ಮುಖಪುಟ » ಕಥೆಗಳು » ದೇವರ ಕಥೆಗಳು » ಶ್ರೀ ಗಣೇಶ ಸಿಂಧುರಾಸುರನನ್ನು ವಧಿಸಿದ ಕಥೆ
Lord Ganesh

ಶ್ರೀ ಗಣೇಶ ಸಿಂಧುರಾಸುರನನ್ನು ವಧಿಸಿದ ಕಥೆ

ಬಾಲ ಮಿತ್ರರೇ, ನಾವು ಇಂದು ನಮಗೆಲ್ಲರಿಗೆ ತುಂಬಾ ಪ್ರಿಯವಾಗಿರುವ ಗಣಪತಿಯ ಕಥೆಯನ್ನು ಕೇಳೋಣ. ಗಣಪತಿಯು ಸದಾ ನಮಗೆಲ್ಲರಿಗೆ ಆಶೀರ್ವಾದವನ್ನು ಮಾಡುತ್ತಾರೆ ಮತ್ತು ಗಣಪತಿಯ ಕರುಣಾಮಯ ದೃಷ್ಟಿಯನ್ನು ಅವರ ತಾರಕ ರೂಪವನ್ನು ನಾವೆಲ್ಲರೂ ನೋಡಿದ್ದೇವೆ. ಆದರೆ ನಾವಿಂದು ಗಣಪತಿಯು ಹೇಗೆ ತನ್ನ ಮಾರಕರೂಪದಿಂದ ರಾಕ್ಷಸರ ವಧೆಯನ್ನು ಮಾಡಿ ದೇವತೆಗಳನ್ನು ರಾಕ್ಷಸರ ತೊಂದರೆಯಿಂದ ಹೇಗೆ ಪಾರು ಮಾಡಿದರು ಎಂದು ನೋಡೋಣ.

ಸಿಂಧುರಾಸುರ ಎಂಬ ಒಬ್ಬ ರಾಕ್ಷಸನಿದ್ದನು. ಅವನು ತುಂಬಾ ಶಕ್ತಿಶಾಲಿಯಾಗಿದ್ದನು. ಅವನ ಬಳಿ ದೊಡ್ಡ ಸೈನ್ಯವಿತ್ತು. ಅವನು ದೇವತಗಳಿಗೆ ತೊಂದರೆ ನೀಡುತ್ತಿದ್ದನು. ಋಷಿಮುನಿಗಳ ಯಾಗಗಳಲ್ಲಿ ಅವನು ಯಾವಾಗಲು ಅಡಚಣೆಯನ್ನು ನೀಡುತ್ತಿದ್ದನು. ಇವನ ತೊಂದರೆಯಿಂದ ಬೇಸತ್ತ ದೇವತೆಗಳು ಮತ್ತು ಋಷಿಮುನಿಗಳು ಅವನನ್ನು ಸಾಯಿಸಬೇಕೆಂದು ವಿಚಾರ ಮಾಡಿದರು. ಆದರೆ ಇಷ್ಟು ದೊಡ್ಡ ರಾಕ್ಷಸನನ್ನು ಯಾರು ಸಾಯಿಸಬಹುದು ಎಂದು ಗೊತ್ತಾಗಲಿಲ್ಲ. ಆಗ ಪರಾಶರ ಋಷಿಯು ಗಣಪತಿಯ ಕಡೆ ಹೋದರು ಮತ್ತು ರಾಕ್ಷಸನನ್ನು ವಧಿಸಬೇಕೆಂದು ವಿನಂತಿಸಿದರು.

ಗಣಪತಿಯು ಇಲಿಯ ಮೇಲೆ ಆರೂಢರಾಗಿ ರಾಕ್ಷಸನನ್ನು ವಧಿಸಲು ತನ್ನ ಸೈನ್ಯದೊಂದಿಗೆ ಹೊರಟರು. ಗಣಪತಿಯು ತನ್ನ ಸೈನ್ಯದೊಂದಿಗೆ ಬರುತ್ತಿರುವುದನ್ನು ಸಿಂಧುರಾಸುರನ ಕಾವಲುಗಾರರು ನೋಡಿದರು. ತಕ್ಷಣ ಅವರು ಇದನ್ನು ಸಿಂಧುರಾಸುರನಿಗೆ ಹೇಳಿದರು. ನನ್ನೊಂದಿಗೆ ಯುದ್ಧಕ್ಕೆ ಬರಲು ಯಾರಿಗೆ ಧೈರ್ಯವಿದೆ ಎಂದು ಅವನಿಗೆ ತುಂಬಾ ಆಶ್ಚರ್ಯವಾಯಿತು. ಗಣಪತಿಯಂತ ಸಣ್ಣ ಹುಡುಗನು ನನ್ನೊಂದಿಗೆ ಯುದ್ಧಮಾಡುತ್ತನೆಂದು ತಿಳಿದು ಅವನಿಗೆ ನಗು ಬಂತು.

