Recent Posts

ಸಿ ಕೆ ನಾಗರಾಜರಾವ್

C K Nagaraja Rao

ಸಾಹಿತಿ, ರಂಗಭೂಮಿ ಕಲಾವಿದ, ಪತ್ರಕರ್ತ, ಕನ್ನಡದ ಮಹಾನ್ ಕಾರ್ಯಕರ್ತರಾದ ಸಿ. ಕೆ ನಾಗರಾಜರಾವ್ ಅವರು ‘ಪಟ್ಟಮಹಾದೇವಿ ಶಾಂತಲಾದೇವಿ’ ಎಂಬ ಐತಿಹಾಸಿಕ ಕಾದಂಬರಿಗಾಗಿ ಮೊಟ್ಟಮೊದಲ ಬಾರಿಗೆ ಕನ್ನಡ ಸಾಹಿತ್ಯಕ್ಕೆ ‘ಮೂರ್ತಿದೇವಿ ಪ್ರಶಸ್ತಿ’ ಪಡೆದವರು. ಭಾರತೀಯ ಜನಜೀವನದ ಶಾಶ್ವತ ಮೌಲ್ಯಗಳ ಮಹತ್ವವನ್ನು ಎತ್ತಿಹಿಡಿಯುವ, ಭಾರತೀಯ ಭಾಷೆಗಳಲ್ಲಿ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಪ್ರಕಟವಾಗುವ ಅತ್ಯುತ್ತಮ ಗ್ರಂಥಕ್ಕೆ ಪ್ರಶಸ್ತಿ ಕೊಡುವ ಉದ್ದೇಶದಿಂದ ಭಾರತೀಯ ಜ್ಞಾನಪೀಠವು 1983ರಿಂದ ಪ್ರಾರಂಭಿಸಿರುವ ಈ ಪ್ರಶಸ್ತಿಯನ್ನು ಕನ್ನಡಕ್ಕೆ  ತಂದುಕೊಟ್ಟ ನಾಗರಾಜರಾಯರು ಹುಟ್ಟಿದ್ದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ 1915ರ ಜೂನ್ 12ರಂದು. ತಂದೆ ಕೃಷ್ಣಮೂರ್ತಿ ರಾವ್, ತಾಯಿ …

ಪೂರ್ತಿ ಓದಿ...

ಬಿ. ವಿ. ಕಾರಂತ

B V Karanth

ಕರ್ನಾಟಕದ ಅಸಾಮಾನ್ಯ ಪ್ರತಿಭಾವಂತರ ಪಂಕ್ತಿಯಲ್ಲಿ ಬಿ. ವಿ. ಕಾರಂತರ ಹೆಸರು ಶಾಶ್ವತವಾಗಿ ಪ್ರತಿಷ್ಠಾಪಿತವಾಗಿರುವಂತದ್ದು.   ರಂಗಭೂಮಿ ಮತ್ತು ಸಿನಿಮಾರಂಗದಲ್ಲಿ ಕಾರಂತರು ಹೊಸ ಭಾಷ್ಯ ಬರೆದಂತಹವರು. ಬಾಬುಕೋಡಿ ವೆಂಕಟರಮಣ ಕಾರಂತರು ಜನಿಸಿದ್ದು ಸೆಪ್ಟೆಂಬರ್ 19, 1929ರಂದು ದಕ್ಷಿಣ ಕನ್ನಡದ ಬಂಟ್ವಾಳ ತಾಲ್ಲೂಕಿನ ಮಂಚಿ ಎಂಬ ಹಳ್ಳಿಯಲ್ಲಿ.   ಬಾಬುಕೋಡಿ ನಾರಾಣಪ್ಪಯ್ಯ-ಲಕ್ಷ್ಮಮ್ಮ ದಂಪತಿಗಳ ಆರು ಮಕ್ಕಳಲ್ಲಿ ಹಿರಿಯ ಮಗನಾದ ವೆಂಕಟರಮಣನನ್ನು (ಬಿ.ವಿ.ಕಾರಂತ) ತಾಯಿ ಲಕ್ಷ್ಮಮ್ಮ ಕೊಂಡಾಟದಿಂದ’ ‘ಬೋಯಣ್ಣ’ಎಂದು ಕರೆಯುತ್ತಿದ್ದರು. ತಾಯಿ ಹಾಡುತ್ತಿದ್ದ ಸಂಪ್ರದಾಯದ ಹಾಡುಗಳು,  ಭಜನೆಯ ಹಾಡುಗಳು; ಊರಿನ ಹರಿಕಥೆ, ಯಕ್ಷಗಾನಗಳು,  ಸುತ್ತಮುತ್ತಲಿನ ಊರುಗಳ ಜಾತ್ರೆ, ಕೋಲ, ರಥೋತ್ಸವ, ಪಾಡ್ದನಗಳು, …

