ಮುಖಪುಟ » ಆಧ್ಯಾತ್ಮ » ವಿಶ್ವನಂದಿನಿ ಲೇಖನ ಮಾಲೆ (ಪುಟ 2)

ವಿಶ್ವನಂದಿನಿ ಲೇಖನ ಮಾಲೆ

ವಿಶ್ವನಂದಿನಿ ಲೇಖನ ಮಾಲೆ – 009

vishwanandini-009

ಮಾಧ್ವರು ಎಂದರೆ ಹೇಗಿರಬೇಕು? (ಈ ಹೆಸರಿನ ಲೇಖನಗುಚ್ಛಗಳಲ್ಲಿ ನಾವು ಮಾಧ್ವರು ಹೇಗಿರಬೇಕು, ಹೇಗಿರಬಾರದು ಎನ್ನುವದನ್ನು ವಿಶ್ಲೇಷಿಸುತ್ತ ಹೋಗುತ್ತೇನೆ) ಪ್ರಶ್ನೆ ಅಂತಾ ಕೇಳುವ ಮುನ್ನ…. ಪ್ರಶ್ನೆ ಕೇಳುವದು ಎಂದಿಗೂ ನಮ್ಮನ್ನು ಸಣ್ಣವರನ್ನಾಗಿಸುವದಿಲ್ಲ. ಆದರೆ ಕೇಳುವ ಶೈಲಿ ನಮ್ಮನ್ನು ಸಣ್ಣವರನ್ನಾಗಿಸಿ ಬಿಡುತ್ತದೆ. ಕಾರಣ ಮಾತು ನಮ್ಮ ವ್ಯಕ್ತಿತ್ವದ ಪ್ರತಿಬಿಂಬ. ಆ ವ್ಯಕ್ತಿತ್ವ ಎಷ್ಟು ತೂಕದ್ದೊ ನಮ್ಮ ಮಾತೂ ಅಷ್ಟೇ ತೂಕದ್ದಾಗಿರುತ್ತದೆ. ನಾವು ಮಾಡುವ ಪ್ರಶ್ನೆಯ ಮೇಲೆ ನಮ್ಮ ಯೋಗ್ಯತೆ ಎಂಥದ್ದು, ಅಭಿರುಚಿ ಎಂಥದ್ದು ಅಂತೆಲ್ಲಾ ನಿರ್ಣಯಿಸಿ ಬಿಡಬಹುದು. ನಮಗಿರುವ ಜ್ಞಾನದ (?) ಆಳ ವಿಸ್ತಾರಗಳೆಷ್ಟು ಅಂತ ಅಳೆದುಬಿಡಬಹುದು. …

ಪೂರ್ತಿ ಓದಿ...

ವಿಶ್ವನಂದಿನಿ ಲೇಖನ ಮಾಲೆ – 008

ತತ್ವಸುರಭಿ ಸಂಸಾರವನ್ನು ಗೆಲ್ಲಬೇಕಾದರೆ ನಾವಿದನ್ನು ಅನುಷ್ಠಾನಕ್ಕೆ ತರಲೇಬೇಕು. ಉತ್ತಮ ಲೇಖಕರ ಲೇಖನಗಳನ್ನು ಓದಿದಾಗ, ಉತ್ತಮ ವಾಗ್ಮಿಗಳ ಮಾತನ್ನು ಆಲಿಸಿದಾಗ, ಅವರ ಕೆಲವು ಮಾತುಗಳು ಮನಸ್ಸಿನಸಲ್ಲಿ ಅಚ್ಚಳಿಯದೇ ನಿಂತುಬಿಡುತ್ತವೆ. ಅನೇಕ ಬಾರಿ ಅದನ್ನು ಮೆಲುಕು ಹಾಕುತ್ತಿರುತ್ತೇವೆ. ಐದು ಸಾವಿರವರ್ಷಗಳ ಹಿಂದೆ ಈ ಭರತಭೂಮಿಯಲ್ಲಿ ಒಬ್ಬ ವಾಗ್ಮಿ, ‘ವಾಗ್ವಿದಾಂವರ’ ಅವತರಿಸಿದ್ದ. ಅವನ ಒಂದು ಮಾತಲ್ಲ, ಅವನ ಇಡಿಯ ಗ್ರಂಥಕ್ಕೆ ಗ್ರಂಥ ಸಾಧಕನ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದುಬಿಡುವ ಗ್ರಂಥ. ಆ ಗ್ರಂಥದ ಹೆಸರು ಭಗವದ್ಗೀತೆ. ಅದನ್ನು ಹೇಳಿದ ವಾಗ್ಮಿ ಶ್ರೀಕೃಷ್ಣ. ಆ ಗೀತೆಯ ಪ್ರತಿಯೊಂದು ವಾಕ್ಯ, ಪ್ರತಿಯೊಂದು ಶಬ್ದ …