[sociallocker]ಇಷ್ಟರಲ್ಲೇ ಗಣಪತಿಯು ಅವನ ಮುಂದೆ ಬಂದು ನಿಂತರು. ಗಣಪತಿಯು ಅವನನ್ನು ಯುದ್ಧಕ್ಕೆ ಕರೆದರು. ರಾಕ್ಷಸನು ನೊಡನೋಡುತ್ತಿದ್ದಂತೆಯೇ ಅವನ ಮೂರುಪಟ್ಟು ದೊಡ್ಡದಾದರು. ಗಣಪತಿಯು ಅವನನ್ನು ಎತ್ತಿ ಹೊಡೆಯಲು ಪ್ರಾರಂಭಿಸಿದರು. ರಾಕ್ಷಸನು ರಕ್ತಮಯವಾಗಿದ್ದನು. ಇದನ್ನು ನೋಡಿ ರಾಕ್ಷಸ ಸೈನಿಕರು ಅಲ್ಲಿಂದ ಹೆದರಿ ಓಡಿಹೋದರು. ರಾಕ್ಷಸನ ರಕ್ತದಿಂದ ಗಣಪತಿಯು ಕೆಂಪಾಗಿ ಕಾಣುತ್ತಿದ್ದರು. ಶಕ್ತಿಶಾಲಿ ರಾಕ್ಷಸನ ವಧೆಯನ್ನು ಬಾಲ ಗಣಪತಿಯು ಮಾಡಿದರೆಂದು ಎಲ್ಲಾ ದೇವತೆಗಳು ಅವನ್ನು ಸ್ತುತಿಸಿದರು ಮತ್ತು ಜಯಕಾರ ಹಾಕಿದರು.

ಹೀಗೆಯೇ ಅಂಗಲಾಸುರ ಎಂಬ ಒಬ್ಬ ದುಷ್ಟ ರಾಕ್ಷಸನಿದ್ದನು. ಅವನೂ ಕೂಡ ಸಿಂಧುರಾಸುರನಂತೆ ಎಲ್ಲಾರಿಗೆ ತೊಂದರೆ ನೀಡುತ್ತಿದ್ದನು. ಅಂಗಲಾಸುರನು ತನ್ನ ಬಾಯಿಂದ ಬೆಂಕಿಯನ್ನು ಎಸೆಯುತ್ತಿದ್ದರು. ಅವನ ಕಣ್ಣಿಗೆ ಕಂಡವರನ್ನೆಲ್ಲರನ್ನು ಸಾಯಿಸುತ್ತಿದ್ದನು. ಅವನ ಕಣ್ಣುಗಳಿಂದ ಬೆಂಕಿಯ ಜ್ವಾಲೆಗಳು ಬರುತ್ತಿದ್ದವು. ಅವನು ಬಾಯಿಂದ ಹೊಗೆಯನ್ನು ಬಿಡುತ್ತಿದ್ದನು. ಜನರಿಗೆ ಇದರಿಂದ ತುಂಬಾ ಭಯವಾಗುತ್ತಿತ್ತು.

