ಮುಖಪುಟ » ಕಥೆಗಳು » ಸ್ವರ್ಗ
ಸ್ವರ್ಗ

ಸ್ವರ್ಗ

ಅಂದು ತರಗತಿಗೆ ಬಂದ ಶಿಕ್ಷಕಿ, ಮಕ್ಕಳ ಸಂಸ್ಕಾರವನ್ನ ಪರೀಕ್ಷೆ ಮಾಡಬೇಕೆಂದು ಕೊಂಡರು..!!

ತರಗತಿಯಲ್ಲಿದ್ದ ಮಕ್ಕಳಿಗೆ ನಾಳೆ ಬರುವಾಗ *ಸ್ವರ್ಗದಿಂದ ಮಣ್ಣು* ತರಬೇಕೆಂದು ಹೇಳಿದರು.

ಹಲವಾರು ಮಕ್ಕಳಿಗೆ ಸ್ವರ್ಗ ಎಂದರೆ ಏನು ಎಂದೇ ತಿಳಿದಿರಲಿಲ್ಲ, 
ಮನೆಗೆ ಹೋದ ಮಕ್ಕಳು ತಮ್ಮ ಪೋಷಕರ ಬಳಿ ಶಿಕ್ಷಕಿ ಹೇಳಿದ ಮಾತು ಹೇಳಿದರು..

ಪೋಷಕರು “ನಿಮ್ಮ ಶಿಕ್ಷಕಿಗೆ ತಲೆ ಕೆಟ್ಟಿದೆ, ಸ್ವರ್ಗದಿಂದ ಮಣ್ಣು ತರಲು ಸಾಧ್ಯವೇ ಇಲ್ಲಾ..!
ಪುರಾಣಗಳ ಪ್ರಕಾರ ನಾವು ಸತ್ತ ನಂತರವಷ್ಟೇ ಸ್ವರ್ಗಕ್ಕೆ ಹೋಗಲು ಸಾಧ್ಯ, ಬೇಕಾದಾಗೆಲ್ಲ ಹೋಗಿ ಬರಲು ಅದೇನು ಪಕ್ಕದ ಊರೇ” ಎಂದು ಕೋಪದಿಂದ ಉತ್ತರ ನೀಡಿದರು……!!

ಮಕ್ಕಳು ಅಳುತ್ತಾ ಹೇಳಿದರು, “ನಮ್ಮ ಶಿಕ್ಷಕಿ ಹೇಳಿದ ಕೆಲಸ ಮಾಡದೇ ಹೋದರೆ ನಮಗೆ ಶಿಕ್ಷೆ ನೀಡುವರು, ಸ್ವರ್ಗದ ಮಣ್ಣು ಸಿಗದಿದ್ದರೆ ನಾವು ಶಾಲೆಗೆ ಹೋಗುದಿಲ್ಲ” ಎಂದು ಹಠ ಹಿಡಿದರು…..!!

ಪೋಷಕರಿಗೆ ಏನು ಹೇಳಬೇಕೆಂದು ತಿಳಿಯದೆ ಮಕ್ಕಳ ಕಣ್ಣೀರು ಒರೆಸುತ್ತಾ, “ನಾಳೆ ನಿಮ್ಮ ಜೊತೆ ನಾವೂ ಶಾಲೆಗೆ ಬರುತ್ತೇವೆ, ನಿಮ್ಮ ಶಿಕ್ಷಕಿ ಜೊತೆ ನಾವು ಮಾತನಾಡುತ್ತೇವೆ” ಅಂತ ಹೇಳಿ, ಹೇಗೊ ಸಮಾಧಾನ ಮಾಡಿದರು…..!!

ಎಂದಿನಂತೆ ಮಕ್ಕಳು ಶಾಲೆಗೆ ಬಂದರು, ಮಕ್ಕಳ ಜೊತೆಯಲ್ಲಿ ಪೊಷಕರೂ ಸಹ ಶಾಲೆಗೆ ಬಂದರು
ಶಾಲೆಯಲ್ಲಿ ಈಗ ಗದ್ದಲದ ವಾತಾವರಣ, ಎಲ್ಲಾ ಪೋಷಕರು ಶಿಕ್ಷಕಿಯನ್ನು ಮನಬಂದಂತೆ ಅವಮಾನಿಸ ತೊಡಗಿದರು…..!

ಆದರೆ ಶಿಕ್ಷಕಿ ಮಾತ್ರ ಹೆದರಲಿಲ್ಲ, ಎಲ್ಲಾ ಮಕ್ಕಳಿಗೂ ಸಾಲಾಗಿ ನಿಲ್ಲುವಂತೆ ಹೇಳಿದರು.

