆ ವರ್ಗವಾಗುತ್ತಿತ್ತು. ಹೀಗಾಗಿ ಅವರು ಎಲ್ಲಿಗೆ ಹೋದರೂ ಅಲ್ಲಿನ ವಿಶೇಷತೆಯನ್ನು ಗಮನಿಸಿ ಕಲಿತುಕೊಳ್ಳುತ್ತಿದ್ದರು. ಅವರ ವಿಶೇಷ ಆಸಕ್ತಿ ಇದ್ದದ್ದು ಹಾಡುಗಳನ್ನು ಹಾಡುವುದರಲ್ಲಿ. ಶಾಲೆಯಲ್ಲಿನ ಪದ್ಯಗಳನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದರು. …

ಪೂರ್ತಿ ಓದಿ...

ಸಂ.ಗೋ. ಬಿಂದೂರಾಯರು

sango bindooraayaru

ತಮ್ಮ ಸುಶ್ರಾವ್ಯ ಕಾವ್ಯವಾಚನದ ಮೂಲಕ ಮಹಾಭಾರತದ ಕಾಲಕ್ಕೆ ಕೇಳುಗರನ್ನು ಕೊಂಡೊಯ್ಯುತ್ತಿದ್ದ ಸಂ. ಗೋ.  ಬಿಂದೂರಾಯರು ಜನವರಿ 24, 1877ರಲ್ಲಿ  ಚಳ್ಳಕೆರೆ ತಾಲ್ಲೂಕಿನ ತಳುಕಿನಲ್ಲಿ ಜನಿಸಿದರು. ತಂದೆ ಗೋವಿಂದರಾಯರು, ತಾಯಿ ರಮಾಬಾಯಿ. ಬಿಂದೂರಾಯರ ಪ್ರಾರಂಭಿಕ ಶಿಕ್ಷಣ ಚಿತ್ರದುರ್ಗದಲ್ಲಿ ನಡೆಯಿತು.  ರಾಯರು ತರಗತಿಯಲ್ಲಿ ಕುಳಿತದ್ದಕ್ಕಿಂತ ಹರಿಕಥೆ, ಸಂಗೀತ ಕಚೇರಿಯಲ್ಲಿ ಕುಳಿತದ್ದೇ ಹೆಚ್ಚು.  ರಾಯರು ಶಿಕ್ಷಣದ ನಂತರ ಅರಣ್ಯ ಇಲಾಖೆಯಲ್ಲಿ ಉದ್ಯೋಗ ಪ್ರಾರಂಭಿಸಿ, ನಂತರದಲ್ಲಿ ಬದುಕಿಗಾಗಿ  ಗಂಧದೆಣ್ಣೆ ಕಾರ್ಖಾನೆ, ವಸ್ತು ಪ್ರದರ್ಶನ ಶಾಖೆ, ಕೃಷ್ಣರಾಜೇಂದ್ರ ಮಿಲ್ ಹೀಗೆ ಹಲವಾರು ಕಡೆ ದುಡಿದರು. ಬಿಂದೂರಾಯರು ನೌಕರಿ ನಿಮಿತ್ತ ಮೈಸೂರು ಸೇರಿದ …

ಪೂರ್ತಿ ಓದಿ...