ಪೂರ್ತಿ ಓದಿ...

ವಿಶ್ವನಂದಿನಿ ಲೇಖನ ಮಾಲೆ – 007

vishwanandini-007

ಮತ್ತೊಬ್ಬರು ದುಃಖದಲ್ಲಿದ್ದಾಗ ಮಧ್ಯದಲ್ಲಿ ನುಸುಳುವ ಮುನ್ನ….. ಏಕಚಕ್ರಾನಗರದ ಬ್ರಾಹ್ಮಣನ ಮನೆಯ ಘಟನೆಯನ್ನು ವಿವರಿಸಿ, ಗಂಡಸರು ಕಲಿಯಬೇಕಾದ ಪಾಠವನ್ನು, ಭೀಮಸೇನನ ಚರ್ಯೆಯನ್ನು ನಿರ್ಣಯಿಸುತ್ತ ಆಚಾರ್ಯರು ಕಲಿಸಿದ ಪಾಠವನ್ನು ತಿಳಿದೆವು. ಅದರ ಮುಂದಿನ ಭಾಗದಲ್ಲಿ ಕುಂತೀದೇವಿ ಕಲಿಸುವ ಮತ್ತೊಂದು ಪಾಠವನ್ನು ತಿಳಿಯೋಣ. ಬ್ರಾಹ್ಮಣ ಮತ್ತು ಅವನ ಮನೆಯವರ ಅಳುವಿನ ಕಾರಣವನ್ನು ತಿಳಿಯಲು ಭೀಮಸೇನ ತಾಯಿಯನ್ನು ವಿನಂತಿಸುತ್ತಾನೆ. ಕುಂತಿ, ಅವರೆಲ್ಲರು ಅಳುತ್ತಿರುವ ಕೊಠಡಿಯ ಬಳಿ ಮರೆಯಾಗಿ ನಿಲ್ಲುತ್ತಾಳೆ. ಅವರ ನುಡಿಗಳನ್ನು ಆಲಿಸುತ್ತಾಳೆ. ಕಡೆಯಲ್ಲಿ ಆ ಮಗುವಿನ ಮಾತಿಗೆ ಅವರೆಲ್ಲರೂ ನಕ್ಕಾಗ ಅವಳು ಒಳ ಪ್ರವೇಶಿಸುತ್ತಾಳೆ. ಇಲ್ಲಿ ತುಂಬ ಮಹತ್ತ್ವದ …

ಪೂರ್ತಿ ಓದಿ...