ಅಂಗಲಾಸುರನು ಈ ರೀತಿ ಅನೇಕ ಅರಣ್ಯಗಳನ್ನು ಸುಟ್ಟು ಹಾಕಿದ್ದನು. ಮನುಷ್ಯರು, ಪ್ರಾಣಿ ಪಕ್ಷಿಗಳನ್ನು ಸುಟ್ಟು ಬೂದಿ ಮಾಡಿದ್ದನು. ಗಣಪತಿಯು ಅನೇಕ ರಾಕ್ಷಸರನ್ನು ಸಾಯಿಸಿದ್ದಾನೆಂದು ಅವನಿಗೆ ತಿಳಿದಿತ್ತು. ಅವನು ಸೇಡು ತೀರಿಸಿಕೊಳ್ಳಬೇಕೆಂದು ಕಾಯುತ್ತಿದ್ದನು. ಗಣಪತಿಯನ್ನು ಸಾಯಿಸಬೇಕೆಂದು ಅವನು ಹುಡುಕುತ್ತದ್ದನು, ಆದರೆ ಗಣಪತಿಯು ಅವನಿಗೆ ಸಿಗಲಿಲ್ಲ.

ಒಂದು ದಿನ ಗಣಪತಿಯು ತನ್ನ ಚಿಕ್ಕರೂಪವನ್ನು ಬದಲಾಯಿಸಿ ಅಂಗಲಾಸುರನ ಮೂರುಪಟ್ಟು ದೊಡ್ಡವನಾದನು. ಅವನನ್ನು ನೋಡಿ ರಾಕ್ಷಸನು ಹೆದರಿದನು. ಆ ರಾಕ್ಷಸನ್ನು ಕೈಯಲ್ಲಿ ಎತ್ತಿ ಗಣಪತಿಯು ಅಡಕೆಯನ್ನು ತಿನ್ನುವಂತೆ ತಿಂದರು. ಇದರಿಂದಾಗಿ ಗಣಪತಿಯು ಬೆಂಕಿ ಬೆಂಕಿಯಾದರು. ಇದನ್ನು ಶಮನ ಮಾಡಲು ದೇವತೆಗಳು ಮತ್ತು ಋಷಿಮುನಿಗಳು ಅವನಿಗೆ ದೂರ್ವೆಯನ್ನು ಹಚ್ಚಿದರು. ದೂರ್ವೆಯಿಂದ ಬೆಂಕಿಯು ತಣ್ಣಗಾಯಿತು ಮತ್ತು ಗಣಪತಿಯು ಶಾಂತವಾಗಿದ್ದರು.
ಮುಂದೆ ಗಣಪತಿಯು ವಿಘ್ನಾಸುರ ರಾಕ್ಷಸನನ್ನು ವಧಿಸಿದರು ಹಾಗಾಗಿ ಗಣಪತಿಗೆ ವಿಘ್ನೇಶ್ವರ ಎಂದು ಕರೆಯುತ್ತಾರೆ. ಮಕ್ಕಳೇ ಗಣಪತಿಯು ವಿದ್ಯೆಯ ದೇವರಾಗಿದ್ದಾರೆ. ಓದುವ ಮೊದಲು ನಾವು ಗಣಪತಿಯನ್ನು ಪ್ರಾರ್ಥಿಸಿದರೆ ನಮಗೆ ವಿದ್ಯೆಯಲ್ಲಿ ಬರುವ ಅಡಚಣೆಗಳು ದೂರವಾಗುತ್ತದೆ.
ಆಧಾರ : ಸನಾತನ ನಿರ್ಮಿತ ಗ್ರಂಥ – ಬೋಧಕಥಾ[/sociallocker]

ಶ್ರೇಯಾಂಕ

ಮತ ನೀಡಿ, ಬಲಪಡಿಸಿ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ಹಂಚಿರಿ.

User Rating: 5 ( 2 votes)

ಇವುಗಳೂ ನಿಮಗಿಷ್ಟವಾಗಬಹುದು

ಗಂಗಾಸ್ನಾನದಿಂದ ಪಾವನರಾಗಲು ಯಾತ್ರಿಕರಲ್ಲಿ ನಿಜವಾದ ಭಾವವಿರುವುದು ಅವಶ್ಯಕ !

Share this on WhatsApp ಒಮ್ಮೆ ಕಾಶಿಯಲ್ಲಿ ಮಹಾನ ತಪಸ್ವಿಗಳಾದ ಶಾಂತಾಶ್ರಮಸ್ವಾಮಿ ಹಾಗೂ ಬ್ರಹ್ಮಚೈತನ್ಯ ಗೋಂದವಲೇಕರ ಮಹಾರಾಜರ ನಡುವೆ ಮುಂದಿನ …

Loading...
Facebook Messenger for Wordpress