ಮುಖಪುಟ » ಇತರೆ » ಆರೋಗ್ಯ » ನಿಮ್ಮ ಜೀವನದಲ್ಲಿ ಯಾವುದೇ ರೋಗಗಳು ಬರಬಾರದು ಅಂದ್ರೆ ಜ್ಯೂಸ್ ಕುಡಿಯಿರಿ
neem juice

ನಿಮ್ಮ ಜೀವನದಲ್ಲಿ ಯಾವುದೇ ರೋಗಗಳು ಬರಬಾರದು ಅಂದ್ರೆ ಜ್ಯೂಸ್ ಕುಡಿಯಿರಿ

ವೇಗವಾಗಿ ಬೆಳೆಯುತ್ತಿರುವ ಪ್ರಪಂಚದಲ್ಲಿ ಖಾಯಿಲೆಗಳು ಕೂಡ ವೇಗವಾಗಿ ಬೆಳೆಯುತ್ತಾ ಇದೆ, ದಿನ ದಿನಕ್ಕೆ ಹೊಸ ಹೊಸ ಖಾಯಿಲೆ ಮನುಷ್ಯನಿಗೆ ಆವರಿಸುತ್ತಿದೆ, ಒಂದು ರೋಗಕ್ಕೆ ಮದ್ದು ಕಂಡು ಹಿಡಿಯುವಷ್ಟರಲ್ಲಿ ಮತ್ತೊಂದು ಖಾಯಿಲೆ ಶುರು ಬಂದಿರುತ್ತೆ, ಕೆಲವು ಜನಕ್ಕೆ ಅಂತು ಕೇಳಲೇ ಬೇಡಿ ಅವ್ರು ತಿಂಗಳಿಗೆ ಒಂದು ವಾರ ಆದರು ಆಸ್ಪತ್ರೆ ಸುತ್ತೋದು ಬಿಡಲ್ಲ ಏಕೆ ಅಂದ್ರೆ ಇದಕೆಲ್ಲ ಕಾರಣವು ಸಹ ನಾವೇ.

ನಾವು ತಿನ್ನುವ ಆಹಾರ, ಕಲಬೆರಕೆ, ನಾವು ಕುಡಿಯುವ ಗಾಳಿ ನೀರು ಎಲ್ಲವು ಅಶುದ್ದವಗಿದೆ, ನಾವು ನಮ್ಮ ದೇಹವನ್ನು ರಕ್ಷಾ ಕವಚದಂತೆ ಇಟ್ಕೊಬೇಕು ಅಂದ್ರೆ ನೀವು ಮನೆಯಲ್ಲಿ ಈ ಜ್ಯೂಸ್ ಮಾಡಿಕೊಂಡು ಕುಡಿಯಲೇಬೇಕು.

ನಿಮಗೆ ಒಂದು ವಿಷ್ಯ ಗೊತ್ತೇ ಪ್ರತಿ ನಿತ್ಯ ಸಿದ್ದಗಂಗೆ ಮಠದ ಮಹಾ ಸ್ವಾಮಿಗಳಾದ ಡಾ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳು ಈ ಜ್ಯೂಸ್ ಒಂದು ಲೋಟ ತಪ್ಪದೇ ಸೇವೆನೆ ಮಾಡ್ತಾರೆ.

ಸುಮಾರು 6000 ವರ್ಷದಿಂದ ಈ ಎಳೆಗಳ ಬಳಕೆ ಇದೆ, ಈ ಎಲೆಗಳನ್ನೇ ಉಪಯೋಗ ಮಾಡಿಕೊಂಡು ಇಂದು ಸೋಪು, ಪೇಸ್ಟ್, ಎಲ್ಲ ಬಂದಿದ್ರು ನಮ್ಮ ಪುರಾಣದಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ಇದರ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ.

ಇಷ್ಟೆಲ್ಲಾ ಲಾಭ ಇದೆ ಅಂದಮೇಲೆ ಆ ಎಲೆಗಳು ಆದರು ಯಾವುದು ಅದ್ರ ಮತ್ತಷ್ಟು ವಿಶೇಷ ಏನು ಒಮ್ಮೆ ತಿಳಿದುಕೊಳ್ಳೋಣ.

ಪ್ರತಿ ನಿತ್ಯ ಟೀ ಕಾಪಿ ಕುಡಿಯುವ ಬದಲು ಒಂದಿಷ್ಟು ಬೇವಿನ ಎಲೆ ತಗೊಂಡು ಅದನ್ನ ಬಿಸಿ ನೀರಲ್ಲಿ ಹಾಕಿ ಕಷಾಯ ಮಾಡಿಕೊಂಡು ಕುಡಿದರೆ ನಿಮ್ಮ ದೇಹದ ರೋಗ ನೋರೋಧಕ ಶಕ್ತಿ ವೇಗವಾಗಿ ಹೆಚ್ಚು ಮಾಡುತ್ತೆ, ನಿಮಗೆ ಇರೋ ಕಫಾ ಕೆಮ್ಮು ಮಾಯವಾಗುತ್ತೆ. ನಿಮ್ಮ ದೇಹಕ್ಕೆ ರೋಗ ಎಂದು ಬೇಗ ಬರೋದಿಲ್ಲ.

