ಮುಖಪುಟ » ಕಥೆಗಳು » ಒಂದು ಒಳ್ಳೆಯ ಎತ್ತಿನ ಕಥೆ

ಒಂದು ಒಳ್ಳೆಯ ಎತ್ತಿನ ಕಥೆ

ಒಂದು ಊರಿನಲ್ಲಿ ಗೋಪಯ್ಯ ಎಂಬ ಒಬ್ಬ ರೈತನ ಹತ್ತಿರ ಒಂದು ಎತ್ತು ಇತ್ತು… ಅದು ತುಂಬಾ ಬಲವಾಗಿತ್ತು. ಆದರೂ ಅದು ತುಂಬಾ ಶಾಂತವಾಗಿರುತ್ತಿತ್ತು. ಗೋಪಯ್ಯ ಯಾವ ಕೆಲಸ ಹೇಳಿದರೆ ಅದನ್ನು ತುಂಬಾ ಇಷ್ಟವಾಗಿ ಮಾಡುತ್ತಿತ್ತು.

ಗೋಪಯ್ಯ ಸಹ ಆ ಎತ್ತನ್ನು ತುಂಬಾ ಪ್ರೀತಿಯಿಂದ ಜಾಗರೂಕತೆಯಿದ ನೋಡಿಕೊಳ್ಳುತ್ತಿದ್ದ. ಅದನ್ನು ಹೊಡೆಯುವ ಮಾತೇಯಿಲ್ಲ. ಅದರ ಮೇಲೆ ನೊಣವನ್ನು ಸಹ ಕೂರಲು ಬಿಡುತ್ತಿರಲಿಲ್ಲ. ಆ ಎತ್ತಿನ ಬಗ್ಗೆ ಎಲ್ಲರ ಜೊತೆ ಹೆಚ್ಚಾಗಿ ಹೇಳುತ್ತಿದ್ದ. ಒಂದು ಬಾರಿ ಗೋಪಯ್ಯ ಊರಿನ ದೊಡ್ಡವನೊಬ್ಬನ ಜೊತೆ ಮಾತನಾಡುತ್ತಾ “ನನ್ನ ಎತ್ತು ನೂರು ಎತ್ತಿನ ಗಾಡಿಗಳನ್ನು ಒಂದೇ ಬಾರಿ ಎಳಿಯುತ್ತದೆ – ಬೇಕಾದರೆ ಸಾವಿರ ನಾಣ್ಯಗಳು ಪಂದ್ಯ” ಎಂದುಬಿಟ್ಟ. ಕೆಲವರು ಆ ಮಾತನ್ನು ಕೇಳಿ ಕೇಳದ ಹಾಗೆ ಸುಮ್ಮನಾದರು ಆದರೆ, ಗೋಪನ್ನ ಎಂದರೆ ಆಗದಿರುವವರು ಕೆಲವರು ಜೊತೆ ಸೇರಿ, ”ಪಂದ್ಯ ಎಂದರೆ ಪಂದ್ಯ” ಎಂದರು. ಪಂದ್ಯದ ದಿನ ಬಂದಿತು. ಊರಿನಲ್ಲಿದ್ದವರು ನೂರು ಎತ್ತಿನ ಗಾಡಿಗಳನ್ನು ಸಾಲಾಗಿ ಒಂದರ ಹಿಂದೆ ಒಂದರಂತೆ ಕಟ್ಟಿದರು. ಗೋಪಯ್ಯ ಎತ್ತನ್ನು ತಂದು ಮೊದಲ ಗಾಡಿಗೆ ಕಟ್ಟಿದನು. ಎತ್ತಿಗೆ ಇದೆಲ್ಲಾ ಹೊಸದಾಗಿತ್ತು. ಆದರು ಯಜಮಾನಿ ತಂದು ನಿಲ್ಲಿಸಿದ್ದರಿಂದ, ಹಾಗೆ ಸುಮ್ಮನೆ ನಿಂತಿತ್ತು. ಎಲ್ಲಾರು ‘ಎಳೀ ಎಳೀ’ ಎಂದರು. ಆದರೆ ಎತ್ತು ಮಾತ್ರ ಕದಲಲಿಲ್ಲ. ಗೋಪಯ್ಯ ಏನನ್ನು ಹೇಳುತ್ತಾನೆ ಎಂದು ನೊಡುತ್ತಾ ಹಾಗೆಯೇ ನಿಂತಿತ್ತು. ಗೋಪಯ್ಯನಿಗೆ ತಲೆ ತಗ್ಗಿಸುವಂತಾಯಿತು.

jootoor dynohost

‘ಎತ್ತು ಬಂಡಿಗಳನ್ನು ಯಾಕೆ ಎಳೆಯುತ್ತಿಲ್ಲಾ’? ಎಂದು ಕೋಪ ಬಂತು – ಅದೇ ಕೋಪದಲ್ಲಿ ಆತನು ಅದಕ್ಕೆ ಎಳೆಯಲೆಂದು ಹೇಳಲಿಲ್ಲ ಅದು ಆತನಿಗೆ ನೆನಪಿಗೆಗೆ ಬರಲಿಲ್ಲ. ಇದಲ್ಲದೆ, ಅದು ‘ ನನ್ನ ಮಾನ ತೆಗೆಯುತ್ತಿದೆ’ ಎಂದು ಕೊಪಗೊಂಡನು:

ಸಾವಿರ ನಾಣ್ಯಗಳನ್ನು… ಕಳೆದುಕೊಂಡ! ಸಾವಿರ ನಾಣ್ಯಗಳನ್ನು!! ಯಾವತ್ತಾದರು ನೋಡಿದ್ದಿಯ? ಅಷ್ಟು ತಾಂಡಿ ತಿನ್ನುವುದು ಏತಕ್ಕೆ. ಈ ಮಾತ್ರ ಎಳೆಯಲಾಗುವುದಿಲ್ವ ?!” ಎಂದು ಬಯ್ಯುತ್ತಿದ್ದಾಗ, ಎಲ್ಲಾ ರೈತರ ಹಾಗೆ ಆತನು ಸಹ ಹೊಡೆಯಲು ಚಡಿ ಕೋಲಿನಿಂದ ಸ್ಟಾರ್ಟ್ ಮಾಡಿದ. ಗೋಪಯ್ಯ ಅದಕ್ಕೂ ಮುಂಚೆ ಎಂದು ಅದರ ಜೊತೆ ಕೋಪವಾಗಿ ಮಾತನಾಡರಿಲಿಲ್ಲ‌. ಯಾವತ್ತು ಅದನ್ನು ಬಯ್ಯುತ್ತಿರಲಿಲ್ಲ; ಒಂದು ಹೊಡೆತವನ್ನು ಹೊಡೆದರಲಿಲ್ಲ! ಮತ್ತೇ ಈಗ ಆತ ಅಷ್ಟು ಕೋಪವಾಗಿ ಕಿರುಚುತ್ತಿರುವುದು, ಇದಲ್ಲದೆ ಚಾಟಿಯಿಂದ ಹೊಡೆಯುತ್ತಿರುವುದು ಎತ್ತಿಗೆ ಹಿಡಿಸಲಿಲ್ಲ. ಆದ್ದರಿಂದ ಅದು ಪೂರ್ತಿಯಾಗಿ ಹಠಕ್ಕೆ ಬಿದ್ದಿತು – ಒಂದು ಹೆಜ್ಜೇಕೂಡ ಹಾಕಲಿಲ್ಲ. ಅದನ್ನು ಹೊಡೆದು ಹೊಡೆದು ಸುಸ್ತಾಗಿ ಹೋದ. ಗೋಪಯ್ಯ ಜನರ ಮುಂದೆ ಸೋಲನ್ನು ಅಂಗೀಕರಿಸಬೇಕಾಯಿತು‌. ಹಣದ ಜೊತೆ ಮಾನ ಸಹ ಕಳೆದುಕೊಂಡ. ತಲೆ ತಗ್ಗಿಸಿ ಮನೆ ಸೇರಿಕೊಂಡ ಆತನು.

” ಹಿಂದೆ ಅವಸರ ಬಂದಾಗ ತುಂಬಾ ಸಲ ಈ ಎತ್ತು ನೂರು ಎತ್ತಿನ ಬಂಡಿಗಳನ್ನು ಎಳೆದಿತ್ತಲ್ವಾ, ಮತ್ತೆ ಈಗ ಯಾಕೆ ಎಳೆಯಲಿಲ್ಲ?!” ಎಂಬ ಯೋಚನೆ ಬರಲಿಲ್ಲ, ಕೋಪದಲ್ಲಿದ್ದ ಗೋಪಯ್ಯನಿಗೆ, ಆದರೆ ಅದೇ ದಿನ ಸಾಯಂಕಾಲ ನೋಡುವಷ್ಟರಲ್ಲಿ, ಎತ್ತು ಮೇಯದೇ – ಸ್ಥಬ್ದವಾಗಿ ನಿಂತಿತ್ತು. ಅದರ ಮೈ ತುಂಬಾ ಚಾಟಿ ಏಟಿನ ಬಾಸುಂಡೆಗಳು ಸುತ್ತಲು ನೊಣಗಳು, ಅದನ್ನು ಓಡಿಸಲೂ ಇಲ್ಲ. ಗೋಪಯ್ಯನನ್ನು ನೋಡಿ ಕಣ್ಣೀರು ಹಾಕುತ್ತಿತ್ತು! ಅದನ್ನು ನೊಡಿದ ತಕ್ಷಣ ಗೋಪಯ್ಯನ ಹೃದಯ ನೀರಾಯಿತು. ಅದರ ಗಾಯಗಳಿಗೆ ಮುಲಾಮನ್ನು ಹಚ್ಚುತ್ತಾ ಆತನಿಗೆ ತನ್ನ ತಪ್ಪಿನ ಅರಿವಾಯಿತು:

‘ಈ ಮೂಕ ಜಂತುವಿಗೆ ಹೃದಯವಿದೆ. ತನ್ನ ಮಾತು ಕೇಳಲಿಲ್ಲವೆಂದು ಅನಗತ್ಯವಾಗಿ, ಕ್ರೂರವಾಗಿ ಶಿಕ್ಷಿಸಿದನು. ಮೃದುವಾದ ಅದರ ಮನಸ್ಸಿಗೆ ಗಾಯ ಮಾಡಿದ್ದನು!’ ಗೋಪಯ್ಯ ಕಣ್ಣೀರಿನಿಂದ ಅದಕ್ಕೆ ಕ್ಷಮೆಯನ್ನು ಹೇಳಿಕೊಂಡ, ಸವರಿ, ಮುದ್ದುಮಾಡಿ, ಹತ್ತಿರ ಮಾಡಿಕೊಂಡ. ಆತನ ಮನಸ್ಸನ್ನು ಗ್ರಹಿಸಿದ ಎತ್ತು ಸಹ ಸ್ವಲ್ಪ ಸಮಾಧಾನಗೊಂಡಿತು. ತಿಳುವಳಿಕೆ ತಂದುಕೊಂಡ ಗೋಪಯ್ಯ ಮಾರನೆಯ ದಿನ ಮತ್ತೇ ಗ್ರಾಮಸ್ಥರ ಹತ್ತಿರ ಪಂದ್ಯಕ್ಕೆ ಕರೆದನು. ‘ಈ ಬಾರಿ ಪಂದ್ಯ ಎರಡು ಸಾವಿರ ನಾಣ್ಯಗಳು’ ಎಂದರು ಗ್ರಾಮಸ್ತರು. ಈ ಬಾರಿ ಗೋಪಯ್ಯ ಎತ್ತನ್ನು ಹೊಡೆಯಲಿಲ್ಲ, ಕೊನೆಗೆ ಬಯ್ಯಲಿಲ್ಲ. ಪ್ರೀತಿಯಿಂದ ಬೆನ್ನು ಸವರಿ, ‘ ಎಳಿಯೋ!’ ಎಂದ ತಕ್ಷಣ, ಎತ್ತು ನೂರು ಎತ್ತಿನ ಗಾಡಿಗಳನ್ನು ಎಳೆದುಕೊಂಡು ಮುಂದೆಗೆ ಓಡಿತು! ಗೋಪಯ್ಯ ಪಂದ್ಯವನ್ನು ಗೆದ್ದಿದ್ದೇ ಅಲ್ಲ; ಜೀವನದಲ್ಲಿ ಪರಿಣಾಮಕಾರಿ ಪಾಠ ಕಲಿತನು – ‘ಎಷ್ಟು ತೊಂದರೆ, ಎಷ್ಟು ಕೋಪವಿದ್ದರೂ ಸಹ, ಮನಸ್ಸುಗಳನ್ನು ಗಾಯ ಮಾಡಬಾರದೆಂದು’

ಒಳ್ಳೆಯ ಈ ಕಥೆಯನ್ನು ಮತ್ತೊಂದು ಸಲ ಓದಬಲ್ಲಿರಿ ಎಂದು ಕೋರಿಕೊಳ್ಳುತ್ತಾ..

ಜಾಗರೂಕತೆಯಾಗಿ ನೋಡಿದರೆ, ಚಿಕ್ಕ ಮಕ್ಕಳು ಸಹ ಅನಂತವಾದ ಶಕ್ತಿಯನ್ನು ಹೊಂದಿರುತ್ತಾರೆ ಎನ್ನುವುದು. ಪ್ರೀತಿ , ಆಪ್ಯಾಯತೆ ಅವರು ತಮ್ಮ ಈ ಶಕ್ತಿಯನ್ನು ವಾಸ್ತವವನ್ನಾಗಿ ಮಾಡಲು ಸಹಾಯ ಪಡುತ್ತದೆ. ಒಳ್ಳೆಯ ಉಪಾದ್ಯಾಯರು, ಎಲ್ಲಾ ಮಕ್ಕಳ ಹೃದಯಗಳನ್ನು ಅರ್ಥ ಮಾಡಿಕೊಂಡು ಮೃದುವಾದ ಮನಸ್ಸುಗಳ ಜೊತೆ ಮೃದುವಾಗಿ ಪ್ರವರ್ತಿಸಬೇಕು.

ಇವುಗಳೂ ನಿಮಗಿಷ್ಟವಾಗಬಹುದು

sister

3 ಸಹೋದರರು ಹಾಗೂ ಒಂದು ಸಹೋದರಿ

Share this on WhatsApp ಒಂದು ಮನೆಯಲ್ಲಿ 3 ಸಹೋದರರು ಹಾಗೂ ಒಂದು ಸಹೋದರಿ ಇದ್ದಳು, ದೊಡ್ಡವನು ಮತ್ತು ಕಿರಿಯವನು …

Loading...
Facebook Messenger for Wordpress