ಮುಖಪುಟ » ಇತರೆ » ಭಾರತದ ಮೊದಲ ಮಹಿಳಾ ವೈದ್ಯೆ ರುಕ್ಮಾಬಾಯಿಗೆ ಶುಭಾಶಯ ಕೋರಿದ ಗೂಗಲ್‌
ರುಕ್ಮಾಬಾಯಿಗೆ
ರುಕ್ಮಾಬಾಯಿಗೆ

ಭಾರತದ ಮೊದಲ ಮಹಿಳಾ ವೈದ್ಯೆ ರುಕ್ಮಾಬಾಯಿಗೆ ಶುಭಾಶಯ ಕೋರಿದ ಗೂಗಲ್‌

19ನೇ ಶತಮಾನದಲ್ಲಿ ಬ್ರಿಟೀಷರ ಮತ್ತು ಬಾಲ್ಯ ವಿವಾಹದ ವಿರುದ್ಧ ಧ್ವನಿ ಎತ್ತಿದ ಹಾಗೂ ಅಂದಿನ ಕಾಲದಲ್ಲೇ ವೈದ್ಯಕೀಯ ವೃತ್ತಿಯಲ್ಲಿ ತೊಡಿಗಿಸಿಕೊಂಡು ಬಡವರ ಪರ ನಿಂತಿದ್ದ ಡಾ.ರುಕ್ಮಾಬಾಯಿಗೆ ಗೂಗಲ್‌ ಡೂಡಲ್‌ ಶುಭಾಶಯ ಕೋರಿದೆ.

ಹಿರಿಯರು 11ನೇ ವಯಸ್ಸಿಗೆ ಮದುವೆ ಮಾಡಿಸಿದ ಬಳಿಕ, ಗಂಡನೊಡನೆ ಬಾಳಲು ಇಚ್ಛಿಸದೆ ಸಿಡಿದೆದ್ದ ಧೀರ ವನಿತೆ ಈ ರುಖ್ಮಾಬಾಯಿ, ನುರಿತ ವೈದ್ಯೆ ಮತ್ತು ತಮ್ಮ ರೋಗಿಗಳೊಂದಿಗೆ ಉತ್ತಮ ಸಂಬಂಧಗಳನ್ನು ಹೊಂದಿರುವ ವೈದ್ಯೆಯಾಗಿದ್ದಾರೆ ಎಂದು ಗೂಗಲ್‌ ತನ್ನ ಬ್ಲಾಗ್‌ನಲ್ಲಿ ಹೇಳಿಕೊಂಡಿದೆ.

ಆದರೆ ಇದಕ್ಕೂ ಮಿಗಿಲಾಗಿ 11ನೇ ವಯಸ್ಸಿಗೆ ತನ್ನಿಚ್ಛೆಗೆ ವಿರುದ್ಧವಾಗಿ ಪೋಷಕರು ಮದುವೆ ಮಾಡಿದರೂ ಆತನೊಂದಿಗೆ ಬದುಕಲು ಇಷ್ಟವಿರದೇ ರುಕ್ಮಾಬಾಯಿ ಅಂದಿನ ಕಾಲದಲ್ಲಿಯೇ ಪುರುಷ ಪ್ರಧಾನ ಸಮಾಜದ ವಿರುದ್ಧ ಸಿಡಿದೆದ್ದು, ತನ್ನಿಷ್ಟದಂತೆ ಬದುಕುತ್ತೇನೆ ಎಂದು ಸಾಧಿಸಿದ ಮಹಿಳೆ.

1975ರ ವೇಳೆ ದಾದಾಜಿ ಭಿಕಾಜಿಯೊಂದಿಗೆ ರುಕ್ಮಾಬಾಯಿಗೆ ಪೋಷಕರು ಮದುವೆ ಮಾಡಿದರು. ಇದಾದ ಬಳಿಕ ಇವರು ತಮ್ಮ ತಂದೆಯನ್ನು ಕಳೆದುಕೊಂಡು ತಾಯಿಯೊಂದಿಗೆ ವಾಸಿಸುತ್ತಿದ್ದರು. ಇವರ ತಾಯಿ ಡಾ. ಸುಖರಾಮ್‌ ಅರ್ಜುನ್‌ ಎಂಬವರೊಂದಿಗೆ ಮರುಮದುವೆ ಮಾಡಿಕೊಂಡರೂ ರುಖ್ಮಾಬಾಯಿ ಮಾತ್ರ ತಾಯಿಯೊಂದಿಗೇ ನಿಂತು ವಿದ್ಯಾಭ್ಯಾಸ ಮುಂದುವರಿಸುತ್ತಿದ್ದರು.

