ರತ್ನಾಕರ ವರ್ಣಿ

ಕನ್ನಡದ ಶ್ರೇಷ್ಠ ಕವಿಗಳಲ್ಲೊಬ್ಬನಾದ ರತ್ನಾಕರವರ್ಣಿಯ ಕಾಲ ಸುಮಾರು ಕ್ರಿ.ಶ. ೧೫೫೭. ಈತನ ತಂದೆಯ ಹೆಸರು ದೇವರಾಜ. ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಈತನ ಜನ್ಮಸ್ಥಳ. ರತ್ನಾಕರವರ್ಣಿಯು ವಿಜಯನಗರದ ಅರಸರ ಸಾಮಂತರಾಜನಾದ ಕಾರ್ಕಳದ ಭೈರರಾಜನ ಆಸ್ಥಾನದಲ್ಲಿದ್ದ ಕವಿ.

ರತ್ನಾಕರವರ್ಣಿ ರಚಿಸಿದ ಕೃತಿಗಳು:

  • ಭರತೇಶ ವೈಭವ – ರತ್ನಾಕರವರ್ಣಿಯ ಮೇರು ಕೃತಿ.
  • ತ್ರಿಲೋಕ ಶತಕ
  • ಅಪರಾಜಿತೇಶ್ವರ ಶತಕ
  • ರತ್ನಾಕರಾಧೀಶ್ವರ ಶತಕ
  • ಸೋಮೇಶ್ವರ ಶತಕ (ಕೆಲ ವಿದ್ವಾಂಸರ ಪ್ರಕಾರ ರತ್ನಾಕರವರ್ಣಿಯು ಈ ಕೃತಿಯನ್ನು ತನ್ನ ಬದುಕಿನ ಸಂದಿಗ್ಧ ಘಟ್ಟವೊಂದರಲ್ಲಿ ಮತಾಂತರಗೊಂಡಾಗ ರಚಿಸಿದ್ದಾನೆ)
  • ಅಣ್ಣನ ಪದಗಳು

ಭರತೇಶ ವೈಭವವು ನಡುಗನ್ನಡ ಸಾಹಿತ್ಯದ ಒಂದು ಶ್ರೇಷ್ಠ ಕೃತಿ. ಇದು ರತ್ನಾಕರವರ್ಣಿಯ ಮೇರು ಕೃತಿ. ಹಳೆಗನ್ನಡದ ಕವಿಗಳು ಛಂದಸ್ಸುಗಳಲ್ಲಿ ತೋಯ್ದ ಘನವಾದ ಕೃತಿಗಳನ್ನು ರಚಿಸುತ್ತಿದ್ದ ಕಾಲದಲ್ಲಿ ರತ್ನಾಕರವರ್ಣಿಯು ಸಾಂಗತ್ಯರೂಪದಲ್ಲಿ ಭರತೇಶ ವೈಭವವನ್ನು ರಚಿಸಿ ಕನ್ನಡ ಕಾವ್ಯದ ಹೊಸ ಶಕೆಯೊಂದಕ್ಕೆ ನಾಂದಿ ಹಾಡುತ್ತಾನೆ.

ರತ್ನಾಕರವರ್ಣಿಯ ಜಾತಕ ರೂಪುರೇಷೆ

ರತ್ನಾಕರನ ಜನನ – ಸುಮಾರು ೧೫೩೨
ತ್ರಿಲೋಕಶತಕದ ರಚನೆ – ಸುಮಾರು ೧೫೫೭
ಭರತೇಶವೈಭವದ ರಚನೆ – ಸುಮಾರು ೧೫೬೭ (ಅಂದರೇ ಆಗ ಕವಿಗೆ ೩೫ ವರ್ಷ ವಯಸ್ಸು)
ರತ್ನಾಕರ ವೀರಶೈವನಾದುದು – ಸುಮಾರು ೧೫೭೨
ರತ್ನಾಕರ ಮತ್ತೆ ಜೈನನಾದುದು – ಸುಮಾರು ೧೫೭೫
ರತ್ನಾಕರಶತಕದ ರಚನೆ – ಸುಮಾರು ೧೫೭೭
ಅಪರಾಜಿತಶತಕದ ರಚನೆ – ಸುಮಾರು ೧೫೮೨
ಅಧ್ಯಾತ್ಮಗೀತದ ರಚನೆ – ಸುಮಾರು ೧೫೮೭
ರತ್ನಾಕರನ ಮರಣ ಕ್ರಿ.ಶ. ೧೬೦೦ರ ನಂತರ.

ಇವಿಷ್ಟು ವಿಷಯಗಳನ್ನು ಸಂಪಾದಿಸಿ ಕೊಟ್ಟ ಮತ್ತು ಲೇಖಕರಿಗೆ ನೆರವಾದ ಪ್ರತಿಯೊಬ್ಬರಿಗೂ ನಾವು ನನ್ನಿಗಳನ್ನು ತಿಳಿಸಲೇಬೇಕು.

ಕೊಕೊ – ಮೇಲೆ ಹೆಸರಿಸಲಾದ ಕೆಲವೊಂದು ಪುಸ್ತಕಗಳು ಡಿ.ಎಲ್.ಐನಲ್ಲಿವೆ.

ಶ್ರೇಯಾಂಕ

ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.

User Rating: 2.32 ( 3 votes)

ಇವುಗಳೂ ನಿಮಗಿಷ್ಟವಾಗಬಹುದು

Kumaravyasa

ಕುಮಾರವ್ಯಾಸ

Share this on WhatsApp ಕುಮಾರವ್ಯಾಸ ಕನ್ನಡದ ಅತ್ಯುನ್ನತ ಕವಿಗಳಲ್ಲಿ ಒಬ್ಬ. ಕನ್ನಡ ಸಾಹಿತ್ಯದ ದಿಗ್ಗಜರಲ್ಲಿ ಒಬ್ಬ ಎಂದರೆ ತಪ್ಪಾಗಲಾರದು. …

Loading...
Facebook Messenger for Wordpress