ಮುಖಪುಟ » ಇತರೆ » ನಿದ್ರೆ ಮಾಡುವಾಗ ಕೆಟ್ಟ ಕನಸು ಬೀಳುತ್ತಿದ್ದರೆ, ಇಗ್ನೋರ್‌ ಮಾಡಬೇಡಿ ಎಚ್ಚರವಿರಲಿ..
bad dream

ನಿದ್ರೆ ಮಾಡುವಾಗ ಕೆಟ್ಟ ಕನಸು ಬೀಳುತ್ತಿದ್ದರೆ, ಇಗ್ನೋರ್‌ ಮಾಡಬೇಡಿ ಎಚ್ಚರವಿರಲಿ..

ಒಂದು ವೇಳೆ ನೀವು ನಿದ್ರೆಯಲ್ಲಿ ಪದೇ ಪದೇ ಕನಸು ಕಾಣುತ್ತಿದ್ದರೆ, ಸರಿಯಾಗಿ ನಿದ್ರೆ ಮಾಡಲು ಸಾಧ್ಯವಾಗದೇ ಇದ್ದರೆ ನೀವು ಎಚ್ಚರದಿಂದ ಇರಲೇಬೇಕು. ಹೀಗೆ ಮುಂದುವರೆದರೆ ನೀವು ಪೋಸ್ಟ್‌ ಟ್ರಾಮ್ಯಾಟಿಕ್‌ ಸ್ಟ್ರೆಸ್‌ ಡಿಸಾರ್ಡರ್‌ಗೆ ಗುರಿಯಾಗಲಿದ್ದೀರಿ. ಈ ಕಾಯಿಲೆಯಿಂದ ನರಳುತ್ತಿರುವ ವ್ಯಕ್ತಿ ಬೇಗನೆ ವಿಚಲಿತರಾಗುತ್ತಾರೆ ಹಾಗೂ ಸಣ್ಣ ಸಣ್ಣ ವಿಷಯಕ್ಕೂ ಕೋಪ ಮಾಡಿಕೊಳ್ಳುತ್ತಾರೆ ಎಂದು ಮನೋವಿಜ್ಞಾನಿ ಡಾ. ಪ್ರಶಾಂತ್‌ ಶುಕ್ಲ ತಿಳಿಸಿದ್ದಾರೆ.

ಡಾ. ಶುಕ್ಲಾ ಅವರು ತಮ್ಮ ಸಂಶೋಧನೆಯ ಮೂಲಕ ಹೇಳಿರುವಂತೆ ಬಾಲ್ಯದಲ್ಲಿ ಮನಸ್ಸಿಗೆ ಏನಾದರು ಆಘಾತ ಉಂಟಾದರೆ ಅಥವಾ ಕುಟುಂಬದಲ್ಲಿ ಏನಾದರು ಆಘಾತ ಉಂಟಾದರೆ ಈ ಪಿಟಿಎಸ್‌‌ಡಿ (ಪೋಸ್ಟ್‌ ಟ್ರಾಮ್ಯಾಟಿಕ್‌ ಸ್ಟ್ರೆಸ್‌ ಡಿಸಾರ್ಡರ್‌) ಸಮಸ್ಯೆ ಕಾಡುತ್ತದೆ.

ಪಿಟಿಎಸ್‌‌ಡಿಯ ಲಕ್ಷಣಗಳು

  1. ಬೇಗನೆ ನಿದ್ರೆ ಬರುವುದು ಹಾಗೂ ನಿದ್ರೆಯಲ್ಲಿ ಕೆಟ್ಟ ಕನಸು ಬೀಳುವುದು.
  2. ಒಂದೇ ಘಟನೆ ಪದೇ ಪದೇ ಕಣ್ಣ ಮುಂದೆ ಬರುವುದು.
  3. ಮರೆತು ಬಿಡುವುದು ಅಥವಾ ಜ್ಞಾಪಕ ಶಕ್ತಿಯಲ್ಲಿ ತೊಂದರೆ ಉಂಟಾಗುವುದು.
  4. ಒಂದೇ ಕಡೆ ಧ್ಯಾನ ಕೇಂದ್ರೀಕರಿಸಲು ಸಾಧ್ಯವಾಗದೇ ಇರೋದು.
  5. ಬೇಗನೆ ಕೋಪಬರುವುದು, ಸಿಡಿ ಮಿಡಿಗೊಳ್ಳುವುದು ಹಾಗೂ ಹಿಂಸಾತ್ಮಕ ಮನೋಭಾವನೆ ಹೊಂದುವುದು.
  6. ಸಡನ್‌ ಆಗಿ ಹೆದರಿಕೆ ಉಂಟಾಗುವುದು.
  7. ಕಾರಣ ಇಲ್ಲದೇ ಮಾಂಸಖಂಡಗಳಲ್ಲಿ ನೋವು ಕಾಣಿಸಿಕೊಳ್ಳುವುದು.
  8. ಅತ್ಯಧಿಕವಾಗಿ ಭಾವುಕರಾಗುವುದು.

ಪರಿಹಾರ ಹೇಗೆ..?

ಈ ರೋಗ ಪೀಡಿತರ ಮನೋಸ್ಥಿತಿಯನ್ನು ಬೇಗನೆ ಸುಧಾರಿಸುವುದು ಮುಖ್ಯವಾಗಿದೆ. ಇದಕ್ಕಾಗಿ ಮೂಡ್‌ ಎಲಿವೇಟರ್‌ ಥೆರಪಿ ಚಿಕಿತ್ಸೆ ಮಾಡಿಕೊಳ್ಳಬೇಕು. ಇದಕ್ಕಾಗಿ ಹಿಪ್ನೋಟಿಸಂ ಸಹಾಯ ಪಡೆದುಕೊಳ್ಳುವುದು ಸಹ ಮುಖ್ಯ.

http://kannada.eenaduindia.com/

ಶ್ರೇಯಾಂಕ

ಮತ ನೀಡಿ, ಬಲಪಡಿಸಿ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ಹಂಚಿರಿ.

User Rating: Be the first one !

ಇವುಗಳೂ ನಿಮಗಿಷ್ಟವಾಗಬಹುದು

yakshagaana

ಅಪರೂಪವಾಗುತ್ತಿದೆ ಯಕ್ಷಗಾನದಲ್ಲಿ ತಟ್ಟಿ ವೀರಭದ್ರ ಪಾತ್ರ

Share this on WhatsAppಅವಿನಾಶ್‌ ಬೈಪಾಡಿತ್ತಾಯ: ಬಡಾಬಡಗು ತಿಟ್ಟಿನಲ್ಲಿ ಕಂಡು ಬರುವ ಮತ್ತು ಅಪರೂಪವಾಗಿರುವ ತಟ್ಟಿ ವೀರಭದ್ರ ವೇಷ ಮತ್ತೆ …

Loading...