ನಿಂತ ಮಕ್ಕಳಿಗೆ ಕೇಳಿದರು, ನಿಮಗೆ ಯಾರಿಗೂ ಸ್ವರ್ಗದಿಂದ ಮಣ್ಣು ತರಲು ಸಾಧ್ಯವಾಗಲಿಲ್ಲವೇ..!?

ಪೋಷಕರು ಮತ್ತೆ ಕೋಪಗೊಂಡರು, ಮಕ್ಕಳು ಇಲ್ಲಾ
ಎಂದು ಹೇಳಿದರು….!!

ಅಷ್ಟರಲ್ಲಿ ಆ ಸಾಲಿನಲ್ಲಿದ್ದ ಒಬ್ಬ ಬಾಲಕ ಮುಂದೆ ಬಂದು, “ಟೀಚರ್ ನಾನು ತಂದಿದ್ದೇನೆ ಸ್ವರ್ಗದಿಂದ ಮಣ್ಣನ್ನು” ಎಂದು ಕೈಲಿದ್ದ ಚೀಲವನ್ನು ತೋರಿಸಿದನು….!!

ಈ ಹುಡುಗನ ಮಾತು ಕೇಳಿದ ಅಲ್ಲಿದ್ದ ಬೇರೆ ಮಕ್ಕಳ ಪೋಷಕರು ಆಶ್ಚರ್ಯಗೊಂಡು, ಕೋಪದಿಂದ ಆ ಚೀಲವನ್ನು ಕಿತ್ತುಕೊಂಡು ಆ ಮಣ್ಣನ್ನು ನೋಡಿ ಹೇಳಿದರು,

“ಇದು ಸಾಮಾನ್ಯ ಮಣ್ಣು ಇದು ಎಲ್ಲಿ ಬೇಕಾರೂ ಸಿಗುತ್ತೆ ಇದನ್ನು ಸ್ವರ್ಗದ ಮಣ್ಣು ಎಂದು ಹೇಗೆ ಹೇಳುತ್ತೀಯಾ”…!?

ಎಂದು ಕೋಪದಲ್ಲಿ ಒಂದೆರಡು ಏಟು ಕೂಡ ಹಾಕಿದರು.

ಆಗ ಶಿಕ್ಷಕಿ ಮುಂದೆ ಬಂದು ಆ ಹುಡುಗನನ್ನು ಬಿಡಿಸಿ ಅಳುತಿದ್ದ ಆ ಹುಡುಗನನ್ನು ಕೇಳಿದರು..

“ಈ ಮಣ್ಣನ್ನು ನೀನು ಎಲ್ಲಿಂದ ತಂದೆ, ನೀನು ನಿಜವಾಗಿ ಸ್ವರ್ಗಕ್ಕೆ ಹೋಗಿದ್ದೆಯಾ..!?”

ಹುಡುಗ ಕಣ್ಣು ಒರೆಸುತ್ತಾ ನುಡಿದನು,

“ಟೀಚರ್ ಈ ಮಣ್ಣು ನನ್ನ ತಾಯಿಯ ಕಾಲಿನ ಕೆಳಗಿದ್ದ ಮಣ್ಣು”
ಎಂದನು……!!

ಆ ಹುಡುಗನ ಮಾತು ಕೇಳಿದ ಅಲ್ಲಿದ್ದ ಬೇರೆ ಮಕ್ಕಳ ಪೋಷಕರು ಈಗ ಕಣ್ಣಲ್ಲಿ ನೀರು ತುಂಬಿಕೊಂಡು ಕ್ಷಮೆ ಯಾಚಿಸಿದರು…..!!

ಮಕ್ಕಳಿಗೆ ಶಿಕ್ಷಣದ ಜೊತೆ ಸಂಸ್ಕಾರದ ಜ್ಞಾನವನ್ನೂ ಕಲಿಸ ಬೇಕು.

Home

ಇವುಗಳೂ ನಿಮಗಿಷ್ಟವಾಗಬಹುದು

king

ಆತ್ಮ ಚೌರ್ಯ

Share this on WhatsApp ಒಬ್ಬ ದೊರೆ. ಅವನಿಗೊಬ್ಬ ವೃದ್ಧ ಸೇವಕ. ಚಿಕ್ಕ ಮಗುವಾದಾಗಿನಿಂದಲೂ ಅವನನ್ನು ಎತ್ತಿ ಬೆಳೆಸಿದವನು. ಈಗ …

Loading...
Facebook Messenger for Wordpress