ಮುಖಪುಟ » Tag Archives: ಕನ್ನಡ ಸಾಹಿತ್ಯ (ಪುಟ 2)

Tag Archives: ಕನ್ನಡ ಸಾಹಿತ್ಯ

ಕವಿರಾಜ ಮಾರ್ಗದ ಪೀಠಿಕೆ

ಕವಿರಾಜಮಾರ್ಗ ೧. ಪೀಠಿಕೆ ೨. ಪ್ರಥಮ-ಪರಿಚ್ಛೇದಂ – ದೋಷ್ಯಾ – ದೋಷಾನುವರ್ಣನ – ನಿರ್ಣಯಂ ೩. ದ್ವಿತೀಯ ಪರಿಚ್ಛೇದಂ – ಶಬ್ದಾಲಂಕಾರ – ವರ್ಣನ – ನಿರ್ಣಯಂ ೪. ತೃತೀಯ ಪರಿಚ್ಛೇದಂ – ಅರ್ಥಾಲಂಕಾರ ಪ್ರಕರಣಂ ೫. ಪದ್ಯಗಳ ಸೂಚಿ ೧. ಕವಿರಾಜಮಾರ್ಗದ ಹಸ್ತಪ್ರತಿಗಳು, ಮುದ್ರಿತ ಆವೃತ್ತಿಗಳು ಮತ್ತು ಅಧ್ಯಯನ ಗ್ರಂಥಗಳು : ಆಗಸ್ಟ್ ೧೮೯೭ ರಲ್ಲಿ ಕೆ. ಬಿ. ಪಾಠಕರು ಮೂರು ಹಸ್ತಪ್ರತಿಗಳ ಆಧಾರದಿಂದ ಕವಿರಾಜಮಾರ್ಗವನ್ನು ಮೊತ್ತಮೊದಲಿಗೆ ಸಂಪಾದಿಸಿ ಮುದ್ರಣಕ್ಕೆ ಕೊಟ್ಟರು. ಗ್ರಂಥವು ೧೮೯೮ ರಲ್ಲಿ ಬೆಂಗಳೂರು ಗೌರ‍್ನಮೆಂಟ್ ಸೆಂಟ್ರಲ್ ಪ್ರೆಸ್‌ನಲ್ಲಿ ಮುದ್ರಿತವಾಗಿ …

ಪೂರ್ತಿ ಓದಿ...

ಕನ್ನಡ ಭಾಷೆ – ಅರ್ಥಗಾರಿಕೆ ವಿಚಾರಸಂಕಿರಣ

ಕನ್ನಡ ಭಾಷೆಗೆ ಸುಮಾರು ಒಂದು ಸಾವಿರ ವರ್ಷವನ್ನು ಮೀರಿದ ಇತಿಹಾಸವಿದೆ. ಪ್ರಾಚೀನ ಹಳಗನ್ನಡದಿಂದ ಹಿಡಿದು ಇಂದಿನ ಆಧುನಿಕ ಹೊಸಗನ್ನಡದವರೆಗೆ ಅದರ ವ್ಯಾಪ್ತಿ ಹರಡಿಕೊಂಡಿದೆ. ಇಷ್ಟಿದ್ದರೂ ಈ ಕನ್ನಡ ಏಕರೂಪಿಯಾಗಿಲ್ಲ. ಬಹುಮುಖೀಯಾದ ವೈವಿಧ್ಯಮಯ ಕನ್ನಡಗಳು ಹಿಂದೆ ಇದ್ದವು ಎನ್ನುವುದು ಕವಿರಾಜಮಾರ್ಗಕಾರನ “ಸಾವಿರದ ದೇಸಿಯಿಂದ ವಾಸುಕಿಗೆ ಬೇಸರ’ ಎಂಬ ಮಾತಿನಿಂದ ತಿಳಿಯುತ್ತದೆ. ಹೊಸಗನ್ನಡವು ದೇಸಿಕನ್ನಡ, ಪ್ರಾದೇಶಿಕ ಕನ್ನಡ, ಶಾಸ್ತ್ರೀಯ ಕನ್ನಡ, ಸಂಸ್ಕೃತ ಭೂಯಿಷ್ಠ ಕನ್ನಡ, ಗ್ರಾಂಥಿಕ ಕನ್ನಡ, ಆಡುನುಡಿಯ ಕನ್ನಡ, ಶಾಸನಭಾಷೆಯ ಕನ್ನಡ, ದಸ್ತಾವೇಜು, ಕಂದಾಯ ಇಲಾಖೆ ಕನ್ನಡ… ಹೀಗೆ ದೊಡ್ಡ ಪಟ್ಟಿಯೇ ಸಿದ್ಧವಾಗುತ್ತದೆ. ಜಾತಿ, ಬುಡಕಟ್ಟು, …

ಪೂರ್ತಿ ಓದಿ...

ಕವಿರಾಜ ಮಾರ್ಗದ ಕರ್ತೃತ್ವವಿಚಾರ

ಪೂರ್ವೋಕ್ತ ಆವೃತ್ತಿಗಳ ಪೀಠಿಕೆಗಳು ಮತ್ತು ಪ್ರಕಟವಾಗಿರುವ ಸಾಹಿತ್ಯಚರಿತ್ರೆಗಳು ಹಾಗು ಸ್ವತಂತ್ರ ಗ್ರಂಥಗಳು ಮತ್ತೊಮ್ಮೆ ನೃಪತುಂಗಪಕ್ಷದವರ ವಾದಗಳನ್ನೂ ಶ್ರೀ ವಿಜಯಪಕ್ಷದವರ ವಾದಗಳನ್ನೂ ಮಥನಮಾಡಿ, ತೂಗಿನೋಡಿ, ಕವೀಶ್ವರ ವಾದಕ್ಕೆ ಆಧಾರ ಸಾಲದೆಂದೂ, ನೃಪತುಂಗಪಕ್ಷವೂ ಶ್ರೀ ವಿಜಯಪಕ್ಷದ ಮುಂದೆ ದುರ್ಬಲವೆನಿಸುವುದೆಂದೂ ಒಂದು ರೀತಿಯ ನಿರ್ಣಯಕ್ಕೆ ಬಂದಿರುವುದನ್ನು ಕಾಣಬಹುದು. ಈ ಚರ್ಚೆಗಳಲ್ಲಿ ಪ್ರಕೃತ ಸಂಪಾದಕನ ಹೆಸರು ನೃಪತುಂಗಪಕ್ಷದಲ್ಲಿ ಒಮ್ಮೊಮ್ಮೆ ನಿರಾಕರಣೆಗಾಗಿ ಬಂದಿರುವುದನ್ನು ಇಲ್ಲಿ ಗಮನಿಸದೆ ಇರುವಂತಿಲ್ಲ. ಇಷ್ಟೊಂದು ಕೂಲಂಕಷವಾಗಿ ಉದ್ದಾಮ ಸಂಶೋಧಕರು ಪಕ್ಷ-ಪ್ರತಿಪಕ್ಷಗಳನ್ನು ಮಂಡಿಸಿರುವಾಗ, ಅದರ ಪುನರುಕ್ತಿ ಚರ್ವಿತಚರ್ವಣವೆನಿಸುವುದೆಂಬ ಕಾರಣದಿಂದ ಸಮುಸ್ಯೆಯ ಉದ್ಗಮ, ವಿಕಾಸ, ವೈವಿಧ್ಯಗಳ ಪ್ರತಿಪಾದನೆಗೆ ಇಲ್ಲಿ ಕೈಹಾಕಿಲ್ಲ. …

ಪೂರ್ತಿ ಓದಿ...