ಭರತೇಶ ವೈಭವ

ಭರತೇಶ ವೈಭವ’ ರತ್ನಾಕರವರ್ಣಿಯ ಮೇರು ಕೃತಿ. ಇದು ಸಾಂಗತ್ಯ ರೂಪದಲ್ಲಿದೆ. ಆದಿತೀರ್ಥಂಕರ ವೃಷಭನಾಥನ ಮಗ ಭರತ ಈ ಕಾವ್ಯದ ನಾಯಕ. ಈ ಕಾವ್ಯದಲ್ಲಿ ಭೋಗವಿಜಯ, ದಿಗ್ವಿಜಯ, ಯೋಗವಿಜಯ, ಅರ್ಕಕೀರ್ತಿವಿಜಯ,ಮೋಕ್ಷವಿಜಯ ಎನ್ನುವ ಐದು ಸಂಧಿಗಳಿದ್ದು ಒಟ್ಟು ಹತ್ತುಸಾವಿರ ಪದ್ಯಗಳಿವೆ.

ಆದಿತೀರ್ಥಂಕರರ ಹಿರಿಯ ಮಗ ಭರತ. ಈತನು ತನ್ನ ೯೬ಸಾವಿರ ರಾಣಿಯರ ಜೊತೆಗೆ ಭೋಗಜೀವನದಲ್ಲಿ ನಿರತನಾಗಿದ್ದ. ಈತನ ಆಯುಧಾಗಾರದಲ್ಲಿ ಪವಿತ್ರ ಚಕ್ರರತ್ನವೊಂದು ಉದಯಿಸಿ , ದಿಗ್ವಿಜಯಕ್ಕೆ ಹೊರಡಲು ಸೂಚಿಸುತ್ತದೆ. ಭರತ ವಿಜಯಯಾತ್ರೆ ಮಾಡುತ್ತ ತನ್ನ ತಮ್ಮ ಬಾಹುಬಲಿಯ ರಾಜಧಾನಿ ಪೌದನಪುರಕ್ಕೆ ಬರುತ್ತಾನೆ. ಚಕ್ರರತ್ನ ಅಲ್ಲಿ ನಿಲ್ಲುತ್ತದೆ. ಬಾಹುಬಲಿ ಅಣ್ಣನೊಡನೆ ಹೋರಾಡುತ್ತಾನೆ. ಭರತ ಬಾಹುಬಲಿಯ ಮನಸ್ಸನ್ನು ಒಲಿಸುತ್ತಾನೆ. ಬಾಹುಬಲಿ ವಿರಕ್ತನಾಗಿ ಜಿನದೀಕ್ಷೆ ಪಡೆದು ತಪಸ್ಸಿಗೆ ತೆರಳುತ್ತಾನೆ. ತನ್ನ ರಾಜಧಾನಿಗೆ ಮರಳಿದ ಭರತ ತಾನೂ ವಿರಕ್ತನಾಗಿ ತಪಸ್ಸಿಗೆ ತೆರಳಿ ಮೋಕ್ಷ ಸಂಪಾದಿಸುತ್ತಾನೆ.

ಇದಿಷ್ಟು ಕತೆಯ ತಿರುಳು.

ಕರ್ನಾಟಕದ ಶಿಲ್ಪಕಲಾವೈಭವನ್ನು ಸಾರುವ ಒಂದೇ ಶಿಲೆಯಲ್ಲಿ ಕೆತ್ತಲಾದ ಬಾಹುಬಲಿಯ ಮೂರ್ತಿ ಶ್ರವಣ ಬೆಳಗೊಳದಲ್ಲಿದೆ. ಹನ್ನೆರಡು ವರ್ಷಕ್ಕೊಮ್ಮೆ ಈ ಶಿಲಾಮೂರ್ತಿಗೆ ಮಜ್ಜನವಾಗುತ್ತದೆ.

ಶ್ರೇಯಾಂಕ

ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.

User Rating: 5 ( 1 votes)

ಇವುಗಳೂ ನಿಮಗಿಷ್ಟವಾಗಬಹುದು

Kumaravyasa

ಕುಮಾರವ್ಯಾಸ

Share this on WhatsApp ಕುಮಾರವ್ಯಾಸ ಕನ್ನಡದ ಅತ್ಯುನ್ನತ ಕವಿಗಳಲ್ಲಿ ಒಬ್ಬ. ಕನ್ನಡ ಸಾಹಿತ್ಯದ ದಿಗ್ಗಜರಲ್ಲಿ ಒಬ್ಬ ಎಂದರೆ ತಪ್ಪಾಗಲಾರದು. …

Loading...
Facebook Messenger for Wordpress