2018 ಇನ್ನೇನು ಶುರುವಾಗ್ತಿದೆ. ಹೊಸ ವರ್ಷದಲ್ಲಿ ಅದನ್ನು ಮಾಡಬೇಕು, ಇದನ್ನು ಮಾಡಬೇಕು ಅಂತಾ ಬಹುತೇಕರ ಪಟ್ಟಿ ಸಿದ್ಧವಾಗಿರುತ್ತದೆ. ಶ್ರೀಮಂತನಾಗಬೇಕೆಂಬುದು ಪ್ರತಿಯೊಬ್ಬನ ಕನಸು. ಹೊಸ ವರ್ಷದಲ್ಲಾದ್ರೂ ಸ್ವಲ್ಪ ಆರ್ಥಿಕ ಸುಧಾರಣೆ ಮಾಡಿಕೊಳ್ಳಬೇಕೆಂದು ಎಲ್ಲರೂ ಬಯಸ್ತಾರೆ.
ಆರ್ಥಿಕ ಸುಧಾರಣೆ ನಿಮ್ಮ ಕೈನಲ್ಲಿದೆ. ಬಜೆಟ್ ಕಡಿಮೆ ಮಾಡೋದು ಇಲ್ಲವೆ ಗಳಿಕೆ ಹೆಚ್ಚು ಮಾಡಿಕೊಳ್ಳೊದು ನಿಮ್ಮ ಮುಂದಿರುವ ಮೊದಲ ಆಯ್ಕೆ. ಅಂದುಕೊಂಡಂತೆ ಗಳಿಕೆ ಹೆಚ್ಚಾಗೋದು ಕಷ್ಟ. ಆದ್ರೆ ಬಜೆಟ್ ನಿಮ್ಮ ಹಿಡಿತದಲ್ಲಿರುತ್ತದೆ. ಹೊಸ ವರ್ಷ ಖರ್ಚಿನ ಮೇಲೆ ನಿಗಾ ಇಡಿ. ಅನಾವಶ್ಯಕ ವಸ್ತುಗಳ ಖರೀದಿ, ಖರ್ಚನ್ನು ಆದಷ್ಟು ಕಡಿಮೆ ಮಾಡಿ.
ಗಳಿಕೆ ಚೆನ್ನಾಗಿದೆ. ಆದ್ರೆ ತಿಂಗಳ ಕೊನೆಯಲ್ಲಿ ಕೈನಲ್ಲಿ ಹಣವಿರೋದಿಲ್ಲ ಎನ್ನುವವರಿದ್ದಾರೆ. ಇಂಥವರು ಅಟೋಮೆಟಿಕ್ ಬ್ಯಾಂಕ್ ಟ್ರಾನ್ಸ್ಫರ್ ಶುರುಮಾಡಿ. ಒಳ್ಳೆಯ ಕಡೆ ಹಣವನ್ನು ವಿನಿಯೋಗ ಮಾಡಿ. ಕೆಲವೇ ವರ್ಷಗಳಲ್ಲಿ ಹಣ ಡಬಲ್ ಆಗುವ, ಭದ್ರತೆಯಿರುವ ಸ್ಥಳದಲ್ಲಿ ಹಣ ತೊಡಗಿಸಿ.
ಹೊಸ ವರ್ಷ ಒಳ್ಳೆ ವ್ಯಕ್ತಿಗಳ ಸಂಗವನ್ನು ಹೆಚ್ಚಾಗಿ ಮಾಡಿ. ಯಶಸ್ಸು ಕಂಡ ವ್ಯಕ್ತಿಗಳ ಜೊತೆಗಿದ್ದರೆ ಅವರ ವಿಚಾರ, ತಿಳುವಳಿಕೆ ನಿಮಗೆ ತಿಳಿಯದೇ ನಿಮ್ಮನ್ನು ಆವರಿಸುತ್ತದೆ. ಇದು ನಿಮ್ಮ ಯಶಸ್ಸಿಗೆ ಕಾರಣವಾಗುತ್ತದೆ.
ಹೊಸ ವರ್ಷ ಹೊಸದನ್ನು ಕಲಿಯಲು ಶುರು ಮಾಡಿ. ನಿಮಗಾಗಿ 20 ನಿಮಿಷ ತೆಗೆದಿಡಿ. ಯಶಸ್ವಿ ವ್ಯಕ್ತಿಗಳು ತಮಗಾಗಿ ಸ್ವಲ್ಪ ಸಮಯವನ್ನು ಮೀಸಲಿಡುತ್ತಾರೆ. ಅದು ಅವರನ್ನು ಬಲಪಡಿಸುವ ಜೊತೆಗೆ ಹೊಸ ಹೊಸ ವಿಚಾರ, ಕೆಲಸಕ್ಕೆ ನೆರವಾಗುತ್ತದೆ. ನಿಮ್ಮ ಕಲಿಕೆ ಹೊಸ ಉದ್ಯೋಗಕ್ಕೆ ದಾರಿ ಮಾಡಿಕೊಡಬಹುದು. ಹಾಗೆ ದೈನಂದಿನ ಜೀವನದಲ್ಲಿ ಖುಷಿ ಹೆಚ್ಚಾಗಲು ಕಾರಣವಾಗಬಹುದು.
ಉಳಿತಾಯ ಮಾಡುವುದು ಒಂದು ರೀತಿಯ ಗಳಿಕೆ. ಹಾಗಾಗಿ ಉಳಿತಾಯ ಮಾಡುವುದನ್ನು ಬಿಡಬೇಡಿ. ಹಾಗಂತ ಜಿಪುಣರಾಗಿ ಎಂದಲ್ಲ. ಗಳಿಕೆ, ಖರ್ಚು, ಉಳಿತಾಯವನ್ನು ಸಮನಾಗಿ ಪಾಲು ಮಾಡಿ ಸರಿಯಾದ ಯೋಜನೆ ರೂಪಿಸಿಕೊಂಡು ಮುಂದಿನ ಹೆಜ್ಜೆಯಿಟ್ಟರೆ ಎಲ್ಲವೂ ಒಳ್ಳೆಯದಾಗುತ್ತದೆ.
https://m.dailyhunt.in/news/india/kannada/kannada+dunia-epaper-kannadad/hosa+varshadalli+shrimantaraagabayasidavaru+hige+maadi-newsid-79013350?ss=pd&s=a