ಪೂರ್ತಿ ಓದಿ...

ಶ್ರೀರಂಗ

sriranga

ಕನ್ನಡ ಸಾಹಿತ್ಯ ಲೋಕದ ಪ್ರಸಿದ್ಧ ನಾಟಕಕಾರ, ಸಾಹಿತಿ ಮತ್ತು ಶ್ರೇಷ್ಠ ವಿದ್ವಾಂಸ ‘ಶ್ರೀರಂಗ’ ಎಂಬ ಕಾವ್ಯನಾಮಾಂಕಿತ ಮಹಾನ್ ಪ್ರತಿಭಾನ್ವಿತ ಆದ್ಯ ರಂಗಾಚಾರ್ಯರ ಜನ್ಮ ದಿನ ಸೆಪ್ಟಂಬರ್ 26. ಅವರು 1904ರಲ್ಲಿ ವಿಜಾಪುರ ಜಿಲ್ಲೆಯ ಅಗರಖೇಡದಲ್ಲಿ ಜನಿಸಿದರು. ಪುಣೆಯಲ್ಲಿ ಬಿ.ಎ ವಿಧ್ಯಾಭ್ಯಾಸದ ನಂತರ, ಲಿಂಕನ್ ವಿಶ್ವವಿಧ್ಯಾಲಯದಲ್ಲಿ ಉನ್ನತ ವ್ಯಾಸಂಗ ನಡೆಸಿದರು. ನಂತರ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿ 20 ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಕರ್ನಾಟಕ ಏಕೀಕರಣದಲ್ಲಿ ಶ್ರೀರಂಗರು ಅತ್ಯಂತ ಮಹತ್ವದ ಪಾತ್ರವನ್ನು ನಿರ್ವಹಿಸಿದರು. 1944ರಲ್ಲಿ ಕೆಲವು ಗೆಳೆಯರ ಜೊತೆಗೆ ಕೂಡಿಕೊಂಡು, ಶ್ರೀರಂಗರು ಅಖಿಲ …

ಪೂರ್ತಿ ಓದಿ...
  • vishwanandini-013

    ವಿಶ್ವನಂದಿನಿ ಲೇಖನ ಮಾಲೆ – 013

    ಅನುಷ್ಠಾನ ಸುರಭಿ (ವಿಷ್ಣುಭಕ್ತರು ಮಾಡಬೇಕಾದ ಅನುಷ್ಠಾನ, ಅನುಸಂಧಾನಗಳ ಕುರಿತು ತಿಳಿಸುವ ವಿಶ್ವನಂದಿನಿಯ ಭಾಗ) ಪ್ರತೀ ಸತ್ಕರ್ಮದ ಆರಂಭದಲ್ಲಿ ಮಾಡಬೇಕಾದ ಸಂಕಲ್ಪದ ಅರ್ಥ ಪ್ರತಿಯೊಂದು ಕರ್ಮದ ಆರಂಭದಲ್ಲಿ ಸಂಕಲ್ಪವನ್ನು ಮಾಡಬೇಕು. ಅಂತ್ಯದಲ್ಲಿ ಅದನ್ನು ಸಮರ್ಪಣೆ ಮಾಡಬೇಕು. ಇದನ್ನು ಸಾಮಾನ್ಯವಾಗಿ ಎಲ್ಲ ವೈದಿಕ ಮತಗಳ ಧಾರ್ಮಿಕರೂ ಆಚರಿಸುವ ಕರ್ಮ. ಆರಂಭದಲ್ಲಿ ದೇಶ-ಕಾಲಗಳನ್ನು ಹೇಳಿ, ಇಂಥಹ ಪ್ರದೇಶದಲ್ಲಿ, ಇಂತಹ ಸಮಯದಲ್ಲಿ ಇಂತಹ ಪ್ರಯೋಜನಕ್ಕಾಗಿ ಇಂತಹ ಸತ್ಕರ್ಮವನ್ನು ಅನುಷ್ಠಾನ ಮಾಡುತ್ತಿದ್ದೇನೆ, ಎನ್ನುವದು ಸಂಕಲ್ಪ. ಇಂತಹ ಸತ್ಕರ್ಮವನ್ನು ಮಾಡಿದ್ದೇನೆ, ಅದರ ಫಲ ನನಗೆ ದೊರೆಯಲಿ ಎನ್ನುವದು ಅಂತ್ಯದಲ್ಲಿ ಮಾಡುವ ಸಮರ್ಪಣೆ. ಮೊದಲಿಗೆ …