ಬೇವು ಕಹಿಯಾಗಿದೆ, ಇದು ಎಷ್ಟು ಕಹಿ ಇದ್ಯೋ ಸಿಹಿ ನಿಮ್ಮ ಬಾಳಲ್ಲಿ ನಿಮಗೆ ಸಿಗುತ್ತೆ. ನಿಮ್ಮ ದೇಹದಲ್ಲಿರುವ ವಿಷ ಮತ್ತು ಅನವಶ್ಯ ಕೊಬ್ಬು ಹೊರ ಹೋಗಲು ಸಹಾಯ ಮಾಡುತ್ತೆ.

ಈ ಬೇವಿನ ಎಲೆಯನ್ನು ಹಸುವಿನ ತುಪ್ಪದೊಂದಿಗೆ ಮಿಶ್ರಣ ಮಾಡಿ ಸೇವನೆ ಮಾಡಿದ್ರೆ ಯಕೃತ್, ಸಮಸ್ಯೆ ಬರೋದಿಲ್ಲ, ನಿಮ್ಮ ಮೂತ್ರಪಿಂಡಕ್ಕೆ ಏನೇ ಸಮಸ್ಯೆ ಇದ್ರೂ ಕಡಿಮೆ ಮಾಡುತ್ತೆ.

ಬೇವು ಸಕ್ಕರೆ ಮಟ್ಟವನ್ನು ಸ್ಥಿರವಾಗಿ ಇರಲು ಸಹಾಯ ಮಾಡುತ್ತೆ, ಪ್ರತಿ ನಿತ್ಯ ಒಂದಿಷ್ಟು ಬೇವಿನ ಜ್ಯೂಸ್ ಸೇವನೆ ಮಾಡುವವರಿಗೆ ಎಂದು ಕೂಡ ಸಕ್ಕರೆ ಖಾಯಿಲೆ ಬರೋದಿಲ್ಲ.

ಈಗಂತೂ ಎಲ್ಲರು ಸಿಕ್ಕ ಸಿಕ್ಕ ಮೌತ್ ವಾಷರ್ ಬಳಕೆ ಮಾಡೋದು ಹೆಚ್ಚಾಗಿದೆ, ಅದನ್ನ ಬಳಕೆ ಮಾಡಿ ಆರೋಗ್ಯ ಹಾಳು ಮಾಡಿಕೊಳ್ಳುವ ಬದಲು ಬೇವಿನ ನೀರನ್ನು ಮೌತ್ ವಾಶ್ ಆಗಿ ಮಾಡಿಕೊಂಡರೆ ನಿಮ್ಮ ಬಾಯಿ ಮತ್ತು ಹಲ್ಲುಗಳು ಸ್ವಚ ಆಗುವುದರ ಜೊತೆಗೆ ಬ್ಯಾಕ್ಟೀರಿಯ ತೊಲಗಿಸಿ ಹಲ್ಲುಗಳನ್ನು ಕೀಟಾನು ಗಳಿಂದ ಕಾಪಾಡುತ್ತದೆ.

ಪ್ರತಿ ನಿತ್ಯ ಸ್ನಾನ ಮಾಡುವಾಗ ಬಿಸಿ ನೀರಿಗೆ 10 ಅಥವ ಹೆಚ್ಚು ಬೇವಿನ ಎಲೆ ಹಾಕಿ ನಂತರ ಸ್ವಲ್ಪ ಸಮಯ ಬಿಟ್ಟು ಸ್ನಾನ ಮಾಡಿ, ನೀವು ಹೀಗೆ 3 ದಿನ ಮಾಡಿದ್ರೆ ಸಾಕು ನಿಮಗೆ ಪರಿಣಾಮ ತಿಳಿಯುತ್ತೆ, ಚರ್ಮ ರೋಗಗಳು ನಿಮ್ಮ ಹತ್ರ ಸುಳಿಯುವುದಿಲ್ಲ.

ಬೇವಿನ ಎಲೆಗಳನ್ನ ರುಬ್ಬಿ ಪೇಸ್ಟ್ ಮಾಡಿಕೊಂಡು ಮೊಡವೆ, ಸುಕ್ಕು ಇನ್ನಿತರೇ ಚರ್ಮಕ್ಕೆ ಸಂಭಂದಪಟ್ಟ ಖಾಯಿಲೆಗಳಿಗೆ ಉಪಯೋಗ ಮಾಡಿ ಶೀಘ್ರವಾಗಿ ನಿಮಗೆ ಗುಣವಾಗುವುದು.

 

ನಿಮ್ಮ ಜೀವನದಲ್ಲಿ ಯಾವುದೇ ರೋಗಗಳು ಬರಬಾರದು ಅಂದ್ರೆ ಜ್ಯೂಸ್ ಕುಡಿಯಿರಿ

ಇವುಗಳೂ ನಿಮಗಿಷ್ಟವಾಗಬಹುದು

ಹುಳಿ ಮಿಶ್ರಿತ ಹಣ್ಣಿನ ಸಿಪ್ಪೆಯ ಲೆಕ್ಕಕ್ಕೆ ಸಿಗದಷ್ಟು ಆರೋಗ್ಯ ಪ್ರಯೋಜನಗಳು

Share this on WhatsApp ಸಾಮಾನ್ಯವಾಗಿ ಕಿತ್ತಳೆ ಹಣ್ಣುಗಳನ್ನು ಸುಲಿದ ಬಳಿಕ ತಿರುಳನ್ನು ತಿಂದು ಸಿಪ್ಪೆಯನ್ನು ಮಾತ್ರ ನಾವು ಎಸೆದುಬಿಡುತ್ತೇವೆ. …

Loading...
Facebook Messenger for Wordpress