ಕೊಡಗಿನ ಅನಂತಪದ್ಮನಾಭರಾವ್

anantapadmanabha rao

ಒಂದು ಕಾಲದಲ್ಲಿ ಕೊಡಗು ಒಂದು ಸ್ವತಂತ್ರ ಸಂಸ್ಥಾನವಾಗಿದ್ದು ಅಲ್ಲಿನ ಹಾಲೇರಿ ರಾಜ ಮನೆತನದವರು ಈ ರಾಜ್ಯವನ್ನು ಆಳುತ್ತಿದ್ದರು. ಅನಂತರದಲ್ಲಿ ಇದು ಒಂದು ಪ್ರತ್ಯೇಕ ರಾಜ್ಯವಾಗಿ 1956 ರಲ್ಲಿ ರಾಜ್ಯ ವಿಭಜನೆಯಾದಾಗ ಕರ್ನಾಟಕಕ್ಕೆ ಸೇರಿ ಈಗ ಒಂದು ಜಿಲ್ಲೆಯಾಗಿದೆ. ಸಂಪೂರ್ಣ ಆಂಗ್ಲಾಡಳಿತಕ್ಕೆ ಒಳಪಟ್ಟಿದ್ದ ಕೊಡಗು ಆಂಗ್ಲಾನುಕರಣೆಯನ್ನೇ ರೂಢಿಸಿಕೊಂಡಿತ್ತು. ಕನ್ನಡ ಸಂಸ್ಕೃತಿ-ಭಾಷಾಭಿಮಾನದ ಬಗ್ಗೆ ಅಂತಹ ಕಾಳಜಿಯಿರಲಿಲ್ಲ. ಅಂತಹ ಒಂದು ಸಂದರ್ಭದಲ್ಲಿ ಮೈಸೂರಿನ  ಕುಟುಂಬವೊಂದು ಕೊಡಗಿಗೆ ವಲಸೆ ಹೋಯಿತು. ಅಲ್ಲಿಯೇ ನೆಲೆ ನಿಂತಿತು. ಇಂತಹ ಕುಟುಂಬದಿಂದ ಬಂದವರೇ ‘ಮೈ.ಶೇ. ಅನಂತಪದ್ಮನಾಭರಾಯರು’. ಹೆಸರಾಂತ ಸಾಹಿತಿ, ಗಮಕಿ. ಇವರ ಜನನ ದಿನಾಂಕ …

ಪೂರ್ತಿ ಓದಿ...

ಗಮಕ

ಪೀಠಿಕೆ ಗಮಕ ಕಲೆ-ಪೀಠಕೆ : ಗಮಕ ಕಲೆ ಅತ್ಯಂತ ಪ್ರಾಚೀನ ಕಾಲದಿಂದಲೂ ರೂಢಿಯಲ್ಲಿತ್ತು. ವಾಲ್ಮೀಕಿ ಮಹರ್ಷಿಯು ಲವ ಕುಶರಿಂದ ರಾಮಾಯಣ ಕಾವ್ಯವನ್ನು ಗಮಕ ಶೈಲಿಯಲ್ಲಿ ಹೇಳಿಸಿದನೆಂದು ಅದೇ ಕಾವ್ಯದಲ್ಲಿ ಹೇಳಿದೆ. ಈಗ ಸಂಸ್ಕೃತ ಕಾವ್ಯಗಳನ್ನು ಆಯಾ ಛಂದಸ್ಸಿನ ಮಟ್ಟಿನಲ್ಲಿ ಓದುವ /ಹೇಳುವ ಪದ್ಧತಿ ಇದೆ. ರಾಗ ಸಂಯೋಜನೆ ಮಾಡಿಹೇಳುವ ಪದ್ಧತಿಯೂ ಇದೆ. ಆದರೆ ತಾಳಬದ್ಧವಾಗಿ ಹೇಳುವ ಕ್ರಮ ಇರವುದಿಲ್ಲ. ಈ ಗಮಕ ವಾಚನ ಕ್ರಮ ಅಥವಾ ಕಾವ್ಯಗಳನ್ನು, ರಾಗ, ಶೃತಿ ಬದ್ಧವಾಗಿ ತಾಳದ ಹಂಗಿಲ್ಲದೆ ಹಾಡುವ ಪದ್ಧತಿ ಕನ್ನಡಕ್ಕೆ ಮಾತ್ರ ವಿಶಿಷ್ಟವಾದುದು. ಬೇರೆ ಯಾವ ಭಾರತೀಯ …

ಪೂರ್ತಿ ಓದಿ...