    ಪೂರ್ತಿ ಓದಿ...
  • ವಿಶ್ವನಂದಿನಿ ಲೇಖನ ಮಾಲೆ – 006

  • ಪರೀಕ್ಷೆಯ ಪ್ರಶ್ನೆಯನ್ನು ವಿರೋಧಿಸಿ ತುಂಬಿದ ಸಭಾಗೃಹದಿಂದ ಹೊರನಡೆದ ರಾಷ್ಟ್ರಾಭಿಮಾನಿ ಸುಭಾಷಚಂದ್ರ ಬೋಸ್

    ನೇತಾಜಿ ಸುಭಾಷಚಂದ್ರ ಬೋಸ್ ‘ಐ.ಸಿ.ಎಸ.’ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಇಂಗ್ಲೆಂಡ್.ನಿಂದ ಭಾರತಕ್ಕೆ ಮರಳಿದರು. ಇಲ್ಲಿ ಅವರಿಗೆ ಇನ್ನೊಂದು ಲಿಖಿತ ಪರೀಕ್ಷೆಯನ್ನು ಎದುರಿಸಬೇಕಾಗಿತ್ತು. ಪರೀಕ್ಷೆಯಲ್ಲಿ ಕುಳಿತುಕೊಂಡ ಅವರು ಪ್ರಶ್ನೆ ಪತ್ರಿಕೆಯನ್ನು ನೋಡಿ ಕೂಡಲೇ ರೊಚ್ಚಿಗೆದ್ದರು. ಆ ಪ್ರಶ್ನೆ ಪತ್ರಿಕೆಯಲ್ಲಿ ಭಾಷಾಂತರಕ್ಕೆ ಒಂದು ಪರಿಚ್ಛೇದವನ್ನು ನೀಡಲಾಗಿತ್ತು. ಆ ಪರಿಚ್ಛೇದದ ಶಿರೋನಾಮೆಯು ಮುಂದಿನಂತೆ ಇತ್ತು – ‘Indian Soldiers are generally Dishonest’ (ಅಂದರೆ ‘ಸಾಮಾನ್ಯವಾಗಿ ಭಾರತೀಯ ಸೈನಿಕರು ಅಪ್ರಾಮಾಣಿಕರು’). ಇಂತಹ ವೋಶಯದ ಮೇಲೆ ಇದ್ದ ಆಂಗ್ಲ ಪರಿಚ್ಛೇದವನ್ನು ಪರೀಕ್ಷಾರ್ಥಿಗಳು ಭಾಷಾಂತರ ಮಾಡಬೇಕಿತ್ತು. ಇದನ್ನು ನೋಡಿದ ಸುಭಾಷಚಂದ್ರ ಈ ಪ್ರಶ್ನೆಗೆ …

    ಪೂರ್ತಿ ಓದಿ...
  • panduranga

    ಪಂಢರಪುರದ ವಾರಕರಿ

  • ಅಲೆಮಾರಿಗಳ ‘ಬುಡ್ಗನಾದ’