ವಿಶ್ವನಂದಿನಿ ಲೇಖನ ಮಾಲೆ – 006

ಜೀವನಸುರಭಿ ಶ್ರೀಮದಾಚಾರ್ಯರು ಹೇಳಿಕೊಟ್ಟ ಜೀವನದ ಪಾಠಗಳು ಮತ್ತೊಬ್ಬರ ಮನೆಗೆ ಕಾಲಿಡುವ ಮುನ್ನ…. ನಮ್ಮಲ್ಲಿ ಅದೆಷ್ಟು ದಡ್ಡತನ, ಮೂರ್ಖತನಗಳು ಮನೆ ಮಾಡಿರುತ್ತವೆ ಎಂದರೆ ನಮ್ಮಿಂದ ಮತ್ತೊಬ್ಬರಿಗೆ ಅದೆಷ್ಟು ತೊಂದರೆಯಾಗುತ್ತದೆ ಎನ್ನುವದನ್ನೂ ಯೋಚಿಸದೇ ವರ್ತಿಸುತ್ತಿರುತ್ತೇವೆ. ನಮ್ಮ ಮಾತಿನಿಂದ ಮತ್ತೊಬ್ಬರಿಗೆ ಹಿಂಸೆಯಾಗಬಹುದಾ ಎನ್ನುವದನ್ನು ಒಂದು ಬಾರಿಯೂ ಯೋಚಿಸುವದಿಲ್ಲ. ನಮ್ಮ ಚರ್ಯೆ ಮತ್ತೊಬ್ಬರಿಗೆ ಅಸಹ್ಯ ನೀಡುತ್ತದೆಯಾ ಎನ್ನುವದರ ತಲೆ ಕೆಡಿಸಿಕೊಳ್ಳದೇ ಇಲ್ಲ. ಈ ರೀತಿಯಾಗಿ ಬದುಕುತ್ತಿದ್ದರೆ ನಾವು ಸರ್ವಥಾ ಸಾಧಕರಲ್ಲ. ನಮ್ಮನ್ನು ಪರಮಾತ್ಮ ಎಡಗಣ್ಣಿನಿಂದಲೂ ನೋಡುವದಿಲ್ಲ. ಕಾರಣ, ಪರಮಾತ್ಮ ಸಜ್ಜನರಿಗೆ ಮಾತ್ರ ಒಲಿಯುತ್ತಾನೆ. ಮತ್ತೊಬ್ಬ ಸಜ್ಜನನಿಗೆ ಹಿಂಸೆ ಕೊಡುವ ಮನುಷ್ಯ …

ಪೂರ್ತಿ ಓದಿ...

ವಿಶ್ವನಂದಿನಿ ಲೇಖನ ಮಾಲೆ – 005

vishwanandini-005

ಗ್ರಹಣಕಾಲದಲ್ಲಿ ಪಠಿಸಬೇಕಾದ ಶ್ಲೋಕಗಳ ಅರ್ಥಾನುಸಂಧಾನ ಗ್ರಹಣದ ಸಂದರ್ಭದಲ್ಲಿ ಅಷ್ಟದಿಕ್ಕುಗಳಲ್ಲಿ ನೆಲೆನಿಂತು ನಮ್ಮನ್ನು ರಕ್ಷಿಸುವ ದೇವತೆಗಳನ್ನು ವಿಶೇಷವಾಗಿ ಪ್ರಾರ್ಥಿಸಬೇಕು ಎಂದು ಶಾಸ್ತ್ರ ತಿಳಿಸುತ್ತದೆ. ಕೆಳಗಿನ ಶ್ಲೋಕಗಳನ್ನು ಅರ್ಥದ ಸಮೇತವಾಗಿ ಮೊದಲಿಗೆ ಒಂದೆರಡು ಬಾರಿ ಓದಿ, ಅದನ್ನು ಮನಸ್ಸಿಗೆ ತಂದು ಕೊಂಡು ಆ ಬಳಿಕ ಆ ಶ್ಲೋಕಗಳನ್ನು ಪಠಿಸುತ್ತಾ ಆ ದೇವತೆಗಳಿಗೆ ಅವರ ಅಂತರ್ಯಾಮಿಯಾದ ಭಗವಂತನಿಗೆ ನಮಸ್ಕಾರಗಳನ್ನು ಸಮರ್ಪಿಸಿ. ಮೊಟ್ಟ ಮೊದಲಿಗೆ ಗುರುಗಳ, ಪರಮಗುರುಗಳ, ಗುರುಪರಂಪರೆಯ ಜ್ಞಾನಿಗಳ, ಶ್ರೀಮದಾಚಾರ್ಯರ, ವೇದವ್ಯಾಸದೇವರ ಪರಮಮಂಗಳ ರೂಪಗಳನ್ನು ನೆನೆದು ನಮಸ್ಕರಿಸಿ. ಮೊದಲಿಗೆ ಪೂರ್ವದಿಕ್ಕಿಗೆ ಮುಖ ಮಾಡಿ ಎರಡೂ ಕೈಗಳನ್ನು ಜೋಡಿಸಿ, ಪೂರ್ವದಿಕ್ಕಿನಲ್ಲಿ ಸಮಸ್ತ …

ಪೂರ್ತಿ ಓದಿ...

