ಮುಖಪುಟ » ಇತಿಹಾಸ » 1947 ಆಗಸ್ಟ್ 15ರಂದು ಹಾರಿಸಲಾದ ತ್ರಿವರ್ಣ ಧ್ವಜ ಎಲ್ಲಿದೆ..? ಆ ರಹಸ್ಯ ಮಾಹಿತಿ ಇಲ್ಲಿದೆ, ಓದಿ..
independence day

1947 ಆಗಸ್ಟ್ 15ರಂದು ಹಾರಿಸಲಾದ ತ್ರಿವರ್ಣ ಧ್ವಜ ಎಲ್ಲಿದೆ..? ಆ ರಹಸ್ಯ ಮಾಹಿತಿ ಇಲ್ಲಿದೆ, ಓದಿ..

ಸ್ಪೇಷಲ್ ಡೆಸ್ಕ್: ಅದು ಆಗಸ್ಟ್ 15, 1947. ಅಂದು ನಮ್ಮ ದೇಶದಲ್ಲಿ ಮೊದಲ ಸ್ವಾತಂತ್ರ ದಿನಾಚರಣೆಯನ್ನ ಆಚರಿಸಲಾಗಿತ್ತು. ಬ್ರಿಟಿಷರಿಂದ ಬಿಡುಗಡೆ ದೊರಕಿದ ಬಳಿಕ 12 ಅಡಿ ಉದ್ದ ಹಾಗೂ 8 ಅಡಿ ಅಗಲದ ಸಿಲ್ಕ್ನಿಂದ ರೂಪಿಸಲಾದ ಧ್ವಜವನ್ನು ಬೆಳಗ್ಗೆ ಆಗಸ್ಟ್ 15 ರ 5.05ಕ್ಕೆ ಫೋರ್ಟ್ ಸೈಂಟ್ ಜಾರ್ಜ್ನಲ್ಲಿ ಹಾರಿಸಲಾಗಿತ್ತು. ಈ ವೇಳೆ ಸಾವಿರಾರು ಜನರು ಉಪಸ್ಥಿತರಿದ್ದರು. ಈ ವೇಳೆ ಹಾರಿಸಿದ ತ್ರಿವರ್ಣ ಧ್ವಜ ಎಲ್ಲಿದೆ ಎಂಬುದೇ ಎಲ್ಲರ ಕುತೂಹಲ.

jootoor dynohost

ಎಲ್ಲಿದೆ ಧ್ವಜ..? ಚೆನ್ನೈನ ಫೋರ್ಟ್ ಸೈಂಟ್ ಜಾರ್ಜ್ನಲ್ಲಿ ಮೊದಲ ಸ್ವಾತಂತ್ರ್ಯೋತ್ಸವದಂದು ಹಾರಿಸಲಾದ ರಾಷ್ಟ್ರಧ್ವಜವನ್ನು ಭಾರತೀಯ ಪುರಾತತ್ವ ಇಲಾಖೆ ಸೈಂಟ್ ಸಂಕೀರ್ಣದಲ್ಲಿರುವ ವಸ್ತುಸಂಗ್ರಾಹಲಯದಲ್ಲಿ ಸಂರಕ್ಷಿಸಿ ಇರಿಸಿದೆ. ಇಲ್ಲೇ ಅನೇಕ ದಶಕಗಳಿಂದ ಧ್ವಜವನ್ನ ಸಂರಕ್ಷಿಸಿ ಇಡಲಾಗಿದೆ. ಈ ಧ್ವಜವನ್ನು 2013ರ ಜನವರಿ 26 ರಂದು ಮೊದಲ ಬಾರಿಗೆ ಸಾರ್ವಜನಿಕ ಪ್ರದರ್ಶನಕ್ಕಿರಿಸಲಾಗಿತ್ತು. ಈ ಧ್ವಜವನ್ನ ಮರ ಹಾಗೂ ಗ್ಲಾಸಿನ ಶೋಕೇಸ್ನಲ್ಲಿ ಇರಿಸಲಾಗಿದೆ. ಎಲ್ಲಾ ಕಾಲದಲ್ಲೂ ಆದ್ರತೆ ನಿಯಂತ್ರಿಸಲು ಹಾಗೂ ತೇವಾಂಶ ಹೀರಿಕೊಳ್ಳಲು ಧ್ವಜದ ಸುತ್ತಲೂ ಆರು ಸಿಲಿಕಾ ತುಂಬಿದ ಬಟ್ಟಲುಗಳನ್ನು ಇರಿಸಲಾಗಿದೆ.

ಹಾಲ್ ಹಾಗೂ ಶೋಕೇಸ್ಗೆ ಸಮರ್ಪಕ ಬೆಳಕು ಬೀಳಲು ಲಕ್ಸ್ ಮೀಟರ್ (ತೀವ್ರ ಬೆಳಕು ಅಳೆಯಲು ಬಳಸುವ ಸಾಧನ) ಅಳವಡಿಸಲಾಗಿದೆ. ಹವಾನಿಯಂತ್ರಕ ಬಳಸಿ 24 ಗಂಟೆಗಳ ಕಾಲವೂ ಸೂಕ್ತ ಉಷ್ಣಾಂಶ ಕಾಯ್ದುಕೊಳ್ಳಲಾಗಿದೆ. ಶೋಕೇಸ್ನ ಸುತ್ತಲೂ ಸೆನ್ಸಾರ್ಯುಕ್ತ ಲೆಡ್ ಲೈಟ್ಗಳನ್ನು ಬಳಸಲಾಗಿದೆ. ಇನ್ನು ಇಲ್ಲಿಗೆ ಸಂದರ್ಶಕರು ಆಗಮಿಸುವಾಗ ಮಾತ್ರ ಈ ಲೈಟ್ಗಳು ಉರಿಯುತ್ತವೆ.

ಶೋಕೇಸ್ನ ಮೇಲೆ ಸಾಮಾನ್ಯ ಬೆಳಕು ಬೀಳಲು ಅವಕಾಶ ಇಲ್ಲ ಳು ಹಾಗೂ ಕೊಳೆಯ ಬಗ್ಗೆ ಎಚ್ಚರ ವಹಿಸಲಾಗಿದೆ.

ಇವುಗಳೂ ನಿಮಗಿಷ್ಟವಾಗಬಹುದು

ನಮ್ಮ ದೇಶದಲ್ಲಿ 400 ವರ್ಷಗಳ ಹಿಂದೆಯೇ ಬಾರ್ ಗರ್ಲ್ಸ್ ಸಂಸ್ಕೃತಿ ಇದೆಯಂತೆ…!!

Share this on WhatsApp ಪಬ್, ಬಾರ್ ಗಳಲ್ಲಿ ನಾಟ್ಯ ಮಾಡುವ ಬಾರ್ ಗರ್ಲ್ಸ್ ಬಗ್ಗೆ ತಿಳಿದೇ ಇರುತ್ತದೆಯಲ್ಲವೆ. ಆದರೆ …

Loading...
Facebook Messenger for Wordpress