    ಅಲೆಮಾರಿಗಳ ‘ಬುಡ್ಗನಾದ’: ಜಾನಪದ ಕಲೆಯನ್ನು ರಕ್ತಗತವಾಗಿ ಅಳವಡಿಸಿಕೊಂಡಿರುವ ಅಲೆಮಾರಿ, ಬುಡಕಟ್ಟುಗಳು ದೇಶದಲ್ಲಿ 612ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದು 15 ಕೋಟಿಗೂ ಮೀರಿದ ಜನಸಂಖ್ಯೆ ಹೊಂದಿವೆ. ಇವರು ನಿರಕ್ಷರಿಗಳಾಗಿ ಸಾಮಾಜಿಕವಾಗಿ ತಿರಸ್ಕೃತರಾದರೂ ಸಾಂಸ್ಕೃತಿಕವಾಗಿ ಸೊರಗಿದವರಲ್ಲ. ಅವುಗಳಲ್ಲಿ ಬುಡ್ಗಜಂಗಮ, ಲಂಬಾಣಿ, ಬುಡಬುಡಿಕೆ ಮುಂತಾದವರ ಜೀವನಶ್ರದ್ಧೆ, ಬದ್ಧತೆ, ಸಾಂಸ್ಕೃತಿಕ ಶ್ರೀಮಂತಿಕೆ ಹಾಗೂ ಸೊಬಗನ್ನು ಸೂಸುವ ನಾಟಕಗಳು ಈಚೆಗಷ್ಟೆ ಬರುತ್ತಿವೆ. ಒಕ್ಕೂಟ ವ್ಯವಸ್ಥೆಯ ನಿಜವಾದ ವಾರಸುದಾರರೆನಿಸುವ ಅಲೆಮಾರಿ ಬುಡ್ಗಜಂಗಮ ಸಮುದಾಯದ ಬದುಕನ್ನೇ ಕೇಂದ್ರವಾಗುಳ್ಳ ‘ಬುಡ್ಗನಾದ’ ನಾಟಕವನ್ನು, ಅದೇ ಸಮುದಾಯದ ಬಾಲಗುರುಮೂರ್ತಿ ರಚಿಸಿ ಸುರೇಶ ವರ್ತೂರು ನಿರ್ದೇಶಿಸಿ ರವೀಂದ್ರ ಕಲಾಕ್ಷೇತ್ರದಲ್ಲಿ ಈಚೆಗೆ ಪ್ರಯೋಗಿಸಲಾಯಿತು. …

    ಪೂರ್ತಿ ಓದಿ...
  • ಕೋಳಿ ಅಂಕ

    ಕೋಳಿ ಅಂಕ

  • kolata

    ಕೋಲಾಟ

  • nambikegalu

    ಜನಪದ ನಂಬಿಕೆಗಳು

  • marriage

    ಮದುವೆ ಮನೆಯಲ್ಲಿ ಜರೆಯುವ ಹಾಡು

  • Kumaravyasa

    ಕುಮಾರವ್ಯಾಸ

    ಕುಮಾರವ್ಯಾಸ ಕನ್ನಡದ ಅತ್ಯುನ್ನತ ಕವಿಗಳಲ್ಲಿ ಒಬ್ಬ. ಕನ್ನಡ ಸಾಹಿತ್ಯದ ದಿಗ್ಗಜರಲ್ಲಿ ಒಬ್ಬ ಎಂದರೆ ತಪ್ಪಾಗಲಾರದು. ಕುಮಾರವ್ಯಾಸನ ಮೂಲ ಹೆಸರು ನಾರಣಪ್ಪ. “ಗದುಗಿನ ನಾರಣಪ್ಪ” ಎಂದು ಸಾಮಾನ್ಯವಾಗಿ ಕುಮಾರವ್ಯಾಸ ನನ್ನು ಗುರುತಿಸಲಾಗುತ್ತದೆ. ಈತನ ಕಾವ್ಯ ನಾಮ ಕುಮಾರವ್ಯಾಸ. ವ್ಯಾಸ ಮಹಾಕವಿಯ ಸಂಸ್ಕೃತ ಮಹಾಭಾರತದ ಅತ್ಯದ್ಭುತ ಕನ್ನಡ ರೂಪವನ್ನು ರಚಿಸಿದ್ದರಿಂದ, ವ್ಯಾಸ ಮಹಾಕವಿಯ ಮಾನಸಪುತ್ರ ತಾನೆನ್ನುವ ವಿನೀತ ಭಾವದಿಂದ ನಾರಣಪ್ಪ ಕುಮಾರ ವ್ಯಾಸನಾಗಿದ್ದಾನೆ. ಈ ಹೆಸರು ಕುಮಾರವ್ಯಾಸನಿಗೆ ಅನ್ವರ್ಥವಾಗಿದೆ. ಕುಮಾರವ್ಯಾಸ ಗದುಗಿನ ವೀರನಾರಾಯಣ ದೇಗುಲದಲ್ಲಿನ ಕಂಬದ ಅಡಿಯಲ್ಲೇ ಗದುಗಿನ ಭಾರತವನ್ನು ರಚಿಸಿ ಓದುತ್ತಿದ್ದ ಎಂಬ ಪ್ರತೀತಿ ಸಹ …