ವಿಶ್ವನಂದಿನಿ ಲೇಖನ ಮಾಲೆ – 004.1

ಇವತ್ತಿನ ಗ್ರಹಣದ ಕುರಿತು ಇರುವ ಗೊಂದಲಗಳಿಗೆ ಉತ್ತರಗಳು ಇವತ್ತು ಚಂದ್ರಗ್ರಹಣ ಮಧ್ಯಾಹ್ನ 3.45 ಕ್ಕೆ ಆರಂಭವಾಗುತ್ತದೆ. ಆದರೆ, ಹಗಲಿನಲ್ಲಿ ಚಂದ್ರಗ್ರಹಣ ಮತ್ತು ರಾತ್ರಿಯಲ್ಲಿ ಸೂರ್ಯಗ್ರಹಣದ ಆಚರಣೆಯನ್ನು ಮಾಡಬಾರದು. ಇದನ್ನು ಗ್ರಸ್ತೋದಯಗ್ರಹಣ ಎನ್ನುತ್ತಾರೆ. ಅಂದರೆ, ಚಂದ್ರ ಸೂರ್ಯರು ಉದಯವಾಗುದವದಕ್ಕಿಂತ ಮುಂಚೆಯೇ ಗ್ರಹಣ ಆರಂಭವಾದರ ಉದಯವಾದ ನಂತರವೇ ಗ್ರಹಣದ ಆಚರಣೆ ಹೊರತು, ಸ್ಪರ್ಶದ ಸಮಯದಿಂದ ಅಲ್ಲ. ಹೀಗಾಗಿ, ಇಂದು ಸಂಜೆ ಸೂರ್ಯಾಸ್ತದ ಸಮಯಕ್ಕೆ (6.40) ಚಂದ್ರೋದಯವಿದೆ. ಉದಯ ಅಸ್ತಗಳು ಊರಿನಿಂದ ಊರಿಗೆ ಬದಲಾಗುವದರಿಂದ ನಿಮ್ಮ ಊರಿನಲ್ಲಿ ಎಷ್ಟು ಸಮಯಕ್ಕೆ ಚಂದ್ರೋದಯವಿದೆಯೋ ಆ ಸಮಯಕ್ಕೆ ಸ್ಪರ್ಶದ ಸ್ನಾನವನ್ನು ಮಾಡಿ. …

ಪೂರ್ತಿ ಓದಿ...

