ಮುಖಪುಟ » ಕಥೆಗಳು » ಇತರೆ » ಓದಿ ಮತ್ತೆ ಚಿಂತಿಸಿ ಸುಮ್ಮನೆ ಕೊರಗಬೇಡಿ ಜೀವನದಲ್ಲಿ ಅಳವಡಿಸಿ
home

ಓದಿ ಮತ್ತೆ ಚಿಂತಿಸಿ ಸುಮ್ಮನೆ ಕೊರಗಬೇಡಿ ಜೀವನದಲ್ಲಿ ಅಳವಡಿಸಿ

ಓದಿ ಮತ್ತೆ ಚಿಂತಿಸಿ ಸುಮ್ಮನೆ ಕೊರಗಬೇಡಿ ಜೀವನದಲ್ಲಿ ಅಳವಡಿಸಿ

ಗಂಡ ಹೆಂಡತಿ ಎರಡು ಮಕ್ಕಳಿರುವ ಕುಟುಂಬ…

ಒಂದು ದಿವಸ ದುಬೈ ಪೆಸ್ಟಿವಲ್ ಗೆ ಸುತ್ತಲು ಹೋದ ಈ ಕುಟುಂಬ ಗಂಟೆಗಟ್ಟಲೆ ಸುತ್ತಿ ಸಂತೋಷಿಸಿದರು…

ಅದರೆಡೆಯಲ್ಲಿ ಅಲ್ಲಿನ ನೂಕುನುಗ್ಗಲಿಗೆ ಅವರ ಮಗನನ್ನು ಕಾಣುವುದಿಲ್ಲ…
ಅವರು ಅವನನ್ನು ಹುಡುಕಿ ಹುಡುಕಿ ಸಿಗದಾದಾಗ ಅವನ ತಾಯಿ ಬೊಬ್ಬೆ ಹಾಕಲು ಸುರುಮಾಡಿದರು….

ಬೊಬ್ಬೆ ಕೇಳಿ ಸಾರ್ವಜನಿಕರು ಒಟ್ಟು ಗೂಡಿದರು ಪೋಲಿಸರಿಗೆ ತಿಳಿಸಿದರು
ಪೋಲಿಸರು ಗಂಟೆಗಟ್ಟಲೆ ಹುಡುಕಿ ಹೇಗಾದರೂ ಮಗನನ್ನು ಕಂಡುಹಿಡಿದರು ಅವನನ್ನು ತಂದೆ ತಾಯಿಗೆ ಮುಟ್ಟಿಸಿದರು

ಮಗನು ಸಿಕ್ಕಿದ ಕೂಡಲೇ ಹೆಂಡತಿ ಮತ್ತು ಮಕ್ಕಳನ್ನು ಪ್ಲಾಟಿಗೆ ಕಳುಹಿಸಿ ಗಂಡ ಟ್ರಾವಲ್ಸಿಗೆ ಹೋಗಿ ನಾಲ್ಕು ಟಿಕೆಟ್ ಬುಕ್ ಮಾಡುತ್ತಾರೆ….

ಟಿಕೆಟ್ ಕೈಯಲ್ಲಿ ಸಿಕ್ಕಿದಾಗ ಹೆಂಡತಿ ಆಶ್ಚರ್ಯದಿಂದ ಕೇಳಿದಳು

ಅಲ್ಲ ರೀ ನಿಮಗೇನಾಗಿದೆ…?

ಊರಿನಲ್ಲಿ ಯಾರಾದರೂ ಮರಣ ಹೊಂದಿದಾರಾ……? ಅವಸರದಿಂದ ಮನೆಗೆ ಹೋಗಲಿಕ್ಕೆ”……?

ಕೂಡಲೆ ಗಂಡ ಅಳುತ್ತಾ ಹೇಳಿದರು
“ಸ್ವಂತ ಮಗನನ್ನು ಎರಡು ಗಂಟೆ ಸಮಯಕ್ಕೆ ಕಾಣಾದಾದಾಗ ನೀನು ತುಂಬಾ ಬೇಜಾರು ಮಾಡಿದೆಯಲ್ಲ….?

“” ಹಾಗಾದರೆ ನಾನು ಕಳೆದ ಹತ್ತು ವರ್ಷದಿಂದ ನಿನ್ನ ಮಾತು ಕೇಳಿ ನಾನು ಊರಿಗೆ ಹೋಗದ ಕಾರಣ ನನ್ನನ್ನು ಒಂದು ಸಲ

ನೋಡದೆ ನನ್ನ ತಾಯಿ ಎಷ್ಟು ಸರ್ತಿ ಬೇಜಾರು ಮಾಡಿರಬಹುದು “….?
ಅದಕ್ಕೆ ಅವಳ ಪ್ರತಿಕ್ರಿಯೆ ಮೌನವಾಗಿತ್ತು……

ತಂದೆ ತಾಯಿಯ ಮನಸ್ಸಿಗೆ ಘಾಸಿ ಉಂಟು ಮಾಡಿ ಯಾರು ಅಧಿಕ ಕಾಲ ಸುಖವಾಗಿ ಜೀವಿಸಿಲ್ಲ

ಅಧಿಕ ಜನರೂ ತಂದೆ ತಾಯಿಯರಿಗೆ ಉಪದ್ರವ ಕೊಡುವ ಕಾರಣ ಹೆಂಡತಿಯ ತಲೆದಿಂಬು ಮಂತ್ರವಾಗಿದೆ….

ನೀವು ತಂದೆ ತಾಯಿಯರನ್ನು ಪ್ರೀತಿಸುವುದಾದರೆ ಬಾಧ್ಯತೆಗಳು ನೆರವೇರಿಸುದಾದರೆ ಅವರು ಜೀವಿಸಿರುವಾಗ ಮಾಡಿರಿ…
ಮರಣ ಹೊಂದಿದರೆ ಶತ್ರು ಕೂಡ ಅಳುತ್ತಾನೆ….

👏 ಇದನ್ನು ವರ್ಗಾವಣೆ (ಶೇರು)ಮಾಡುವುದಕ್ಕೆ ಜಿಪುಣತನ ತೋರದಿರಿ.

ಶ್ರೇಯಾಂಕ

ಮತ ನೀಡಿ, ಬಲಪಡಿಸಿ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ಹಂಚಿರಿ.

User Rating: 4.03 ( 10 votes)

ಇವುಗಳೂ ನಿಮಗಿಷ್ಟವಾಗಬಹುದು

police

ಕರ್ನಾಟಕ ಪೋಲೀಸ್ ಬಗ್ಗೆ ಸಾಮಾನ್ಯವಾಗಿ ಯಾರಿಗೂ ಗೊತ್ತಿಲ್ಲದಿರುವ 14 ಐತಿಹಾಸಿಕ ಸತ್ಯಗಳು

Share this on WhatsAppಕರ್ನಾಟಕಲ್ಲಿ ಪೊಲೀಸ್ ವ್ಯವಸ್ಥೆಗೆ ಸುಮಾರು 200ಕ್ಕೂ ಹೆಚ್ಚು ವರ್ಷದ ಇತಿಹಾಸ ಇದೆ. ಬೇರೆ ಬೇರೆ ಕಾಲಮಾನದಲ್ಲಿ …

Loading...
Facebook Messenger for Wordpress