    ಪೂರ್ತಿ ಓದಿ...
  • ಕನ್ನಡ ಕವಿಗಳ ಕಾವ್ಯ ಕಲ್ಪನೆ

  • ಭರತೇಶ ವೈಭವ

  • ರತ್ನಾಕರ ವರ್ಣಿ

  • ಪಂಪ

  • Master Hiranayya

    ಮಾಸ್ಟರ್ ಹಿರಣ್ಣಯ್ಯ

    ಜೀವನ: ನಾಟಕ ರತ್ನಾಕರ ಮಾಸ್ಟರ್ ಹಿರಣ್ಣಯ್ಯನವರು ಫೆಬ್ರವರಿ ೧೫, ೧೯೩೪ರಂದು ಮೈಸೂರಿನಲ್ಲಿ ಜನಿಸಿದರು. ಅವರ ಮೂಲ ಹೆಸರು ನರಸಿಂಹಮೂರ್ತಿ. ಕಲ್ಚರ್ಡ್ ಕಮೆಡಿಯನ್ ಎಂದು ಪ್ರಖ್ಯಾತರಾಗಿದ್ದ ಕೆ. ಹಿರಣ್ಣಯ್ಯ ಮತ್ತು ಶಾರದಮ್ಮ ದಂಪತಿಗಳ ಒಬ್ಬನೇ ಮಗ. ಓದಿದ್ದು ಇಂಟರ್ ಮೀಡಿಯೆಟ್ ವರೆಗೆ. ೧೯೫೨ರಲ್ಲಿ ತಂದೆಯೊಂದಿಗೆ ಕೂಡಿಕೊಂಡು ಅವರಿಂದಲೇ ರಂಗಶಿಕ್ಷಣ ಪಡೆದರು. ಮಾಸ್ಟರ್ ಹಿರಣ್ಣಯ್ಯನವರು ಬಾಲ್ಯದಲ್ಲಿರುವಾಗ ಅವರ ತಂದೆ ಮದರಾಸಿನಲ್ಲಿ ಬದುಕನ್ನರಸಿ ತಮ್ಮ ಕುಟುಂಬವನ್ನು ಅಲ್ಲಿಗೆ ಕೊಂಡೊಯ್ದರು. ಹೀಗಾಗಿ ಅಲ್ಲಿ ಅವರಿಗೆ ತಮಿಳು, ತೆಲುಗು ಮತ್ತು ಇಂಗ್ಲಿಷ್ ಭಾಷೆಗಳ ಅಭ್ಯಾಸವಾಯಿತು. ಜೊತೆ ಜೊತೆಗೆ ಮನೆಯಲ್ಲಿ ಕನ್ನಡದ ಬಾಯಿಪಾಠ …