ವಿಶ್ವನಂದಿನಿ ಲೇಖನ ಮಾಲೆ – 004

vishwanandini-004

ಗ್ರಹಣವನ್ನು ಆಚರಿಸುವಾಗ ಇರಬೇಕಾದ ಎಚ್ಚರಗಳು ಇಂದಿನ ದಿನಗಳಲ್ಲಿ ಗ್ರಹಣದ ಆಚರಣೆ, ಸೂತಕದ ಆಚರಣೆ, ಉಳಿದ ಮೈಲಿಗೆಗಳ ಆಚರಣೆ ಎಂದರೆ ಮೂಗು ಮುರಿಯುವ ಮಂದಿಯೇ ಬಹಳ. ಮಾಡುವ ಮನಸ್ಸು ತಮಗಿಲ್ಲ ಎನ್ನುವ ಕಾರಣಕ್ಕೆ ಕಂಡಕಂಡ ಕಾರಣಗಳನ್ನು ನೀಡುತ್ತಾರೆ. ಆದರೆ, ಶಾಸ್ತ್ರದ ವಚನ ಎಂದರೆ ಭಗವಂತನ ಆದೇಶ. ಪರಮಾತ್ಮ ನಮ್ಮ ಬದುಕಿಗೆ ಹಾಕಿದ ಸಂವಿಧಾನ ಅದು. ಅವಶ್ಯವಾಗಿ ಆಚರಣೆ ಮಾಡಲೇಬೇಕು. (ಮೈಲಿಗೆಯ ಹಿಂದಿನ ಕಾರಣಗಳೇನು, ಯಾಕಾಗಿ ಮಾಡಬೇಕು ಎನ್ನುವ ಪ್ರಶ್ನೆಗಳಿಗೆ ವಿಶ್ವನಂದಿನಿ ಮಾಲೆಯ ಮತ್ತೊಂದು ಲೇಖನದಲ್ಲಿ ಉತ್ತರಿಸುತ್ತೇನೆ, ಪ್ರಧಾನವಾಗಿ ಮುಟ್ಟಿನ ಕುರಿತು ಮಾತನಾಡುವಾಗ, ಕಾರಣ ಅದರ ಕುರಿತು …

ಪೂರ್ತಿ ಓದಿ...

ವಿಶ್ವನಂದಿನಿ ಲೇಖನ ಮಾಲೆ – 003

vishwanandini-003

ಶ್ರೀ ಪುರಂದರದಾಸಾರ್ಯರ ಮೂರ್ಖರಾದರು ಲೋಕದೊಳಗೆ ಎಂಬ ಹಾಡಿನ ಪಲ್ಲವಿಯ ಮತ್ತು ಮೊದಲ ನುಡಿಯ ಅರ್ಥವನ್ನು ಹಿಂದಿನ ಲೇಖನದಲ್ಲಿ ಅನುಸಂಧಾನ ಮಾಡಿದೆವು. ಈಗ ಎರಡನೆಯ ಪದ್ಯದ ಅರ್ಥ. ಮೂರ್ಖರಾದರು ಇವರು ಲೋಕದೊಳಗೆಲ್ಲಾ ಏಕದೈವವ ಬಿಟ್ಟು ಕಾಕು ದೈವವ ಭಜಿಸಿ ।। ಪ ।। ಹಡೆದ ಮಕ್ಕಳ ಮಾರಿ ಒಡಲ ಹೊರೆವವ ಮೂರ್ಖ ಮಡದಿ ಹುಟ್ಟಿದ ಮನೆಯೊಳಿರುವವನು ಮೂರ್ಖ ಬಡತನವು ಬಂದಾಗ ಬೈದುಕೊಳ್ಳುವವ ಮೂರ್ಖ ದೃಢಭಕ್ತಿಯಿಲ್ಲದವ ಕಡುಮೂರ್ಖನಯ್ಯ ।। ೨ ।। ಹಡೆದ ಮಕ್ಕಳ ಮಾರಿ ಒಡಲ ಹೊರೆವವ ಮೂರ್ಖ ಹಿಂದಿನ ನಾಲ್ಕು ಸಾಲುಗಳಲ್ಲಿ ಪರಮಾತ್ಮನನ್ನು ತಿಳಿಯದ …

ಪೂರ್ತಿ ಓದಿ...