ಆದರೆ ಅವರ ಗಂಡ ದಾದಾಜಿಗೆ ಇದು ಹಿಡಿಸಲಿಲ್ಲ, ಮನೆಗೆ ಬಂದು ತನ್ನೊಂದಿಗೆ ಜೀವನ ಮಾಡು ಎಂದು ಆಗ್ರಹಿಸಿದ ದಾದಾಜಿ ವಿರುದ್ಧವೇ ನಿಂತರು. ಹೀಗಾಗಿ ದಾದಾಜಿ ನ್ಯಾಯಾಲಯದ ಮೆಟ್ಟಿಲೇರಿದ್ದ. ಆದರೆ ಇದಕ್ಕೆ ರುಕ್ಮಾಬಾಯಿ ಮಾತ್ರಾ ಬಗ್ಗಲಿಲ್ಲ. ಯಾರೇ ಹೆಣ್ಣು ಮಕ್ಕಳಿಗೆ ತನಗಿಷ್ಟವಿಲ್ಲದ ವ್ಯಕ್ತಿಗಳೊಂದಿಗೆ ಜೀವಿಸುವ ಹಕ್ಕು ಇಲ್ಲ, ಅಲ್ಲದೇ ಇವರನ್ನು ತಡೆಯುವ ಹಕ್ಕೂ ಯಾರಿಗೂ ಇಲ್ಲ ಎಂದು ವಾದಿಸಿದರು. ರುಕ್ಮಾಬಾಯಿಗೆ ಅವರ ಮಲತಂದೆ ಕೂಡಾ ಬೆಂಬಲ ನೀಡಿದ್ದರು.

ಸುಮಾರು ಮೂರು ವರ್ಷಗಳ ಕಾಲ ನಡೆದ ವಿಚಾರಣೆ ಬಳಿಕ ನ್ಯಾಯಾಲಯ ತೀರ್ಪನ್ನು ದಾದಾಜಿ ಪರ ನೀಡಿತ್ತು. ಒಂದು ವೇಳೆ ಇದನ್ನು ಪಾಲಿಸದಿದ್ದರೆ ಜೈಲು ಸೇರಬೇಕಾಗುತ್ತದೆ ಎಂದು ಆದೇಶಿಸಿತ್ತು. ಆದರೆ ಇದ್ಯಾವುದಕ್ಕೂ ಹೆದರದ ರುಕ್ಮಾಬಾಯಿ ಜೈಲು ಸೇರುತ್ತೇನೆ ಆದರೆ ಗಂಡನ ಮನೆಗೆ ತೆರಳುವುದಿಲ್ಲ ಎಂದು ಹೇಳಿದರು. ಈ ಪ್ರಕರಣ ಅದಾಗಲೇ ರಾಷ್ಟ್ರಾಧ್ಯಂತ ಹಬ್ಬಿತ್ತು, ಕೇವಲ ಭಾರತ ಮಾತ್ರವಲ್ಲದೇ ಈ ಪ್ರಕರಣ ಇಂಗ್ಲೆಂಡ್‌ಗೂ ಹಬ್ಬಿತ್ತು.

ಹೀಗಾಗಿ ರಾಣಿ ವಿಕ್ಟೋರಿಯಾ ಸ್ವತಃ ಈ ಪ್ರಕರಣದ ವಿಚಾರಣೆಗೆ ಮುಂದಾಗಿ ಅಂತಿಮವಾಗಿ ನ್ಯಾಯಾಲಯದ ತೀರ್ಪನ್ನೇ ಬದಲಾಯಸಿದರು. ಅಲ್ಲದೇ ‘ವೈವಾಹಿಕ ಸಂಬಂಧಕ್ಕೆ ಒಪ್ಪಿಗೆಯ ವಯಸ್ಸು ಕಾಯ್ದೆ189 ’ (Age of Consent Act) ಕೂಡಾ ಜಾರಿಗೆ ತಂದರು.

https://vijaykarnataka.indiatimes.com/news/india/google-doodle-celebrates-rukhmabai-the-first-indian-female-physician-and-all-round-hero/articleshow/61749256.cms

ಇವುಗಳೂ ನಿಮಗಿಷ್ಟವಾಗಬಹುದು

ಅಳುತ್ತಿರುವ ಮಗುವನ್ನು ಸಂತೈಸುವುದು ಹೇಗೆ?

ಅಳುತ್ತಿರುವ ಮಗುವನ್ನು ಸಂತೈಸುವುದು ಹೇಗೆ?

Share this on WhatsApp ಅಳುತ್ತಿರುವ ಮಗುವನ್ನು ಸಂತೈಸುವುದು ಹೇಗೆ? ಪೋಷಕರು ತಮ್ಮ ಶಿಶುಗಳೊಂದಿಗೆ ಸಹಿಸಿಕೊಳ್ಳಬೇಕಾದ ಕಠಿಣ ವಿಷಯವೆಂದರೆ ಅಳು …

Loading...
Facebook Messenger for Wordpress