    ಪೂರ್ತಿ ಓದಿ...
  • ಮರಿಯಪ್ಪ ನಾಟೇಕರ್

  • ಮಂಡ್ಯ ರಮೇಶ್

  • ಬಿ.ಜಯಮ್ಮ

  • ಬಾಲಕೃಷ್ಣ ನಿಡ್ವಣ್ಣಾಯ ಹಾಗೂ ಸತ್ಯಭಾಮಾ ನಿಡ್ವಣ್ಣಾಯ

  • yamuna murthy

    ಯಮುನಾ ಮೂರ್ತಿ

    ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಯಮುನಾ ಮೂರ್ತಿ ಅವರದ್ದು ಪ್ರಸಿದ್ಧ ಹೆಸರು. ಆಕಾಶವಾಣಿಯಲ್ಲಿ ನಿರ್ವಹಿಸಿದ್ದ ಹಿರಿಯ ಸೇವೆಯ ಜೊತೆಗೆ ನಾಟ್ಯರಂಗ, ರಂಗಭೂಮಿ, ಕಿರುತೆರೆ, ಸಿನಿಮಾ, ಬರವಣಿಗೆ ಹೀಗೆ ಯಮುನಾ ಮೂರ್ತಿ ಅವರು ಸಾಂಸ್ಕೃತಿಕ ಲೋಕದಲ್ಲಿ ಮೂಡಿಸಿರುವ ಕ್ರಿಯಾಶೀಲತೆಯ ಛಾಪು ಹಿರಿದಾದದ್ದು. ಯಮುನಾ ಮೂರ್ತಿಯವರು ಮಾರ್ಚ್ 8, 1933ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಸಾಂಗ್ಲಿ ಪಾಂಡುರಂಗರಾವ್ ಮತ್ತು ತಾಯಿ ವೆಂಕಮ್ಮನವರು. ಯಮುನಾ ಮೂರ್ತಿಯವರು ತಮ್ಮ ಏಳನೆಯ ವಯಸ್ಸಿನಲ್ಲಿಯೇ ಭರತ ನಾಟ್ಯವನ್ನೂ, ಹತ್ತನೆಯ ವಯಸ್ಸಿನಲ್ಲೇ ಕಥಕ್ಕಳಿ ನೃತ್ಯವನ್ನೂ ಅಭ್ಯಸಿಸತೊಡಗಿದರು. ಮುಂದೆ ಅವರು ಹಲವಾರು ನೃತ್ಯ ಪ್ರದರ್ಶನಗಳನ್ನು ನೀಡಿದರು. ಓದಿನಲ್ಲೂ …

    ಪೂರ್ತಿ ಓದಿ...
  • pratibha prahlad

    ಪ್ರತಿಭಾ ಪ್ರಹ್ಲಾದ್

  • udayashankar

    ಮಹಾನ್ ನೃತ್ಯ ಕಲಾವಿದ ಉದಯಶಂಕರ್

  • sahana

    ಸಹನಾ ಚೇತನ್

  • yamini

    ಯಾಮಿನಿ ಕೃಷ್ಣಮೂರ್ತಿ

ಸೊಬಗು: ಕಾವೇರಿಯಿಂದಮಾ ಗೋದಾವರಿವರಮಿರ್ಪ ನಾಡದಾ ಕನ್ನಡದೊಳ್ ಭಾವಿಸಿದ ಜನಪದಂ ವಸುಧಾ ವಲಯ ವಿಲೀನ ವಿಶದ ವಿಷಯ ವಿಶೇಷಂ ಅದರೊಳಗಂ ಕಿಸುವೊಳಲಾ ವಿದಿತ ಮಹಾ ಕೋಪಣ ನಗರದಾ ಪುಲಿಗೆರೆಯಾ ಸಧಭಿಮಸ್ತುತಮಪ್ಪೊಂಕುಂದದ ನಡುವಣ ನಾಡೆ ನಾಡೆ ಕನ್ನಡದ ತಿರುಳ್

ಕನ್ನಡವೆಂಬ ನಾಡಿನಲ್ಲಿ, ನುಡಿಯಲ್ಲಿ ಕನ್ನಡವೆಂಬ ಜನಪದವು ಹುಟ್ಟಿ ಅದು ಪ್ರಪಂಚದಲ್ಲಿ ಸೇರಿಕೊಂಡಿದ್ದರೂ ತನ್ನ ನಿಬ್ಬರ/ವಿಶೇಶವನ್ನು ದಿನವೂ ನಮ್ಮ ತಾಣ (ನಮ್ಮ ಕನ್ನಡ ನಾಡು) ತಿಳಿಯಪಡಿಸುತ್ತಿದೆ.

ಕನ್ನಡವೆಂಬ ನಾಡು ನುಡಿಬಲ, ಜನಪದಬಲ ಹೀಗೆ ತನ್ನ ಈ ಮೂರು ಬಲಗಳಿಂದ ವಿಶೇಶತೆಯನ್ನು ಪಡೆದು ಜಗತ್ತಿಗೆ ತಿಳಿಸುತ್ತಿದೆ.

Google+ Publisher
Loading...
Facebook Messenger for Wordpress