ವಿಶ್ವನಂದಿನಿ ಲೇಖನ ಮಾಲೆ – 002

ಮೂರ್ಖರಾದರು ಇವರು ಲೋಕದೊಳಗೆಲ್ಲಾ ಏಕದೈವವ ಬಿಟ್ಟು ಕಾಕು ದೈವವ ಭಜಿಸಿ ॥ ಶ್ರೀ ಪುರಂದರದಾಸರ ಕೃತಿಗಳ ಮೌಲಿಕತೆ ಅಸಾಧಾರಣವಾದದು. ಅವರು ಯಾವುದೇ ಲೌಕಿಕ ವಿಷಯದ ಕುರಿತು ಮಾತನಾಡಿದರೂ ಅಲ್ಲಿಯೂ ಭಗವಂತನ ಮಾಹಾತ್ಮ್ಯವನ್ನೇ ಹೇಳುತ್ತಾರೆ. ಮೂರ್ಖತನ ಎನ್ನುವದು ಮನುಷ್ಯನಲ್ಲಿನ ಒಂದು ದೋಷ. ಬದುಕಿನ ನೂರಾರು ಪ್ರಸಂಗಗಳಲ್ಲಿ ಮನುಷ್ಯರು ಮೂರ್ಖರಂತೆ ವರ್ತಿಸುತ್ತಿರುತ್ತಾರೆ. ಆದರೆ ಆ ಮೂರ್ಖತನ ನಮಗೆ ಬರುವದಕ್ಕೂ, ಬಾರದಿರುವದಕ್ಕೂ ಭಗವಂತನೊಂದಿಗೆ ನಂಟನ್ನು ತೋರಿಸಿಕೊಡುತ್ತಾರೆ, ಶ್ರೀ ಪುರಂದರದಾಸರು. ಠ ಏಕದೈವ ಎಂದರೆ ಸ್ವತಂತ್ರನಾದ ಶೀಹರಿ. ಕಾಕುದೈವಗಳು ಎಂದರೆ ಸುಳ್ಳುದೇವತೆಗಳು ಅಥವಾ ಕ್ಷುದ್ರದೇವತೆಗಳು. (ಕಾಕು ಎನ್ನುವ ಶಬ್ದಕ್ಕೆ ಸುಳ್ಳು …

ಪೂರ್ತಿ ಓದಿ...

ವಿಶ್ವನಂದಿನಿ ಲೇಖನ ಮಾಲೆ – 001

ಹರಟೆ ಹೊಡೆಯೋಣ ಎಂದು ಕೂಡುವ ಮುನ್ನ… ಶ್ರೀ ಮದಾನಂದತೀರ್ಥಭಗವತ್ಪಾದಾಚಾರ್ಯರ ಪರಂಪರೆಯ ತಪಸ್ವಿಗಳ ಒಂದೊಂದು ಚರ್ಯೆಯೂ ನಮ್ಮ ಬದುಕಿಗೆ ದಾರಿದೀಪ. ಅವರು ನಡೆದ ಹಾದಿಯಲ್ಲಿ ನಾವು ನಡೆದರೆ, ಅವರ ಬದುಕಿನ ಆದರ್ಶಗಳನ್ನು ನಾವು ಮೈಗೂಡಿಸಿಕೊಂಡರೆ ಪರಮಾತ್ಮ ಸುಲಭದಲ್ಲಿ ಒಲಿದುಬಿಡುತ್ತಾನೆ. ಅದು ಶ್ರೀ ಯಾದವಾರ್ಯರ ಕಾಲ. “ಯನ್ನಿಷ್ಠಾಮವಲೋಕ್ಯ ಸರ್ವಯತಯೋ ಜಾತಾ ವಿವರ್ಣಾನನಾಃ” ಎಂಬ ಅದ್ವಿತೀಯ ಪ್ರಶಸ್ತಿಗೆ ಭಾಜನರಾದ ಶ್ರೀ ಯದುಪತ್ಯಾಚಾರ್ಯರ ಕಾಲ. ಶ್ರೀ ಯಾದವಾರ್ಯರು ಗೃಹಸ್ಥರು, ಸಂನ್ಯಾಸಿಗಳಲ್ಲ. ಆದರೆ, ಗೃಹಸ್ಥರಾಗಿದ್ದುಕೊಂಡೂ ಅವರು ಗಳಿಸಿದ್ದ ವೈರಾಗ್ಯ, ಮಾಡಿದ ತಪಸ್ಸು, ತೋರಿದ ವಿಷ್ಣುಭಕ್ತಿ, ಪಡೆದಿದ್ದ ಜ್ಞಾನಗಳನ್ನು ಕಂಡು ಯತಿಗಳೂ ಮೂಗಿನ …

ಪೂರ್ತಿ ಓದಿ...